ಬೆಳಿಗ್ಗೆಯಾದರೂ ಮನೆಯಿಂದ ಒಬ್ಬರೂ ಹೊರಬರಲಿಲ್ಲ, ಬಾಗಿಲು ತೆಗೆದ ಅಕ್ಕಪಕ್ಕದವರು ಬೆಚ್ಚಿ ಬಿದ್ದರು. ನಿಜಕ್ಕೂ ರಾತ್ರೋ ರಾತ್ರಿ ಏನಾಗಿ ಹೋಗಿತ್ತು ಗೊತ್ತಾ? ಮನಕಲಕುವಂತಿದೆ

 ಈ ಕೊರೊನಾ ಎರಡನೇ ಅಲೆ ನಿಜಕ್ಕೂ ಸಮುದ್ರದ ಅಲೆಯಂತೆಯೇ ಜನರ ಜೀವನ ಒಮ್ಮೆಲೆ ಕೊಚ್ಚಿ ಹೋಗುವಂತೆ ಮಾಡಿ ಬಿಟ್ಟಿದೆ.. ಹೌದು ಒಂದೆಡೆ ಕೊರೊನಾ ಸೋಂಕಿಗೆ ಗುರಿಯಾಗಿ ಸರಿಯಾದ ಚಿಕಿತ್ಸೆ ಸಿಗದೆ ಸಾಲು ಸಾಲು ಜೀವಗಳು ಇನ್ನಿಲ್ಲವಾಗುತ್ತಿದ್ದರೆ ಇತ್ತ ಜನರ ಜೀವನ ಬೀದಿಗೆ ಬಿದ್ದು ಇತ್ತ ಬೇಡಲು ಆಗದೇ ಅತ್ತ ಬದುಕಲು ಬೇರೆ ದಾರಿ ಕಾಣದೇ ಹಸಿವಿನಲ್ಲಿಯೇ ಜನ ತತ್ತರಿಸಿ ಹೋಗುವಂತಾಗಿದೆ.. ಆದರೆ ಇದೆಲ್ಲವನ್ನೂ ಮೀರಿ‌ ಇಲ್ಲೊಂದು ಮನಕಲಕುವ ಘಟನೆ ನಡೆದಿದ್ದು ನಿಜಕ್ಕೂ ಪರಿಸ್ಥಿತಿ ಯಾಕೆ ಈ ರೀತಿ ಆಗಿ ಹೋಯ್ತು ಎಂಬ ಉತ್ತರವಿಲ್ಲದ ಅಸಹಾಯಕ ಪ್ರಶ್ನೆ ಮೂಡಿದೆ.

ಹೌದು ಇಲ್ಲೊಂದು ಬಡ ಕುಟುಂಬ.. ರಾತ್ರಿ ಎಂದಿನಂತೆ ಮಲಗಿದರು.ಮ್ ಆದರೆ ಬೆಳಗಾಗುವುದರೊಳಗೆ ಅಲ್ಲಿ ನಡೆದಿದ್ದೇ ಬೇರೆ.. ಬೆಳಿಗ್ಗೆ ತಡವಾದರೂ ಯಾರೂ ಸಹ ಮನೆಯಿಂದ ಹೊರ ಬಾರದ ಕಾರಣ ಅಕ್ಕಪಕ್ಕದ ಮನೆಯವರು ಬಾಗಿಲು ತೆರೆದು ನೋಡಿದಾಗ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ.. ಹೌದು ಆ ಬಡ ಕುಟುಂಬ ಹೇಗೋ ಕೂಲಿ ನಾಲಿ‌‌ ಮಾಡಿಕೊಂಡು ಜೀವನ ಸಾಗಿಸುತಿತ್ತು.. ಆದರೆ ಕೊರೊನಾದ ಎರಡನೇ ಅಲೆಯ ಅಬ್ಬರಕ್ಕೆ ಸಂಪೂರ್ಣ ಕುಟುಂಬ ತತ್ತರಿಸಿ ಹೋಯ್ತು.. ಜೀವನ ಮೂರಾಬಟ್ಟೆ ಆಗಿ ಹೋಯ್ತು.. ದುಡಿಯಲು ದಾರಿಯೇ ಇಲ್ಲ.. ಲಾಕ್ ಡೌನ್ ಆಯಿತು.. ಮನೆಯಲ್ಲಿ ಅಕ್ಕಿ ಕಾಳಿಲ್ಲದ ನೋವು.. ಇದೆಲ್ಲದರ ನಡುವೆ ಕೊರೊನಾ ಸೋಂಕು ಕೂಡ ಈ ಬಡ ಕುಟುಂಬಕ್ಕೆ ತಗುಲಿತು.. ಆದರೆ ಹೇಗೋ ದೇವರ ದಯೆಯಿಂದ ಕೊರೊನಾದಿಂದ ಗುಣಮುಖವೇನೋ ಆದರು.. ಆದರೆ ಕೊರೊನಾಗಿಂತ ಕೆಟ್ಟದು ಹಸಿವು ಎಂಬುದಕ್ಕೆ ಹೆದರಿ ಸಂಪೂರ್ಣ ಕುಟುಂಬ ದುಡುಕಿನ ನಿರ್ಧಾರ ಮಾಡಿಯೇ ಬಿಟ್ಟರು.. ರಾತ್ರೋ ರಾತ್ರಿ ಸಾಲು ಸಾಲಾಗಿ ಬಡತನಕ್ಕೆ ಬೆದರಿ ಇನ್ನಿಲ್ಲವಾಗಿ ಹೋದರು.
ಹೌದು ಇಂತಹ ಸಂಕಟ ತರಿಸುವ ಘಟನೆ ನಡೆದಿರೋದು ಚಾಮರಾಜನಗರದ ಮೂಕನ ಹಳ್ಳಿ ಎಂಬ ಗ್ರಾಮದಲ್ಲಿ.. ಹೌದು ಮೂಕನ ಹಳ್ಳಿ ಗ್ರಾಮದ ನಿವಾಸಿಗಳಾದ ಮಹದೇವಸ್ವಾಮಿ ಅವರಿಗೆ ಕೇವಲ ನಲವತ್ತೈದು ವರ್ಷ ವಯಸ್ಸಾಗಿತ್ತು.. ಅವರ ಪತ್ನಿ ಮಂಗಳಮ್ಮ.. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಗೀತಾ ಹಾಗೂ ಶೃತಿ.. ಕೆಲ ದಿನಗಳ ಹಿಂದೆ ಮಹದೇವಸ್ವಾಮಿ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.. ಆದರೆ ಮಹದೇವಸ್ವಾಮಿ ಅವರು ಹೋಂ ಐಸೋಲೇಷನ್ ನಲ್ಲಿಯೇ ಇದ್ದು ಗುಣಮುಖ ರಾಗಿದ್ದರು.. ಆದರೆ ಲಾಕ್ ಡೌನ್ ನಿಂದ ಈ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿತ್ತು.
ಹೌದು ಬಡತನದ ಮುಂದೆ ಬೇರೆ ಎಲ್ಲಾ ಕಾಯಿಲೆಗಳೂ ಸಹ ಸಣ್ಣದೇ ಎಂಬುದಕ್ಕೆ ಈ ಘಟನೆಯೇ ಉದಾಹರಣೆ.. ಮಂಗಳವಾರ ರಾತ್ರಿ ಮಹದೇವಸ್ವಾಮಿ ಅವರ ಸಂಪೂರ್ಣ ಕುಟುಂಬ ಆ ಒಂದು ಕೆಟ್ಟ ನಿರ್ಧಾರವನ್ನು ಮಾಡಿಯೇ ಬಿಟ್ಟಿತ್ತು.. ಹೌದು ಈ ಬಡತನವನ್ನು ಹಸಿವನ್ನು ಸಹಿಸಲಾಗದೆ ಎರಡು ಚಿಕ್ಕ ಮಕ್ಕಳ ಜೊತೆ ಮಹದೇವಸ್ವಾಮಿ ಹಾಗೂ ಮಂಗಳ ಅವರನ್ನು ಸೇರಿದಂತೆ ನಾಲ್ವರು ಸಹ ರಾತ್ರೋ ರಾತ್ರಿ ಜೀವ ಕಳೆದುಕೊಂಡು ಬಿಟ್ಟಿದ್ದರು. ಬುಧವಾರ ಬೆಳಿಗ್ಗೆ ಎಷ್ಟು ಸಮಯವಾದರೂ ಮನೆಯಿಂದ ಯಾರೂ ಸಹ ಹೊರ ಬಾರದ ಕಾರಣ ಅಕ್ಕ ಒಅಕ್ಕದ ಮನೆಯವರು ಬಾಗಿಲು ತೆರೆದು ನೋಡಿದಾಗ ಈ ಕರುಣಾಜನಕ ಘಟನೆ ನಡೆದಿರೋದು ಕಂಡು ಬೆಚ್ಚಿ ಬಿದ್ದಿದ್ದಾರೆ.. ಸಂಪೂರ್ಣ ಕುಟುಂಬವೇ ಇಲ್ಲವಾದದ್ದ ಕಂಡು ಗ್ರಾಮಸ್ಥರು ಕಂಬನಿ‌ ಮಿಡಿದಿದ್ದಾರೆ.. ದಯವಿಟ್ಟು ನಿಮ್ಮ ನಿಮ್ಮ ಅಕ್ಕಪಕ್ಕದಲ್ಲಿಯೂ ಇಂತಹ ಅನೇಕ ಕುಟುಂಬಗಳು ಇರುತ್ತವೆ.. ದಯವಿಟ್ಟು ಅಂತಹ ಕುಟುಂಬಗಳಿಗೆ ಕೈಲಾದಷ್ಟು ಸಹಾಯ ಮಾಡಿ.. ಹಸಿವಿನಿಂದ ಇಂತಹ ನಿರ್ಧಾರ ತೆಗೆದುಕೊಳ್ಳುವ ಅದೆಷ್ಟೋ ಕುಟುಂಬಗಳು ಅಕ್ಕ ಪಕ್ಕದ ಜನರ ಮಾನವೀಯತೆಯ ನೆರವಿನಿಂದ ಬದುಕುಳಿಯುವಂತಾಗಲಿ.. ದಯವಿಟ್ಟು ಕೈಲಾದಷ್ಟು ಅಕ್ಕಪಕ್ಕದವರಿಗೆ ನೆರವಾಗಿ.. ಮಹದೇವಸ್ವಾಮಿ ಅವರ ಕುಟುಂಬದ ಸ್ಥಿತಿ ಯಾರಿಗೂ ಬಾರದಿರಲಿ.