ಕನ್ನಡದ ಕಿರುತೆರೆಯ ಮೇಲೆ ಕಲರ್ಸ್ ವಾಹಿನಿಯ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮೂಲಕ ಮಿಂಚಿದ್ದ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಅವರು ಇತ್ತೀಚೆಗೆ ವಿವಾಹ ಮಾಡಿಕೊಂಡರು. ಅವರು ಚಂದನಾ ಅವರ ನಿವಾಸದಲ್ಲೇ ಅತ್ಯಂತ ಸರಳವಾಗಿ ಹಾಗೂ ಕೊರೊನಾದಿಂದಾಗಿ ಸರ್ಕಾರ ಹೇರಿದ್ದ ಎಲ್ಲಾ ನಿಯಮಗಳಿಗೆ ಬದ್ಧವಾಗಿ ತಮ್ಮ ವಿವಾಹವನ್ನು ಮಾಡಿಕೊಂಡರು.
ಅಲ್ಲದೇ ವಿವಾಹದ ಸಂದರ್ಭದಲ್ಲಿ ಅವರು ಮಾಸ್ಕ್ ಧರಿಸಿಯೇ ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ಎಲ್ಲರಿಗೂ ಮಾದರಿಯಾಗಿತ್ತು. ಈ ತಾರಾ ಜೋಡಿ ಪ್ರೀತಿಸಿ ಮದುವೆಯಾಗಿದ್ದು ಕೂಡ ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಆದರೆ ಕವಿತಾ ಅವರು ವಿವಾಹವಾಗಿ ಎರಡನೇ ದಿನವೇ ತನ್ನ ತಾಯಿಗೆ ಕರೆ ಮಾಡಿ, ತನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದಾರೆ. ಹಾಗಾಗಿ ಸಹಜವಾಗಿ ಚಂದನ್ ಅವರಿಗೂ ಕವಿತಾ ಅವರ ಮಾತು ಕೇಳಿ ಶಾಕ್ ಆಗಿದೆ.
ಏಕೆಂದರೆ ಮದುವೆಯಾಗಿ ಎರಡನೇ ದಿನವೇ ಈ ಮಾತು ಹೇಳಿದರೆ ಸಹಜವಾಗಿ ಗಂಡ ಎನಿಸಿಕೊಂಡವನಿಗೆ ಶಾಕ್ ಆಗುತ್ತದೆ. ಆದರೆ ಅಸಲಿ ವಿಚಾರ ಏನೆಂದರೆ, ಕವಿತಾ ಅವರು ಈಗಾಗಲೇ ತಮ್ಮ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಒಬ್ಬರೇ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಅಲ್ಲದೇ ಕವಿತಾ ಒಬ್ಬಳೇ ಮಗಳಾಗಿದ್ದರಿಂದ ಮದುವೆಯಾಗಿ ಗಂಡನ ಮನೆಗೆ ಬಂದ ಕೂಡಲೇ ಆಕೆಯ ತಾಯಿ ಒಬ್ಬೊಂಟಿಯಾದಳು ಎಂದು ಭಾವುಕವಾಗಿ ಈ ಮಾತನ್ನು ಹೇಳಿದ್ದಾರೆ.
ಈ ಮಾತನ್ನು ಕೇಳಿದ ಕವಿತಾ ಅವರ ತಾಯಿ ಮಗಳಿಗೆ, ಹೆಣ್ಣಾಗಿ ಹುಟ್ಟಿದ ಪ್ರತಿಯೊಬ್ಬಳು ಕೂಡ ಬೇರೆಯವರ ಮನೆಗೆ ಹೋಗಿ ಆ ಮನೆಯ ದೀಪ ಬೆಳಗಬೇಕು.ದಿನ ಕಳೆದಂತೆ ನಿನಗೂ ಎಲ್ಲವೂ ಸರಿ ಹೋಗುತ್ತದೆ. ಅಲ್ಲದೇ ನಾನಿಲ್ಲಿ ಆರಾಮಾಗಿದ್ದೇನೆ. ನನ್ನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಆರಾಮವಾಗಿರುವಂತೆ ಸಮಾಧಾನ ಮಾಡಿದ್ದಾರೆ.ತಾಯಿ ಮಾತಿಗೆ ಒಪ್ಪಿಗೆ ಸೂಚಿಸಿದ ಕವಿತಾ ಅವರು ಈಗ ಆರಾಮವಾಗಿದ್ದಾರೆ.
ಆದರೆ ಯಾವುದೇ ಹೆಣ್ಣು ಮಕ್ಕಳಿಗೂ ಕೂಡ ಮದುವೆಯಾದ ನಂತರ ಗಂಡನ ಮನೆಯಲ್ಲಿ ಎಷ್ಟೇ ಅಷ್ಟೈಶ್ವರ್ಯ ತುಂಬಿದ್ದರೂ ಕೂಡ ತವರು ಮನೆಯಲ್ಲಿ ಬೆಳೆದ ವಾತಾವರಣ, ಅಲ್ಲಿನ ಬಾಂಧವ್ಯ ಆಕೆಯನ್ನು ಕಾಡುತ್ತಲೇ ಇರುತ್ತದೆ. ಅದರಲ್ಲೂ ತಾಯಿ ಒಬ್ಬಳೇ ಇದ್ದಾರೆ ಎಂದಾಗ ಮತ್ತಷ್ಟು ಕಾಡುತ್ತದೆ. ಹಾಗಾಗಿ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಲೇ ಇರುತ್ತಾರೆ. ಇದು ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಸಂಗತಿಯೂ ಹೌದು.