ನಟಿ ರಾಧಿಕಾ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಮಗಳು ಐರಾ ತುಂಬಾ
ಕ್ಯೂಟ್. ಇವಳಿಗೆ ಈಗಾಗಲೇ ಸಾಕಷ್ಟು ಜನ ಅಭಿಮಾನಿಗಳು ಇದ್ದಾರೆ. ಐರಾ ಹಾಗೂ ಯಥರ್ವ್
ಜೊತೆಗೆ ರಾಧಿಕಾ ಪಂಡಿತ್ ಅವರು ತುಂಬಾ ಖುಷಿಯಾಗಿ ತಾಯಿಯ ಸ್ಥಾನವನ್ನು ಎಂಜಾಯ್
ಮಾಡುತ್ತಿದ್ದಾರೆ. ಐರಾ ಯಶ್ ಗೆ ವಿಶೇಷ ಅತಿಥಿಗಳ ಕಡೆಯಿಂದ ವಿಶೇಷವಾದ ಉಡುಗೊರೆಯೊಂದು
ಬಂದಿದೆ. ರಾಧಿಕಾ ಹಾಗೂ ಯಶ್ ಅವರಿಗೆ ತಮ್ಮ ಇಬ್ಬರು ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಅದೇ
ಕಾರಣಕ್ಕಾಗಿ ರಾಧಿಕಾ ಅವರು ತಾವು ತುಂಬಾ ಇಷ್ಟಪಡುವ ಸಿನಿಮಾ ರಂಗದಿಂದ ದೂರವಿದ್ದುಕೊಂಡು
ತಮ್ಮ ಮಕ್ಕಳ ಪಾಲನೆ ಪೋಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಐರಾ ಹಾಗೂ ಯಥರ್ವ್ ಅವರ
ಫೋಟೊಗಳನ್ನು ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ
ಜೊತೆಗೆ ಯಾವಾಗಲೂ ಸಂಪರ್ಕದಲ್ಲಿರುತ್ತಾರೆ.
ಇದೀಗ ರಾಧಿಕಾ ಹಾಗೂ ಯಶ್ ಅವರ ಮಗಳಿಗೆ ಚಿಕಾಗೋಯಿಂದ ವಿಶೇಷ ಉಡುಗೊರೆಯೊಂದು ಬಂದಿದೆ.
ರಾಧಿಕಾ ಪಂಡಿತ್ ಅವರ ಸಹೋದರ ಗೌರವ್ ಪಂಡಿತ್ ಅವರು ತಮ್ಮ ಪತ್ನಿ ಹಾಗೂ ಮಗನ ಜೊತೆಗೆ
ಅಮೆರಿಕದ ಚಿಕಾಗೋದಲ್ಲಿ ನೆಲೆಸಿದ್ದಾರೆ. ಗೌರವ್ ಅವರ ಪತ್ನಿ ಐರಾಗಾಗಿ ವಿಶೇಷ
ಉಡುಗೊರೆಯನ್ನು ಕಳುಹಿಸಿದ್ದಾರೆ. ಅವರು ಕಳುಹಿಸಿರುವ ಉಡುಗೊರೆಯಲ್ಲಿ ಐರಾ ಓದಲು ಬರೆಯಲು
ಬೇಕಾಗುವ ಚಾರ್ಟ್ಗಳು ಹಾಗೂ ವಿಶೇಷವಾದ ಟೀಚಿಂಗ್ ಮೆಟಿರೀಯಲ್ ಗಳು ಅದರಲ್ಲಿ ಇವೆ. ಅಲ್ಲದೇ ಯಥರ್ವ್ ಗಾಗಿ ಬಣ್ಣದ ಆಟಿಕೆಗಳನ್ನು ಕಳುಹಿಸಿದ್ದಾರೆ. ಉಡುಗೊರೆಗಳನ್ನು ನೋಡಿ
ರಾಧಿಕಾ ಅವರು ತುಂಬಾನೇ ಖುಷಿಯಾಗಿದ್ದಾರೆ. ನಟಿ ರಾಧಿಕಾ ಪಂಡಿತ್ ಹಾಗೂ ನಟ ಯಶ್
ಅವರು ಇಬ್ಬರು ಕೂಡ ಕನ್ನಡ ಚಿತ್ರರಂಗದಲ್ಲಿ ಸೆಲೆಬ್ರಿಟಿ ಜೋಡಿಗಳು. ಇಬ್ಬರಿಗೂ ಸಾಕಷ್ಟು
ಅಭಿಮಾನಿಗಳಿದ್ದು, ಅವರನ್ನು ಈಗಲೂ ಕ್ಯೂಟ್ ಕಪಲ್ ಎಂದೇ ಕರೆಯಲಾಗುತ್ತದೆ.
ಇವರಿಬ್ಬರಿಗೂ ಐರಾ ಹಾಗೂ ಯಥರ್ವ್ ಎಂಬ ಇಬ್ಬರು ಮಕ್ಕಳಿದ್ದಾರೆ. ರಾಜ್ಯದಲ್ಲಿ ಲಾಕ್
ಡೌನ್ ಘೋಷಣೆಯಾಗಿರುವುದರಿಂದ ಅವರಿಬ್ಬರು ಹಾಸನದ ಬಳಿ ಇರುವ ತಮ್ಮ ತೋಟದ ಮನೆಗೆ
ಶಿಫ್ಟ್ ಆಗಿದ್ದಾರೆ. ಏಕೆಂದರೆ ಯಶ್ ಅವರ ತಂದೆ ಮೂಲತಃ ಹಾಸನ ಜಿಲ್ಲೆಯವರು. ಹಾಗಾಗಿ ಅಲ್ಲಿ ಒಂದಷ್ಟು ಜಮೀನು
ಖರೀದಿ ಮಾಡಿ ಅಲ್ಲೇ ಮನೆಯೊಂದನ್ನು ಕಟ್ಟಿಸಿದ್ದಾರೆ. ಈಗ ಚಿತ್ರೀಕರಣದ ಯಾವುದೇ
ಕೆಲಸವಿಲ್ಲದೇ ಇರುವುದರಿಂದ ಯಶ್ ಹಾಗೂ ಅವರ ಕುಟುಂಬ ಪೂರ್ತಿ ತಮ್ಮ ತೋಟದ ಮನೆಯಲ್ಲೇ
ವಾಸ ಮಾಡುತ್ತಿದ್ದಾರೆ. ಯಶ್ ಅವರಿಗೆ ಕೃಷಿ ಮಾಡುವುದು ಎಂದರೆ ಬಹಳ ಖುಷಿಯ ಸಂಗತಿ
ಹಾಗಾಗಿ ಅವರು ಅಲ್ಲಿ ಯಾವುದೇ ಸಮಸ್ಯೆಯಿಲ್ಲದೇ ಕಾಲ ಕಳೆಯಲು ಸಹಾಯವಾಗುತ್ತದೆ ಎಂಬ
ಕಾರಣಕ್ಕಾಗಿ ಅವರು ಅಲ್ಲಿಗೆ ಶಿಫ್ಟ್ ಆಗಿದ್ದಾರೆ.