ಒಂದು ರೂಪಾಯಿ ಊಡಿಕೆ ಮಾಡದೆ ಕೋಟಿಗಟ್ಟಲೇ ಹಣ ಸಂಪಾದನೆ ಮಾಡಿದ 19 ವರ್ಷದ ಯುವಕ ಹೇಗೆ ಗೊತ್ತೇ??

 

ಸಂಪಾದನೆ ಎಂಬುದು ಯಾವಾಗ, ಹೇಗೆ, ಎಲ್ಲಿ ಶುರುವಾಗುತ್ತದೆ ಎಂಬುದು ಊಹಿಸಲು ಸಹ ಸಾಧ್ಯವಿಲ್ಲ. ಆದರೆ ಆ ಸಂಪಾದನೆ ಕಳ್ಳತನ, ಮೋಸ ಅವ್ಯವಹಾರದಿಂದ ಕೂಡಿರಬಾರದು ಎಂದು ಮಾತನ್ನು ಗುರು ಹಿರಿಯರು ಯಾವಾಗಲೂ ಹೇಳುತ್ತಾರೆ. ದುಡಿಮೆ ಮಾಡಿ ತಿಂದರೆ ಯಾವ ಕೆಲಸವೂ ಕಡಿಮೆಯಲ್ಲ. ಕಾಲೇಜಿನಲ್ಲಿ ಓದುತ್ತಿರುವಾಗಲೇ ತಮ್ಮ ಖರ್ಚಿಗೆ ಹಣ ಸಂಪಾದನೆ ಮಾಡಲು ಪಾರ್ಟ್ ಟೈಮ್ ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಟೈಂ ಪಾಸ್‌ ಮಾಡುವ ಸಲುವಾಗಿ ಪ್ರಾರಂಭ ಮಾಡಿದ ಕೆಲಸ ಈಗ ಆತನನ್ನು ಕೋಟ್ಯಾಧೀಶನನ್ನಾಗಿ ಮಾಡಿದೆ. ಹೌದು ಇದು ಹೇಗೆ ಸಾಧ್ಯ ಎಂದು ನೀವು ಆಶ್ವರ್ಯ ಪಡಬಹುದು. ಈ ಅಸಾಮಾನ್ಯ ಯುವಕನ ಅದ್ವಿತೀಯ ಸಾಧನೆ ಬಗ್ಗೆ ತಿಳಿದುಕೊಳ್ಳೋಣ.

19 ವರ್ಷದ ಅವಿನಾಶ್ ಮೂಲತಃ ನೆರೆಯ ಆಂಧ್ರಪ್ರದೇಶದವನು. ಪದವಿ ವ್ಯಾಸಂಗ ಮಾಡಲು ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದ ಅವಿನಾಶ್, ಹವ್ಯಾಸಕ್ಕೆಂದು ಇನ್‌ ಸ್ಟಾಗ್ರಾಂ, ಫೇಸ್ ಬುಕ್, ಟ್ವಿಟರ್ಗಳಲ್ಲಿ ತನ್ನ ಖಾತೆ ತೆರೆದಿದ್ದ. ಖಾತೆಗಳಿಗೆ ಹೆಚ್ಚಿನ ಫಾಲೋವರ್ಸ್ ಪಡೆಯಬೇಕೆಂದು ಒಂದು ಹೊಸ ಉಪಾಯ ಹೂಡಿದ. ಜನರಿಗೆ ಇಷ್ಟವಾಗುವ ಮೀಮ್ಸ್ ಹಾಗೂ ಇಮೇಜ್ ಗಳನ್ನು ಕ್ರಿಯೇಟ್ ಮಾಡಿದ. ನೋಡ ನೋಡುತ್ತಿದ್ದಂತೆ ಫಾಲೋವರ್ಸ್ಗಳ ಸಂಖ್ಯೆ ಹೆಚ್ಚಾಯಿತು.

ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ನಾನಾ ಕಂಪನಿಗಳು ತಮ್ಮ ಬ್ರಾಂಡ್ ಅನ್ನು ಪ್ರಚಾರ ಮಾಡಿಕೊಡಿ ಎಂದು ಅವಿನಾಶ್ ಗೆ ದುಂಬಾಲು ಬಿದ್ದವು. ಹಣ ಪಡೆದು ಅವಿನಾಶ್ ಆ ಕಂಪನಿಗಳ ಉತ್ಪನ್ನವನ್ನು ಪ್ರಚಾರ ಮಾಡಿದನು. ಈ ಮಧ್ಯೆ ಅವಿನಾಶ್ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋವರ್ಸ್ ನ ಸುಲಭವಾಗಿ ಹೇಗೆ ಹೆಚ್ಚಿಸಿಕೊಳ್ಳಬಹುದೆಂಬ ಟೆಕ್ನಿಕ್ ಅನ್ನು ಕಂಡುಕೊಂಡಿದ್ದನು. ತಡಮಾಡದೇ ಈ ಕಂಪನಿಗಳಿಗೂ ಸುಲಭವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹೇಗೆ ಮಾರ್ಕೆಟಿಂಗ್ ಮಾಡಬೇಕೆಂಬ ತಂತ್ರವನ್ನು ಅವರಿಗೂ ಹೇಳಿಕೊಟ್ಟ. ಅದಕ್ಕೆ ಆತ ದಿನಕ್ಕೆ ಎರಡರಿಂದ ನಾಲ್ಕು ಸಾವಿರ ಫೀಸು ಪಡ್ದುಕೊಳ್ಳುತ್ತಿದ್ದನು. ನೋಡನೋಡುತ್ತಿದ್ದಂತೆ ಸುಮಾರು 40 ಕಂಪನಿಗಳು ಅವಿನಾಶ್ ನಿಂದ ಸ್ಟ್ರಾಟಿಜಿ ಟೆಕ್ನಿಕ್ ಹೇಳಿಸಿಕೊಳ್ಳಲು ಮುಂದೆ ಬಂದವು. ದಿನ ಕಳೆದಂತೆ ಈ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಅದೇ ರೀತಿ ಅವಿನಾಶ್ ತನ್ನ ಫೀಸನ್ನು ಏರಿಸಿಕೊಂಡ. ಆರು ತಿಂಗಳೊಳಗೆ ಬರೋಬ್ಬರಿ 80 ಲಕ್ಷ ರೂಪಾಯಿ ಹಣ ಅವಿನಾಶ್ ಖಾತೆಗೆ ಬಂದಿತು. ಅಷ್ಟಕ್ಕೆ ಸುಮ್ಮನಾಗದೇ, ತಾನೇ ಒಂದು ತಂಡವನ್ನು ಕಟ್ಟಿಕೊಂಡು ಟೆಕ್ನಿಕ್ ಸರ್ವಿಸ್ ಪ್ರೊವೈಡ್ ಮಾಡಲು ಆರಂಭಿಸಿದ. ಆನ್ ಲೈನ್ ನಲ್ಲೂ ಕ್ಲಾಸುಗಳನ್ನು ತೆಗೆದುಕೊಂಡು ಅದಕ್ಕೆ 500 ರಿಂದ 1000 ಡಾಲರ್ ಚಾರ್ಜ್ ಮಾಡಲು ಶುರುಮಾಡಿದ. ಹೀಗೆ ನೋಡನೋಡುತ್ತಿದ್ದಂತೆ ಅವಿನಾಶ್ ಮಿಲಿಯನೇರ್ ಆಗಿ ಬದಲಾದನು.