5 ನಿಮಿಷದ ಅರಸು ಚಿತ್ರಕ್ಕೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ

 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ , ಮೋಹಕತಾರೆ ರಮ್ಯಾ ಹಾಗೂ ಮೀರಾ ಜಾಸ್ಮಿನ್ ಅಭಿನಯದ ಸೂಪರ್ ಡೂಪರ್ ಹಿಟ್ ಸಿನಿಮಾ ಅರಸು ಮರೆಯಲು ಸಾಧ್ಯವೇ ಕನ್ನಡ ಸಿನಿ ಪ್ರೇಕ್ಷಕರಿಗೆ ಬಹಳ ಅಚ್ಚು ಮೆಚ್ಚಾದಂತಹ ಸಿನಿಮಾ ಇದಾಗುದ್ದು, ದೂರದರ್ಶನದಲ್ಲಿ ಪ್ರಸಾರವಾದರೆ ಇಂದಿಗೂ ಕೂಡ ಮನೆಮಂದಿಯೆಲ್ಲ ಕುಳಿತು ನೋಡುತ್ತಾರೆ. ಆಗರ್ಭ ಶ್ರೀಮಂತರಾದ ಶಿವರಾಜ್, ತನ್ನ ಮ್ಯಾನೇಜರ್ ಮಗಳಾದ ಶ್ರುತಿಯನ್ನು ಪ್ರೀತಿಸುತ್ತಾನೆ. ಆದರೆ ಆಕೆ ಶ್ರೀಮಂತ ವ್ಯಕ್ತಿಯ ಪ್ರೀತಿಯನ್ನು ನಿರಾಕರಿಸಿ ಬಿಡುತ್ತಾಳೆ. ಹಲಸೂರು ಸಿನಿಮಾದ ಕಥೆ ಬರೆಯುವ ಸಮಯದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಲು ದರ್ಶನ್ ರವರೇ ಸೂಕ್ತ ಎಂದು ಎಂದು ನಿರ್ಧರಿಸಿದ್ದರಂತೆ. ಈ ಕಾರಣದಿಂದಾಗಿ ರಾಘಣ್ಣ ಅವರು ದರ್ಶನ್ ಅವರಿಗೆ ಕರೆ ಮಾಡಿ ಭೇಟಿಯಾಬೇಕೆಂದು ಕೇಳುತ್ತಾರೆ. ನಂತರ ಸರಿಯಾದ ಸಮಯದಲ್ಲಿ ಇಬ್ಬರು ಕೂಡ ಭೇಟಿ ಮಾಡಿದ್ದು ಅಪ್ಪು ಸಿನಿಮಾವೊಂದರಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಬೇಕು ಎಂದು ಅವರ ಬಳಿ ಮಾತನಾಡುದ್ದಾರೆ. ಆ ಕ್ಷಣಕ್ಕೆ ಅವರು ಏನನ್ನೂ ಯೋಚನೆ ಮಾಡದೇ ಆಯ್ತು ರಾಘಣ್ಣ, ಪಾತ್ರ ಮಾಡುತ್ತೀನಿ ಎಂದು ಬಿಟ್ಟರಂತೆ.

ಆದರೆ ಈ ವೇಳೆ ಒಂದು ಕಂಡೀಷನ್ ಹಾಕಿದ ಡಿ ಬಾಸ್, ಯಾವುದೇ ಕಾರಣಕ್ಕೂ ಹಣ ಕೊಡ್ತೀನಿ ಅನ್ನಬಾರದು ಎಂದು ಹೇಳಿದ್ದಾರೆ. ಇದಕ್ಕೆ ರಾಘಣ್ಣ ಇದು ಸಾಧ್ಯವಿಲ್ಲ, ನೀವು ತಗೆದುಕೊಳ್ಳಬೇಕು ಎಂದು ಬಲವಂತ ಮಾಡಿದ್ದಾರೆ ಹಾಗೂ ಮನವೊಲಿಸುವ ಪ್ರಯತ್ನ ಕೂಡ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ದರ್ಶನ್ ಅವರು ಒಂದೇ ಒಂದು ಮಾತನ್ನು ಹೇಳಿದ್ದು, ಅದನ್ನು ಈ ಕ್ಷಣಕ್ಕೂ ಕೂಡ ರಾಘಣ್ಣ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.