ಎಲ್ಲರು ಕಾಯುತ್ತಿದ್ದ ಸಿಹಿಸುದ್ದಿ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

 

ಸದ್ಯ ಕನ್ನಡ ಚಿತ್ರರಂಗದಲ್ಲಿ ಮೊತ್ತ ಎಂಬ ಸಿನಿಮಾ ಬಿಡುಗಡೆಯಾಗಿ ಒಂದು ವರುಷವಾದರು ಕೂಡ ಸಿನಿರಸಿಕರು ಸಿನಿಮಾ ಗುಂಗಿನಿಂದ ಹೊರಬಂದಿಲ್ಲ. ಈಗಲೂ ಕೂಡ ದೂರದರ್ಶನದಲ್ಲಿ ಪ್ರಸಾರವಾದರೆ ಎಲ್ಲರೂ ಕೂಡ ತಪ್ಪದೆ ವೀಕ್ಷಿಸುತ್ತಾರೆ. ಅದರಲ್ಲಿಯೂ ಈ ಚಿತ್ರದ ಕೆಲವೊಂದು ಕಾಮಿಡಿ ದೃಶ್ಯಗಳಂತೂ ಈಗಲೂ ಕೂಡ ನೋಡುಗರಿಗೆ ನಗು ಮೂಡಿಸುತ್ತದೆ. ಡಾರ್ಲಿಂಗ್ ಕೃಷ್ಣ ಅವರೇ ಆ್ಯಕ್ಷನ್ ಕಟ್ ಹೇಳಿ ನಟಿಸಿದ್ದ ಚಿತ್ರ ‘ಲವ್ ಮಾಕ್ಟೇಲ್’ ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಕೂಡ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬಂದಿತ್ತು.

ಪ್ರೇಕ್ಷಕರ ಮನಸ್ಸಿಗೆ ಲವ್ ಮಾಕ್ಟೇಲ್ ಚಿತ್ರ ಕನೆಕ್ಟ್ ಆಗಿದ್ದು, ಡಾರ್ಲಿಂಗ್ ಕೃಷ್ಣ ಮೊದಲ ನಿರ್ದೇಶನದಲ್ಲೇ ಗೆದ್ದಿದ್ದರು.ಮನರಂಜನೆಯ ಜೊತೆಗೆ ಪ್ರೀತಿಯ ಅಲೆಯ ಮೇಲೆ ಸಾಗುವ ಮನಮುಟ್ಟುವ ಹಾಗೂ ಹೃದಯ ತಟ್ಟುವ ಪ್ರೇಮಕಥೆ ಲವ್ ಮಾಕ್ಟೇಲ್ ಚಿತ್ರದಲ್ಲಿದ್ದು ಎಲ್ಲರೂ ಲೈಫ್ ನಲ್ಲೂ ಕೂಡ ನಡೆಯುವ ಒಂದಷ್ಟು ಲವ್ ಸ್ಟೋರಿಗಳನ್ನು ಸೇರಿಸಿ ಫ್ರೆಶ್ ಅಂಡ್ ನವಿರಾಗಿ, ಪ್ರಬುದ್ಧವಾಗಿ ಕಟ್ಟಿಕೊಡೋ ಪ್ರಯತ್ನದಲ್ಲಿ ನಟ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಗೆದ್ದಿದ್ದರು ಅಂತಾನೇ ಹೇಳಬಹುದು.

ಇದೀಗ ಲವ್ ಮಾಕ್ಟೇಲ್ ೨ ಸಿನಿಮಾವನ್ನು ಕೂಡ ಕೈಗೆತ್ತಿಕೊಂಡಿರುವ ಈ ಜೋಡಿಗಳು ಈಗಾಗಲೇ ಚಿತ್ರದ ಲಿರಿಕಲ್ ಸಾಂಗ್ ಕೂಡ ಬಿಡುಗಡೆ ಮಾಡಿದ್ದಾರೆ.ಇದೆಲ್ಲದರ ಜೊತೆಗೆ ಡಾರ್ಲಿಂಗ್ ಕೃಷ್ಣ ಅವರಿಗೆ ಸಾಲು ಸಾಲು ಸಿನಿಮಾಗಳಿದ್ದು, ಈಗಾಗಲೇ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದೀಗ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಅಭಿನಯಿಸಿರುವ ಶುಗರ್ ಫ್ಯಾಕ್ಟರಿ ಸಿನಿಮಾದಿಂದ ಹೊಸದೊಂದು ಸುದ್ದಿ ಹೊರಬಂದಿದ್ದು ಸಿನಿಮಾದ ಟೀಸರ್ ಅನ್ನು ಜೂನ್ 12 ರಂದು ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಲಿದ್ದಾರೆ.

ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಸೋನಾಲ್, ಶಿಲ್ಪಾ ಶೆಟ್ಟಿ ಅಭಿನಯಿಸುತ್ತಿದ್ದು ಚಿತ್ರದ ಮೇಲೆ ನಿರೀಕ್ಷೆಗಳು ಬಹಳ ಹೆಚ್ಚಿದೆ. ಇನ್ನು ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗುವ ಮೊದಲು ಗೋವಾದಲ್ಲಿ ಪ್ರಮುಖ ದೃಶ್ಯಗಳು ಹಾಗೂ ಹಾಡಿನ ಚಿತ್ರೀಕರಣವನ್ನು ಚಿತ್ರತಂಡ ಮುಗಿಸಿದೆ.ದೀಪಕ್ ಅರಸ್ ಎಂಬುವವರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಲವ್ ಮಾಕ್ಟೇಲ್ 2 ಜೊತೆ ಕೃಷ್ಣ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಶುಗರ್ ಫ್ಯಾಕ್ಟರಿ ಇದೇ ವರ್ಷ ತೆರೆಕಾಣಲಿದೆ.