DC ರೋಹಿಣಿ ಸಿಂಧೂರಿ ಕಾಲೇಜು ದಿನಗಳಲ್ಲಿ ಹೇಗಿದ್ದರೂ ನೋಡಿದ್ರೆ ಬೆರಗಾಗ್ತೀರಾ

 

ರೋಹಿಣಿ ಸಿಂಧೂರಿ ಈ ಹೆಸರು ಕೇಳಿದರೆ ನೆನಪಾಗುವ ಒಂದೆರಡು ಪದಗಳು ಧೈರ್ಯ ಮತ್ತು ಶ್ರದ್ಧೆ. ಇಂದಿನ ಪೀಳಿಗೆಯ ಯುವತಿಯರಿಗೆ ಮಾದರಿ ರೋಹಿಣಿ ಸಿಂಧೂರಿ ಅವರು. ಮೈಸೂರಿಗೆ ಹೊಸದಾಗಿ ಬಂದಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು. ಚಿಕ್ಕ ವಯಸ್ಸಿಗೆ ಕೆಲಸದ ಮೇಲೆ ಇವರಿಗೆ ಇರುವಷ್ಟು ಶ್ರದ್ದಾ ಭಕ್ತಿ, ಜನರಿಗೆ ಸೇವೆ ಮಾಡುವ ಮನೋಭಾವ ಮೆಚ್ಚುವಂಥದ್ದು. ಅದೆಷ್ಟೋ ರಾಜಕಾರಣಿಗಳಿಂದ ಸಾಧ್ಯವಾಗದ ಕೆಲಸಗಳನ್ನು ಮಾಡಿರುವ ದಿಟ್ಟ ಮಹಿಳೆ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ. ರೋಹಿಣಿ ಸಿಂಧೂರಿ ಅವರು ಆಂಧ್ರ ಪ್ರದೇಶದಲ್ಲಿ ಹುಟ್ಟಿ ಬೆಳೆದಿದ್ದರು ಸಹ, ಕರ್ನಾಟಕದಲ್ಲಿ ಕೆಲಸ ಶುರು ಮಾಡಿದ ನಂತರ ಕನ್ನಡ ಕಲಿತು ಸ್ವಚ್ಛವಾಗಿ ಕನ್ನಡ ಮಾತನಾಡುವುದನ್ನು ನೋಡಿದರೆ ಸಂತೋಷ ಆಗುತ್ತದೆ.

ಕನ್ನಡ ಕಲಿಕೆಯಲ್ಲಿ ಮಾತ್ರವಲ್ಲದೆ ಕೆಲಸದಲ್ಲಿ ಕೂಡ ಇವರು ಅಷ್ಟೇ ಅಚ್ಚುಕಟ್ಟು ಮತ್ತು ಕಟ್ಟುನಿಟ್ಟು. ಇಲ್ಲಿಯವರೆಗೂ 11 ವರ್ಷಗಳ ಕಾಲ ಕರ್ನಾಟಕದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 11 ವರ್ಷಗಳಲ್ಲಿ ಇವರು ಮಾಡಿರುವ ಪ್ರಾಮಾಣಿಕ ಕೆಲಸಗಳನ್ನು ಜನ ಇಂದಿಗೂ ಮರೆತಿಲ್ಲ. ರೋಹಿಣಿ ಸಿಂಧೂರಿ ಅವರಿಗೆ ಈಗ 37 ವರ್ಷ ವಯಸ್ಸು. ಅವರ ತಾಯಿ ಶ್ರೀಲಕ್ಷ್ಮೀ ರೆಡ್ಡಿ ಮತ್ತು ಅವರ ಪತಿ ಸುಧೀರ್ ರೆಡ್ಡಿ, ಬೆಂಗಳೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ರೋಹಿಣಿ ಅವರಿಗೆ ಒಬ್ಬ ತಂಗಿ ಮತ್ತು ತಮ್ಮ ಇದ್ದಾರೆ. ರೋಹಿಣಿ ಸಿಂಧೂರಿ ಅವರ ತಂಗಿ ಹೆಸರು ಪ್ರಿಯಾಂಕ ರೆಡ್ಡಿ ಅವರು ವೃತ್ತಿಯಲ್ಲಿ ಡಾಕ್ಟರ್. ರೋಹಿಣಿ ಅವರ ತಮ್ಮ ಲಾಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ರೋಹಿಣಿ ಅವರಿಗೆ ಇಬ್ಬರು ಮಕ್ಕಳಿದ್ದು ಮಗನಿಗೆ ಈಗ 7 ವರ್ಷ ಹೆಸರು ಸಿದ್ಧಾರ್ಥ್ ರೆಡ್ಡಿ, ಮಗಳು ಸಿರಿಣ್ಯ ರೆಡ್ಡಿಗೆ ಈಗ 4 ವರ್ಷ. ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಕೆಲಸ ಮಾಡಿದ ನಂತರ ರೋಹಿಣಿ ಸಿಂಧೂರಿ ಅವರು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಮೈಸೂರಿಗೆ ವರ್ಗಾವಣೆಯಾದರು. 8 ತಿಂಗಳ ಕಾಲ ಕರೊನಾ ವಿರುದ್ಧ ಅತ್ಯುತ್ತಮ ಕೆಲಸಗಳನ್ನು ಮಾಡಿದರು, ರೋಹಿಣಿ ಅವರ ಪರಿಶ್ರಮದಿಂದಾಗಿ, ಇಂದು ಇಡೀ ಕರ್ನಾಟಕ ರಾಜ್ಯದಲ್ಲಿ ಇಂದು ಅತಿ ಹೆಚ್ಚು ವ್ಯಾಕ್ಸಿನ್ ಪಡೆದಿರುವ ಜಿಲ್ಲೆ ಎನ್ನುವ ಕೀರ್ತಿ ಪಡೆದಿದೆ.
ಆದರೆ ಹಲವಾರು ಕಾರಣಗಳಿಂದ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾವಣೆ ಮಾಡಲಾಯಿತು. ಇದೀಗ ಸೋಷಿಯಲ್ ಮೀಡಿಯದಲ್ಲಿ ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ ಎನ್ನುವ ಕ್ಯಾಂಪೇನ್ ಸಹ ನಡೆಯುತ್ತಿದೆ. ನಿಮಗೆ ಗೊತ್ತಿರೋ ಹಾಗೆ ಇತ್ತೀಚಿಗೆ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ವರ್ಗಾವಣೆ ಮಾಡಲಾಗಿತ್ತು. ಇದರ ಬಗ್ಗೆ ಸಾಕಷ್ಟು ಚರ್ಚೆ ಆಗಿದ್ದವು. ಮೈಸೂರಿನಲ್ಲಿ ಈಗ ರೋಹಿಣಿ ಸಿಂಧೂರಿ ಅವರ ಜಾಗಕ್ಕೆ ಬೇರೊಬ್ಬರನ್ನು ಕರೆತರಲಾಗಿದೆ. ಇದರ ಬಗ್ಗೆ ಕರ್ನಾಟಕಕ್ಕೆ ಸರ್ಕಾರದ ವಿರುದ್ಧ ಸಾಕಷ್ಟು ಜನ ಗರಂ ಆಗಿದ್ದಾರೆ. ದಿಟ್ಟ ಜಿಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಅಪರೂಪದ ಫೋಟೋಗಳನ್ನು, ಕಾಲೇಜು ದಿನಗಳ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು.
ರೋಹಿಣಿ ಸಿಂಧೂರಿ ಅವರು ಮೂಲತಃ ಅಂದ್ರ ಪ್ರದೇಶದವರು. ಯು ಪಿ ಸ್ ಸಿ ಪರೀಕ್ಷೆಯಲ್ಲಿ ಅತ್ಯದ್ಭುತ ಸಾಧನೆ ಮಾಡಿದ್ದ ರೋಹಿಣಿ ಸಿಂಧೂರಿ ಅವರು, ಒಳ್ಳೆಯ ರಾಂಕ್ ಪಡೆದರು. ಆ ನಂತರ ಕರ್ನಾಟಕದಲ್ಲಿ ಮಂಡ್ಯ, ಹಾಸನ ನಂತರ ಮೈಸೂರಿನ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿ, ಸಾಕಷ್ಟು ಒಳ್ಳೆಯ ಕೆಲಸ ಮಾಡಿ ಜನರ ಕೈಯಲ್ಲಿ ಸೈ ಎನಿಸಿಕೊಂಡಿದ್ದರು. ಇಂತಹ ಒಳ್ಳೆಯ ಜಿಲ್ಲಾಧಿಕಾರಿಯನ್ನು ಉಳಿಸಿಕೊಳ್ಳುವ ತಾಕತ್ತು ನಮ್ಮ ರಾಜ್ಯ ಸರ್ಕಾರಕ್ಕೆ ಇಲ್ಲ ಎಂಬುದು ಬೇಸರದ ಸಂಗತಿ.