ಹೌದು ಸ್ನೇಹಿತರೇ, ಒಂದು ಕಡೆ ರಾವಣನ ಪಾತ್ರಕ್ಕೆ ರಣವೀರ್ ಸಿಂಗ್ ರವರನ್ನು ಒಪ್ಪಿಸಲು ಮಾತುಕತೆಗಳು ನಡೆಯುತ್ತಿವೆ. ಇದೇ ಸಮಯದಲ್ಲಿ ಸೀತಾ ಮಾತೆಯ ಪಾತ್ರಕ್ಕೆ ಕರೀನಾ ಕಪೂರ್ ರವರನ್ನು ಸಂಪರ್ಕ ಮಾಡಲಾಗಿದೆ ಹಾಗೂ ಕರೀನಾ ಕಪೂರ್ ರವರು ಈ ಪಾತ್ರಕ್ಕೆ ಬರೋಬ್ಬರಿ 12 ಕೋಟಿ ಸಂಭಾವನೆ ಕೇಳುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಇದು ಕೂಡ ಸಾಕಷ್ಟು ಚರ್ಚೆಗೆ ಗುರಿಯಾಗುತ್ತಿದೆ.
ಇದೇ ಸಮಯದಲ್ಲಿ ಕರೀನಾ ಕಪೂರ್ ರವರನ್ನು ಸೀತಾ ಮಾತೆಯ ಪಾತ್ರಕ್ಕೆ ಆಯ್ಕೆ ಮಾಡುವುದು ಬೇಡ ಎಂದು ಹಲವಾರು ಜನರು ಧ್ವನಿ ಎತ್ತಿದ್ದಾರೆ. ಈ ಸಮಯದಲ್ಲಿ ಈ ವಿಷಯಕ್ಕೆ ಸಾತ್ ನೀಡಿರುವ ಟಾಪ್ ನಿರ್ದೇಶಕ ರಾಜಮೌಳಿ ರವರ ತಂದೆ ಕೂಡ ಅದೇ ರೀತಿಯ ಮಾತುಗಳನ್ನು ಆಡಿದ್ದು, ಕರೀನಾ ಕಪೂರ್ ರವರಿಗೆ ಸೀತಾ ಪಾತ್ರ ನೀಡುವ ಬದಲು ಬಾಲಿವುಡ್ ಚಿತ್ರರಂಗದ ಮತ್ತೊಬ್ಬರು ನಟಿಯಾಗಿರುವ ಕಂಗನಾ ರಾವತ್ ರವರಿಗೆ ಈ ಪಾತ್ರ ನೀಡುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇವರ ಈ ಆಯ್ಕೆಯ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.