ಲಾಕ್ ಡೌನ್ ನಡುವೆ ದೊಡ್ಡ ಸಿಹಿಸುದ್ದಿ ಹಂಚಿಕೊಂಡ ರಚಿತಾ ರಾಮ್…ನೋಡಿ

 

ಕನ್ನಡ ಚಿತ್ರರಂಗದ ಗುಳಿಕೆನ್ನೆ ಸುಂದರಿ ರಚಿತಾ ರಾಮ್ ರವರು ಇದೀಗ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ಎಂಬುದರಲ್ಲಿ ಎರಡು ಮಾತಿಲ್ಲ.ಹೌದು ಇದಕ್ಕೆ ಸಾಕ್ಷಿ ಎಂಬಂತೆ ಅವರ ಕೈಯಲ್ಲಿ ಇರುವ ಸಾಲು ಸಾಲು ಸಿನಿಮಾಗಳು. ದರ್ಶನ್ ಅಭಿನಯದ ಬುಲ್ ಬುಲ್ ಎಂಬ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಈ ಡಿಂಪಲ್ ಕ್ವೀನ್, ನಿರ್ಮಾಪಕರ ಪಾಲಿನ ಅದೃಷ್ಟ ನಟಿ ಅಂತಾನೂ ಹೇಳಬಹುದು.ಹೌದು ಇದಕ್ಕೆ ಸಾಕ್ಷಿ ಎಂಬಂತೆ ಅವರು ಅಭಿನಯಿಸಿರುವ ಬಹುತೇಕ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ್ದು, ನಿರ್ಮಾಪಕರ ಜೇಬು ತುಂಬಿಸಿವೆ.

ಸದ್ಯ ಇದೀಗ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಏಕ್ ಲವ್ ಯಾ ಸಿನಿಮಾದ ಮೂಲಕ ರಚಿತಾ ಸ್ಟಾರ್‌ ನಟರ ಜೊತೆಗಷ್ಟೇ ನಟಿಸುತ್ತಾರೆ ಎಂಬ ಹಣೆಪಟ್ಟಿಯಿಂದಲೂ ಹೊರಬಂದಿದ್ದು, ಗಟ್ಟಿಯಾದ ಕಥೆ ಇದ್ದರೆ ಹೊಸ ನಿರ್ದೇಶಕರು, ನಟರ ಜೊತೆಗೂ ನಾನು ನಟಿಸಲು ಸದಾ ಸಿದ್ಧ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಪ್ರಸ್ತುತ ಡಿಂಪಲ್ ಕ್ವೀನ್ ‘ಲಿಲ್ಲಿ’ ಚಿತ್ರದಲ್ಲಿ ನಿರತರಾಗಿದ್ದು ನವರಸ ನಾಯಕ ಜಗ್ಗೇಶ್ ಅಭಿನಯದ ‘ನೀರ್‌ ದೋಸೆ’ ಚಿತ್ರದಲ್ಲಿ ಕೆಲಸ ಮಾಡಿದ್ದ ವಿಜಯ್‌ ಎಂಬುವವರು ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ವಿಶೇಷ ಅಂದರೆ ವಿಜಯ್ ಅವರ ಮೊದಲ ಚಿತ್ರವೂ ಕೂಡ ಇದಾಗಿದ್ದು ಅನಿಮೇಷನ್‌ ಕ್ಷೇತ್ರದಲ್ಲಿ ಅವರಿಗೆ ಸಾಕಷ್ಟು ಪರಿಣತಿ ಇದೆಯಂತೆ. ಆದುದರಿಂದ ಹಾಲಿವುಡ್‌ ಗುಣಮಟ್ಟದಲ್ಲಿ ‘ಲಿಲ್ಲಿ’ಯನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ.ಕಳೆದ ವರ್ಷ ತೆರೆಕಂಡ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ನಾಯಕರಾಗಿದ್ದ ‘ಆಯುಷ್ಮಾನ್‌ಭವ’ ಚಿತ್ರದಲ್ಲಿ ರಚಿತಾ ರಾಮ್ ಮಾನಸಿಕ ಅಸ್ವಸ್ಥೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಅಮೋಘ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದರು. ಇದೀಗ ‘ಲಿಲ್ಲಿ’ ಚಿತ್ರದಲ್ಲಿ ಅವರು ಮನೊವೈದ್ಯೆಯಾಗಿ ಬಣ್ಣ ಹಚ್ಚುತ್ತಿದ್ದು, ಚಿತ್ರದಲ್ಲಿ ಅವರ ಪಾತ್ರದ ಹೆಸರು ‘ಡಾ.ಮಾಹಿ’. ಸವಾಲಿನ ಪಾತ್ರದ ಜೊತಗೆ ವಿಭಿನ್ನವಾದ ಲುಕ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರಂತೆ.

ಸದ್ಯ ಇದೀಗ ಚಿತ್ರೀಕರಣದ ಕೆಲಸಗಳೆಲ್ಲ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು,ಇದೀಗ ಸಿನಿಮಾ ವಿಚಾರವನ್ನು ಹೊರತುಪಡಿಸಿ ರಚಿತಾ ರಾಮ್ ಅವರು ಬೇರೆ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಹೌದು ಇದೀಗ ರಾಜ್ಯದಲ್ಲಿ ಕರೋನಾ ವಕ್ಕರಿಸಿಕೊಂಡಿದ್ದು ಕೇವಲ ಉದ್ಯಮಗಳಿಗೆ , ವ್ಯಪಾರಿಗಳು ಮಾತ್ರವಲ್ಲದೆ ದೇಶದ ಬೆನ್ನೆಲುಬಾದ ರೈತರಿಗೂ ಕೂಡ ದೊಡ್ಡ ಮಟ್ಟದಲ್ಲಿಯೇ ಕಷ್ಟವನ್ನು ತಂದೊಡ್ಡಿದೆ. ಸದ್ಯ ಇಂತಹ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ನಿಂತಿರುವ ಗುಳಿಕೆನ್ನೆ ಸುಂದರಿ ರಚಿತಾ ರಾಮ್ ರವರು, ತಮ್ಮ ಅಭಿಮಾನಿಗಳಿಗೂ ಕೂಡಾ ಕೈಜೋಡಿಸುವಂತೆ ಕೇಳಿಕೊಂಡಿದ್ದಾರೆ.

ಹೌದು ‘ಕೊರೋನಾ ಕಾಲದಲ್ಲಿ ಬೆಳೆದ ಬೆಳೆ ಮಾರಲಾಗದೇ ನಷ್ಟ ಅನುಭವಿಸುತ್ತಿರುವ ಅನ್ನದಾತರಿಗೆ ನನ್ನ ಬೆಂಬಲ’ ಎಂದಿರುವ ರಚಿತಾ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಸಾಲುಗಳನ್ನು ಬರೆದುಕೊಂಡಿದ್ದಾರೆ. ಹಸಿದವರಿಗೆ ಅನ್ನ ನೀಡುವ ಅನ್ನದಾತ ನಮ್ಮ ಬೆನ್ನುಲುಬು. ಆತನ ಬೆನ್ನಿಗೆ ನಾವೆಲ್ಲರೂ ನಿಲ್ಲುವುದು ಅವಶ್ಯವಾಗಿದೆ. ಹೀಗಾಗಿ ಈ ದಿನಗಳಲ್ಲಿ ಕೊರೋನಾ ಸೋಂಕಿತ ರೈತರಿಗೆ ನಮ್ಮ ಕೈಲಾದ ಮಟ್ಟಿಗೆ ನೆರವಾಗುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ‘ವಿ ಸಪೋರ್ಟ್ ಫಾರ್ಮರ್ಸ್’ ಸಂಘಟನೆಗೆ ನನ್ನ ಬೆಂಬಲವಿದೆ.

ನಿಮ್ಮ ಬೆಂಬಲ ವ್ಯಕ್ತಪಡಿಸಲು ನಿಮ್ಮ ಕೈಲಾದಷ್ಟು ಯುಪಿಐ ಕೋಡ್ ಮೂಲಕ ಸಹಾಯ ಮಾಡಿ’ ಎಂದು ರಚಿತಾ ಮನವಿ ಮಾಡಿದ್ದಾರೆ. ಸದ್ಯ ಇದೀಗ ಈ ಪೋಸ್ಟ್ ಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅಭಿಮಾನಿಗಳು ಕೂಡ ಡಿಂಪಲ್ ಕ್ವೀನ್ ರವರ ಈ ಸಾಮಾಜಿಕ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ. ಹಸಿದವರಿಗೆ ಅನ್ನ ನೀಡುವ ಅನ್ನದಾತ ನಮ್ಮ ಬೆನ್ನುಲುಬು. ಆತನ ಬೆನ್ನಿಗೆ ನಾವೆಲ್ಲರೂ ನಿಲ್ಲುವುದು ಅವಶ್ಯವಾಗಿದೆ.

ಹೀಗಾಗಿ ಈ ದಿನಗಳಲ್ಲಿ ಕೊರೋನಾ ಸೋಂಕಿತ ರೈತರಿಗೆ ನಮ್ಮ ಕೈಲಾದ ಮಟ್ಟಿಗೆ ನೆರವಾಗುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ‘ವಿ ಸಪೋರ್ಟ್ ಫಾರ್ಮರ್ಸ್’ ಸಂಘಟನೆಗೆ ನನ್ನ ಬೆಂಬಲವಿದೆ. ನಿಮ್ಮ ಬೆಂಬಲ ವ್ಯಕ್ತಪಡಿಸಲು ನಿಮ್ಮ ಕೈಲಾದಷ್ಟು ಯುಪಿಐ ಕೋಡ್ ಮೂಲಕ ಸಹಾಯ ಮಾಡಿ’ ಎಂದು ರಚಿತಾ ಮನವಿ ಮಾಡಿದ್ದಾರೆ.