ಬಿಗ್ ಬಾಸ್ ಸೀಸನ್ 8 ಈ ಬಾರಿ ಪೂರ್ತಿ ಆಗುವ ಮೊದಲೇ 72 ದಿನಗಳ ನಂತರ ಕೊರೊನಾ ಮಾರ್ಗಸೂಚಿಯ ಪ್ರಕಾರ ನಿಂತುಹೋಗಿತ್ತು. ಮನೆಯಲ್ಲಿದ್ದ ಸ್ಪರ್ಧಿಗಳನ್ನು ಸುರಕ್ಷಿತವಾಗಿ ಆದರ ಮನೆಗಳಿಗೆ ಸೇರಿಸಲಾಗಿತ್ತು. ಬಿಗ್ ಬಾಸ್ ಅರ್ಧದಲ್ಲೇ ನಿಂತಿದ್ದು, ಈ ಕಾರ್ಯಕ್ರಮವನ್ನು ನೋಡುವಂತಹ ಅಭಿಮಾನಿಗಳಿಗೆ ಬಹಳಷ್ಟು ನಿರಾಸೆಯನ್ನುಂಟು ಮಾಡಿತ್ತು. ಈ ನಿರಾಸೆಯ ನಡುವೆಯೇ ಕೆಲವೇ ದಿನಗಳ ಹಿಂದಷ್ಟೇ ವಾಹಿನಿಯ ಬ್ಯುಸಿನೆಸ್ ಹೆಡ್ ಆಗಿರುವ ಪರಮೇಶ್ವರ ಗುಂಡ್ಕಲ್ ಅವರು ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎನ್ನುವ ಮಾಹಿತಿಯನ್ನು ನೀಡಿದ್ದರು. ಅದನ್ನು ನೋಡಿದ ಮೇಲೆ ಬಹಳಷ್ಟು ಜನರಿಗೆ ಮತ್ತೆ ಬಿಗ್ ಬಾಸ್ ಬರಲಿದೆ ಎನ್ನುವುದು ಕುತೂಹಲ ಕೆರಳಿಸಿತ್ತು. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸ್ಪರ್ಧಿಗಳು ಹೇಗೆಲ್ಲ ಆಡುತ್ತಾರೆ,ಯಾವ ರೀತಿ ಯೋಜನೆ ಮಾಡಿಕೊಂಡು ಬಂದಿರ್ತಾರೆ ಎನ್ನುವ ಒಂದು ಕಾತರತೆ ಬಹಳಷ್ಟು ಜನರಲ್ಲಿ ಸಹಜವಾಗಿ ಮೂಡಿದೆ. ಈಗ ಎಲ್ಲರ ಕುತೂಹಲವನ್ನೂ ತಣಿಸುವಂರತರ ಬಿಗ್ ಬಾಸ್ ನ ಸೆಕೆಂಡ್ ಇನ್ನಿಂಗ್ಸ್ ನ ಹೊಸ ಎಪಿಸೋಡ್ ಇಂದು ರಾತ್ರಿ ಪ್ರಸಾರವಾಗಲಿದೆ.
ಬಿಗ್ ಬಾಸ್ ಮನೆಗೆ ಸೆಕೆಂಡ್ ಇನ್ನಿಂಗ್ಸ್ ಗೆ ಹನ್ನೆರಡು ಮಂದಿ ಸ್ಪರ್ಧಿಗಳು ಮನೆಯನ್ನು
ಪ್ರವೇಶ ಮಾಡಿದ್ದಾರೆ. ಈಗಾಗಲೇ ವಾಹಿನಿಯು ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸ್ಪರ್ಧಿಗಳು
ಮನೆಗೆ ಎಂಟ್ರಿ ನೀಡುವ ಪ್ರೋಮೋವನ್ನು ಬಿಡುಗಡೆ ಮಾಡಿದೆ. ಸೀಸನ್ ಅರ್ಧಕ್ಕೆ ನಿಲ್ಲುವಾಗ
ಮನೆಯೊಳಗೆ ಇದ್ದ ಕೆಪಿ ಅರವಿಂದ್ , ಮಂಜು ಪಾವಗಡ, ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್
ಸಂಬರ್ಗಿ, ಶಮಂತ್ ಬ್ರೋ ಗೌಡ, ರಘು, ವೈಷ್ಣವಿ, ದಿವ್ಯ ಸುರೇಶ್, ದಿವ್ಯ ಉರುಡಗ, ಶುಭ
ಪೂಂಜಾ, ನಿಧಿ ಸುಬ್ಬಯ್ಯ ಹಾಗೂ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದ ಪ್ರಿಯಾಂಕಾ
ತಿಮ್ಮೇಶ್ ಅವರು ಸೇರಿದಂತೆ 12 ಜನರು ಮತ್ತೊಮ್ಮೆ ಮನೆಯನ್ನು ಪ್ರವೇಶ ಮಾಡಿದ್ದಾರೆ.