ಅಬ್ಬಾ ನೋಡಿ

 

ನಾವು ಅದೆಷ್ಟೆ ಆಧುನಿಕತೆಯತ್ತ ಸಾಗಿದರೂ ಕೆಲವೊಂದು ನಂಬಿಕೆಗಳು ಮಾತ್ರ ಈಗಲೂ ಇವೆ. ಹಳೆಯ ಕಾಲದಿಂದಲೂ ನಂಬಿಕೊಂಡು ಬಂದಿರುವ, ನಡೆದುಕೊಂಡು ಬಂದಿರುವ ಅನೇಕ ಸಂಪ್ರದಾಯ, ಅದೇ ರೀತಿ ಕೆಲವೊಂದು ನಂಬಿಕೆಗಳು ಚಾಲ್ತಿಯಲ್ಲಿವೆ. ಒಂದು ಮನೆಯಲ್ಲಿ ವಯಸ್ಸಾದ ಅಜ್ಜ-ಅಜ್ಜಿಯರು ಇದ್ದರೆ ಅಲ್ಲಿ ಹೆಚ್ಚಾಗಿ ಕೆಲವೊಂದು ನಂಬಿಕೆಗಳನ್ನು ಅನುಸರಿಸಿಕೊಂಡು ಬರುತ್ತಾರೆ. ಅದೇ ರೀತಿ ದೇಹದ ಮೇಲಿರುವ ಮಚ್ಚೆಯ ಬಗ್ಗೆಯೂ ಕೆಲವೊಂದು ನಂಬಿಕೆ ಇದೆ. ದೇಹದ ಯಾವ್ಯಾವ ಭಾಗದಲ್ಲಿ ಮಚ್ಚೆ ಇದ್ದರೆ ಅದು ಏನನ್ನು ಸೂಚಿಸುತ್ತದೆ ಅನ್ನುವುದನ್ನು ನಾವಿವತ್ತು ನಿಮಗೆ ಹೇಳುತ್ತೇವೆ.

ಮನುಷ್ಯನ ದೇಹದಲ್ಲಿ ಎಲ್ಲಾದರೂ ಒಂದು ಭಾಗದಲ್ಲಿ ಮಚ್ಚೆ ಇದ್ದೇ ಇರುತ್ತದೆ. ಇದರ ಸೂಚನೆ ಏನು ಅನ್ನುವುದು ಸರಿಯಾಗಿ ಗೊತ್ತಿಲ್ಲದೆ ಹೋದರೂ ಆ ಮಚ್ಚೆಗಳ ಬಗ್ಗೆ ಕೆಲವೊಂದು ಅರ್ಥಗಳನ್ನು ಹೇಳಲಾಗುತ್ತದೆ. ಕೆಲವರ ನಾಲಗೆ ಮೇಲೆ ಮಚ್ಚೆ ಇರುತ್ತದೆ, ಹಾಗೆ ಮಚ್ಚೆ ಇದ್ದವರು ಏನಾದರೂ ಹೇಳಿದರೆ ಅದು ನಿಜವಾಗುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲೂ ಮಚ್ಚೆ ನಾಲಗೆಯ ತುದಿಯಲ್ಲೇ ಇದ್ದರೆ ಅವರು ಒಂದು ಬಾರಿ ಏನಾದರೂ ನುಡಿದರೆ ಮುಗಿದೇ ಹೋಯ್ತು.