ಜೂನಿಯರ್ ಚಿರು ಹುಟ್ಟುಹಬ್ಬದ ಸಂಭ್ರಮ, ತಯಾರಿ ಹೇಗಿದೆ ನೋಡಿ!

ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಮೇಘನಾ ರಾಜ್ ಕೂಡ ಒಬ್ಬರಾಗಿದ್ದಾರೆ. ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಇವರು ಬಹಳ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ. ಮೇಘನಾ ರಾಜ್ ಅವರು ಎರಡೂ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲದೇ, ತಮಿಳು ಚಿತ್ರರಂಗದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಆದರೆ ಇವರು ಕರ್ನಾಟಕ ಹಾಗೂ ಕನ್ನಡ ಚಿತ್ರರಂಗದ ಮನೆಮಗಳು. ಈಗ ಮೇಘನಾ ಅವರಿಗೆ ಮುದ್ದಾದ ಮಗು ಇದೆ.

ಆದರೆ ಆ ಮಗುವಿಗೆ ಇನ್ನೂ ನಾಮಕರಣ ಮಾಡಿಲ್ಲ. ಹಾಗಾಗಿ ಯಾವಾಗ ನಾಮಕರಣ ಎಂದು ಅಭಿಮಾನಿಗಳೆಲ್ಲರೂ ಕೇಳುತ್ತಿದ್ದರು. ಈ ಪ್ರಶ್ನೆಗೆ ಈಗ ಸಿಕ್ಕಿದೆ. 2018ರಲ್ಲಿ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರೊಡನೆ ವಿವಾಹ ಮಾಡಿಕೊಂಡರು. ಆದರೆ ದುರಾದೃಷ್ಟವಶಾತ್‌ ಅವರು ಕಳೆದ ವರ್ಷ ಹೃದಯಾಘಾತದಿಂದ ನಿಧನ ಹೊಂದಿದರು.

10 ತಿಂಗಳ ಹಿಂದೆ ನಟ ಚಿರಂಜೀವಿ ಸರ್ಜಾ ಅಕಾಲಿಕ ಮರಣಕ್ಕೆ ತುತ್ತಾದರು. ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ಆಕ್ಟಿವ್ ಆಗಿರುತ್ತಿದ್ದ ಮೇಘನಾ, ಚಿರು ನಿಧನದ ನಂತರ ಎಲ್ಲದರಿಂದ ಸ್ವಲ್ಪ ದೂರವೇ ಉಳಿದುಬಿಟ್ಟಿದ್ದರು. ಅಕ್ಟೋಬರ್ 22ರಂದು ಚಿರು ಮತ್ತು ಮೇಘನಾ ಅವರ ಪ್ರೀತಿಯ ಸಂಕೇತವಾಗಿ ಜ್ಯೂನಿಯರ್ ಚಿರು ಜನಿಸಿದ. ನಂತರ ಮೇಘನಾ ಬಾಳಲ್ಲಿ ಬೆಳಕು ಮೂಡಿತ್ತು. ಬದುಕಿಗೊಂದು ಭರವಸೆ ಮೂಡಿತ್ತು. ಪ್ರಸ್ತುತ ಮೇಘನಾ ರಾಜ್ ಅವರು ಜ್ಯೂನಿಯರ್ ಚಿರು ಆರೈಕೆಗೆ ತಮ್ಮ ಸಂಪೂರ್ಣ ಸಮಯವನ್ನು ಮೀಸಲಿರಿಸಿದ್ದಾರೆ. ಇದೀಗ ಜೂನಿಯರ್ ಚಿರುಗೆ 8 ತಿಂಗಳು ತುಂಬಿದ್ದು ತಾಯಿ ಮತ್ತು ಕುಟುಂಬದವರ ಆರೈಕೆಯಲ್ಲಿ ಚೆನ್ನಾಗಿ ಬಹಳ ಸಂತೋಷವಾಗಿಯೇ ಜೂನಿಯರ್‌ ಚಿರು ಬೆಳೆಯುತ್ತಿದ್ದಾನೆ.