ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ದೊಡ್ಡ ಆಘಾತವೊಂದು ಸಂಭವಿಸಿದೆ. ಅವರು ತಮ್ಮ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ ಎಂಬ ಸುದ್ದಿ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಹಾಗಾದರೆ ದರ್ಶನ್ ಅವರಿಗೆ ಕಾಲು ಮುರಿದಿರುವುದು ಸತ್ಯವೇ? ಆ ಅಪಘಾತವಾದರೂ ಹೇಗೆ ಸಂಭವಿಸಿತು? ನೋಡಿ ಇಲ್ಲಿದೆ ಸಂಪೂರ್ಣ ಮಾಹಿತಿ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿಯಾಗಿ ಸದ್ದು ಮಾಡಿತ್ತು. ಲಾಕ್ ಡೌನ್ ಲಿಪ್ಟ್ ಆದ ನಂತರ ಬಿಡುಗಡೆಯಾದ ದೊಡ್ಡ ಬಜೆಟ್ ನ ಸಿನಿಮಾ ಇದು. ಅಷ್ಟೇ ನಿರೀಕ್ಷೆ ಇಟ್ಟುಕೊಂಡಿದ್ದ ಚಿತ್ರ ಕೂಡ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು.
ಇದೆಲ್ಲವೂ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಮ್ಮೆ ಘೋಷಣೆಯಾಗಿ ಬಿಟ್ಟಿತು. ನಟ ದರ್ಶನ್ ಅವರು ಸಾಮಾನ್ಯವಾಗಿ ಒಂದಲ್ಲಾ ಒಂದು ಕಾರ್ಯ ಮಾಡುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ಅವರು ಸುಮ್ಮನೆ ಕೂರುವ ವ್ಯಕ್ತಿಯೇ ಅಲ್ಲ. ಹಾಗಾಗಿ ತಮ್ಮ ಸ್ನೇಹಿತರನ್ನು ಕರೆದುಕೊಂಡು ಕಾಡಿಗೆ ಪ್ರವಾಸ ಹೋದ ಬಳಿಕ ತಮ್ಮ ಫಾರಂ ಹೌಸ್ಗೆ ತೆರಳಿದರು.
ಫಾರಂ ಹೌಸ್ ಗೆ ಹೋದ ನಂತರವೇ ರಾಜ್ಯದಲ್ಲಿ ಲಾಕ್ ಡೌನ್ ಫಿಕ್ಸ್ ಆಯಿತು. ಹಾಗಾಗಿ ಅವರು ತಮ್ಮ ಕುಟುಂಬದ ಜೊತೆಗೆ ಮೈಸೂರು ಬಳಿ ಇರುವ ತಮ್ಮ ಫಾರಂ ಹೌಸ್ ನಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದರು. ಜೊತೆಗೆ ಸಮಾಜ ಸೇವೆಯೂ ಸಾಗುತ್ತಲೇ ಇತ್ತು. ಆದರೆ ಇದೀಗ ಅವರ ಕಾಲಿಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಅವರು ಫಾರಂ ಹೌಸ್ ಗೆ ಹೋದ ನಂತರ ಅವರ ಚಟುವಟಿಕೆಗಳಿಗೆ ಸ್ವಲ್ಪ ಬ್ರೇಕ್ ಬಿದ್ದಿದೆ ಎನ್ನಲಾಗಿದೆ. ಫಾರಂ ಹೌಸ್ ನಲ್ಲಿ ಇದ್ದ ವೇಳೆ ಅವರು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೆಟಿ ನೀಡಿದ್ದರು. ಆ ವೇಳೆ ಸ್ವಾಮೀಜಿ ನೆನಪಿಗಾಗಿ ದರ್ಶನ್ ಅವರಿಗೆ ಗಿಳಿಯೊಂದನ್ನು ಉಡುಗೊರೆಯಾಗಿ ನೀಡಿದ್ದರು.
ಈ ವೇಳೆ ತೆಗೆದ ಫೋಟೊದಲ್ಲಿ ದರ್ಶನ್ ಅವರ ಎಡ ಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡಿರುವುದು ಬೆಳಕಿಗೆ ಬಂದಿದ್ದು, ಆ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಮೊದಲು ಅವರು ಮೈಸೂರಿನಿಂದ ಬೆಂಗಳೂರಿಗೆ ತೆರಳುವ ವೇಳೆ ಅಪಘಾತ ಸಂಭವಿಸಿತ್ತು. ಆಗ ಮೊಳಕೈಗೆ ಪೆಟ್ಟಾಗಿ ಸಾಕಷ್ಟು ದಿನಗಳ ಆ ನೋವನ್ನು ಅನುಭವಿಸಬೇಕಾಗಿತ್ತು. ಆದರೆ ಈ ಬಾರಿ ಕಾಲಿಗೆ ಮಾಡಿಕೊಂಡಿರುವ ಗಾಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ದರ್ಶನ್ ಅವರ ಕಾಲಿಗೆ ಗಾಯವಾಗಿದೆ ಎಂಬುದು ಮಾತ್ರ ಎಲ್ಲೆಡೆ ವೈರಲ್ ಆಗಿತ್ತು.