ಅಬ್ಬಾ ಮದುವೆ ಆಗಲಿದ್ದಾರಾ ಈ ಜೋಡಿ ನೋಡಿ!

 

ಸಿನಿಮಾ ಕ್ಷೇತ್ರದಲ್ಲಿ ನಟರ ಬಗ್ಗೆ ಅದೇ ರೀತಿ ನಟಿಯರ ಬಗ್ಗೆ ಹತ್ತು ಹಲವಾರು ಗಾಸಿಪ್ ಗಳು ಹರಡುವುದು ಸಾಮಾನ್ಯ. ನಟ- ನಟಿಯರ ಲವ್ ಬಗ್ಗೆ, ಅಫೇರ್ ಬಗೆ, ಫ್ರೆಂಡ್ ಶಿಪ್ ಬಗ್ಗೆ ಸದಾ ಸುದ್ದಿಯಾಗುತ್ತಲೇ ಇರುತ್ತದೆ. ಅದು ಎಷ್ಟು ನಿಜ ಅಥವಾ ಎಷ್ಟು ಸುಳ್ಳು ಅನ್ನುವುದು ಗೊತ್ತಾಗುವ ಹೊತ್ತಿಗೆ ಸೋಶಿಯಲ್ ಮೀಡಿಯಾ ಪೂರ್ತಿ ಅವರ ಸುದ್ದಿ ಹರಡಿ ಹಿಂಡಿ ಹಿಪ್ಪೆಯಾಗಿರುತ್ತದೆ. ಅದಕ್ಕೆ ಒಂದಷ್ಟು ರೆಕ್ಕೆ ಪುಕ್ಕಗಳೂ ಬಂದಿರುತ್ತದೆ. ಇದೀಗ ಇದೇ ರೀತಿ ಗರಂ ಗರಂ ಸುದ್ದಿಯಲ್ಲಿರೋದು ಯಾರು ಗೊತ್ತಾ, ಬಾಕ್ಸಾಫೀಸ್ ಸುಲ್ತಾನ್ ನಟ ಸಲ್ಮಾನ್ ಖಾನೆ. ಹೌದು ಸಲ್ಲು ಭಾಯಿ ಒಂದು ಫೇಮಸ್ ನಟಿಯ ಜೊತೆ ಲವ್ವಲ್ಲಿ ಬಿದ್ದಿದ್ದಾರೆ ಅನ್ನುವ ಸುದ್ದಿ ಜೋರಾಗಿ ಹರಡುತ್ತಿದೆ.

ಆ ನಟಿಯ ಹೆಸರು ಸಮಂತಾ. ಏನು ಸಮಂತಾನಾ? ನಾಗ ಚೈತನ್ಯ ಜೊತೆ ವಿಚ್ಛೇದನ ಕೊಟ್ಟ ಸಮಂತಾ ಜೊತೆ ಸಲ್ಲು ಭಾಯಿ ಲವ್ವಲ್ಲಿ ಬಿದ್ದಿದ್ದಾರಾ ಎಂದು ಹಲವರಿಗೆ ಶಾಕ್ ಆಗಬಹುದು. ಆದರೆ ನಾವು ಹೇಳುತ್ತಿರುವುದು ಆ ಸಮಂತಾ ಅಲ್ಲ, ಬದಲಾಗಿ ಅಮೆರಿಕನ್ ಮೂಲದ ನಟಿ ಸಮಂತಾ ಲಾಕ್ ವುಡ್. ಹೌದು, ಸಮಂತಾ ಲಾಕ್ ವುಡ್ ಹಾಗೂ ಸಲ್ಮಾನ್ ಖಾನ್ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಸಲ್ಮಾನ್ ಖಾನ್ ಜೊತೆ ಈ ರೀತಿ ಹುಡುಗಿಯರ ಹೆಸರು ತಳುಕು ಹಾಕಿಕೊಳ್ಳುವುದು ಇದೇನು ಹೊಸದಲ್ಲ.

ಅಲ್ಲಿ ಸಲ್ಲು ಜೊತೆ ತುಂಬಾ ಅನ್ಯೂನ್ಯವಾಗಿದ್ದರು. ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದ್ದ ಪಾರ್ಟಿಯಲ್ಲಿ ಸಮಂತಾ ಕಂಡಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ. ಈ ಬಗ್ಗೆ ಸಮಂತಾ ಮಾತನಾಡಿದ್ದು, ಸಲ್ಮಾನ್ ಅವರು ತುಂಬಾ ಒಳ್ಳೆಯವರು, ಅವರ ಸುಲ್ತಾನ್ ಸಿನಿಮಾ ನನಗೆ ತುಂಬಾ ಇಷ್ಟ, ನಾನು ಹೃತಿಕ್ ರೋಷನ್ ರನ್ನು ಕೂಡ ಭೇಟಿಯಾಗಿದ್ದೇನೆ, ಅದೇ ರೀತಿ ಸಲ್ಲು ಅವರನ್ನು ಭೇತಿಯಾಗಿದ್ದೇನೆ, ಆದರೆ ಈ ರೀತಿ ನಮ್ಮಿಬ್ಬರ ಬಗ್ಗೆ ಯಾಕೆ ಮಾತನಾಡುತ್ತಾರೆ ಎಂದು ಗೊತ್ತಾಗುತ್ತಿಲ್ಲ ಅಂದಿದ್ದಾರೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.