ನೀವು ಬಟ್ಟೆ ಧರಿಸಿದ್ದೀರಿ ಎಂದು ನಾಗಾಸಾಧುವನ್ನು ಕೇಳಿದ ಪತ್ರಕರ್ತೆ : ಬಟ್ಟೆ ಕಳಚಿದ ಸಾಧು, .... ನೋಡಿ ಓಡಿ ಹೋದ ಪತ್ರಕರ್ತೆ

 ಪ್ರತಕರ್ತರಿಗೂ ಸಂವೇದನೆಗಳಿರಬೇಕು.ಯಾವ ಪ್ರಶ್ನೆಯನ್ನು ಎಲ್ಲಿ ಕೇಳಬೇಕು ಅನ್ನುವ ಪರಿಜ್ಞಾನವಿರಬೇಕು. ಒಂದು ವೇಳೆ ಎಲ್ಲಿ ಯಾವ ಪ್ರಶ್ನೆ ಕೇಳಬೇಕು ಅನ್ನುವ ಅರಿವಿಲ್ಲದಿದ್ದರೆ ಎಡವಟ್ಟುಗಳಾಗುತ್ತದೆ.ಈಗ ಮರಣ ಸಂಭವಿಸಿದ ಮನೆಗಳಿಗೆ ಹೋಗುವ ಪತ್ರಕರ್ತರು ಕಣ್ಣೀರಿಡುತ್ತಿರುವವರ ಮೂತಿಗೆ ಲೋಗೋ ಹಿಡಿಯುವ ಮೂಲಕ ಸಂವೇದನೆಯಲ್ಲಿ ಕಳೆದುಕೊಂಡಾಗಿದೆ.

ಅಗ್ಗ್ರೆಸ್ಸಿವ್ ಪತ್ರಕರ್ತರು ಎಂದೆನಿಸಿಕೊಳ್ಳಲು ಭರದಲ್ಲಿ ಬಾಯಿ ಬಂದ ಪ್ರಶ್ನೆಯನ್ನು ಕೇಳಿ ವೀಕ್ಷಕರಿಂದ ಛೀ..ಥೂ ಎಂದು ಉಗಿಸಿಕೊಳ್ಳುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲೂ ಹೀಗೆ ಆಗಿದೆ. ಸಾಧು ಸಂತರಿಗೆ ಅನುಚಿತ ಪ್ರಶ್ನೆಗಳನ್ನು ಕೇಳಬಾರದೆಂಬ ನಂಬಿಕೆ ಇದ್ದರೂ ಅದನ್ನು ಮೀರಿದ ರಾಷ್ಟ್ರೀಯ ಸುದ್ದಿವಾಹಿನಿಯ ಪತ್ರಕರ್ತೆ ( aaj tak) ನಾಗಾಸಾಧುವೊಬ್ಬರ ಬಳಿ ಮಾತನಾಡುವಾಗ ಎಚ್ಚರ ತಪ್ಪಿದ್ದಾರೆ.

ಸಾಮಾನ್ಯರಿಗೆ ಪ್ರಶ್ನೆ ಕೇಳುವ ರೀತಿಯಲ್ಲಿ ನಾಗಾಸಾಧುವಿಗೂ ಪ್ರಶ್ನೆ ಕೇಳಿ ತಕ್ಕ ಪ್ರತ್ಯುತ್ತರ ಪಡೆದಿದ್ದಾರೆ. ಸಾಮಾನ್ಯವಾಗಿ ನಾಗಾ ಸಾಧುಗಳು ಯಾವುದೇ ವಸ್ತ್ರ ಧರಿಸುವುದಿಲ್ಲ, ಕೇವಲ ಭಸ್ಮ ಧಾರಣೆ ಮಾಡಿಕೊಳ್ಳುತ್ತಾರೆ. ಆದರೆ ಕುಂಭಮೇಳಕ್ಕೆ ಆಗಮಿಸಿದ್ದ ನಾಗಾಸಾಧು ಒಬ್ಬರು ವಸ್ತ್ರ ಧರಿಸಿ ನಡೆಯುತ್ತಿದ್ದರು.