ರೋಹಿಣಿ ಸಿಂಧೂರಿ ಎಂಬ ಹೆಸರು ಕೇಳಿದರೆ ಸಾಕು ನೆನಪಾಗುವ ಒಂದೆರಡು ಪದಗಳು ಎಂದರೆ ಧೈರ್ಯ ಹಾಗೂ ಶ್ರದ್ಧೆ ಅಲ್ಲವೇ? ಅದರಲ್ಲಿಯೂ ಇಂದಿನ ಪೀಳಿಗೆಯ ಯುವತಿಯರಿಗೆ ಮಾದರಿ ರೋಹಿಣಿ ಸಿಂಧೂರಿ ಅವರು ಎಂದೇ ಹೇಳಬಹುದು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಿಲ್ಲಾಧಿಕಾರಿ ಸೇವೆಸಲ್ಲಿಸುತ್ತಿದ್ದ ರೋಹಿಣಿ ಸಿಂಧೂರಿ ರವರು, ಚಿಕ್ಕ ವಯಸ್ಸಿಗೆ ಕೆಲಸದ ಮೇಲೆ ಇರುವಷ್ಟು ಶ್ರದ್ದಾ ಭಕ್ತಿ, ಜನರಿಗೆ ಸೇವೆ ಮಾಡುವ ಮನೋಭಾವ ನಿಜಕ್ಕೂ ಮೆಚ್ಚುವಂಥದ್ದು.
ಅದೆಷ್ಟೋ ರಾಜಕಾರಣಿಗಳಿಂದ ಸಾಧ್ಯವಾಗದ ಕೆಲಸಗಳನ್ನು ಮಾಡಿರುವ ದಿಟ್ಟ ಮಹಿಳೆ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ ಅವರಾಗಿದ್ದು, ಇವರ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ರೋಹಿಣಿ ಸಿಂಧೂರಿ ಅವರು ಮೂಲತಃ ತೆಲಂಗಾಣದವರಾಗಿದ್ದು, ಮೇ 30, 1984 ರಲ್ಲಿ ಜನಿಸುತ್ತಾರೆ. ಒಳ್ಳೆಯ ವಿದ್ಯಾರ್ಥಿನಿಯಾಗಿದ್ದ ರೋಹಿಣಿ, ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದು, ನಂತರ ಐಎಎಸ್ ಆಗಬೇಕು ಎಂಬ ಆಸೆಯಿಂದ ಮದುವೆಯನ್ನು ಮುಂದೂಡಿ, ಯು.ಪಿ.ಎಸ್.ಸಿ ಪರೀಕ್ಷೆಗಾಗಿ ತಯಾರಿ ನಡೆಸುತ್ತಾರೆ. 2009 ರಲ್ಲಿ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು 43 ನೇ ರಾಂಕ್ ಪಡೆದುಕೊಳ್ಳುತ್ತಾರೆ.
ರೋಹಿಣಿ ಸಿಂಧೂರಿ ಅವರು ಕರ್ನಾಟಕ ಕೇಡರ್ ನ ಭಾರತೀಯ ಸೇವಾ ಅಧಿಕಾರಿಯಾಗಿದ್ದು, ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ನಂತರ ಮನೆಯವರ ಇಚ್ಛೆಯ ಮೇರೆಗೆ ಸುಧೀರ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ರೋಹಿಣಿ ಅವರ ಪತಿ ಸುಧೀರ್ ರವರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಈ ದಂಪತಿಗೆ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗುವಿದೆ. ರೋಹಿಣಿ ಅವರಿಗೆ ಒರ್ವ ತಂಗಿ ಕೂಡ ಇದ್ದು, ಅವರು ಬೆಂಗಳೂರಿನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.
ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ರೋಹಿಣಿ ಅವರು ಮಾಡಿದ ಕೆಲಸವನ್ನು ಯಾರು ಮರೆಯುವಂತಿಲ್ಲ. ಸದ್ಯ ಇದೀಗಗ ರೋಹಿಣಿ ಸಿಂಧೂರಿ ಅವರ ಕುಟುಂಬದ ಮುದ್ದಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರೆಲ್ಲರೂ ಕೂಡ ರೋಹಿಣಿ ಸಿಂಧೂರಿ ಅವರ ತುಂಬು ಕುಟುಂಬಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 10ನೇ ತರಗತಿ ಪರೀಕ್ಷೆಯ ಪಲಿತಾಂಶದಲ್ಲಿ ಸದಾ ಹಿಂದೆ ಇರುತ್ತಿದ್ದ ಹಾಸನ ಜಿಲ್ಲೆಯನ್ನು ಮೊದಲನೇ ಸ್ಥಾನಕ್ಕೆ ತಂದ ಕೀರ್ತಿ ರೋಹಿಣಿ ಸಿಂಧೂರಿ ಅವರದಾಗಿದ್ದು, ಯಾವುದೇ ಅಡೆತಡೆಗಳು ಬಂದರು ಕೂಡ ಅದನ್ನು ಲೆಕ್ಕಿಸದೆ ತಮಗೆ ನೀಡಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೆಯೂ ಯವಾಗಲೂ ನಿಷ್ಠೆಯಿಂದಲೇ ಕೆಲಸ ಮಾಡಿದ್ದಾರೆ ರೋಹಿಣಿ ಸಿಂಧೂರಿರವರು.