ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮಕ್ಕೂ ಮೊದಲು ಯೂಟ್ಯೂಬ್ನಲ್ಲಿ ತುಂಬಾನೇ
ಫೇಮಸ್ ಆಗಿದ್ದ ಬ್ಯೂಟಿ ಈ ಅರಿಯಾನಾ ಗ್ಲೋರಿ. ರಾಮ್ ಗೋಪಾಲ್ ವರ್ಮಾ ಅವರ ಸಂದರ್ಶನ
ಮಾಡಿದ ನಂತರ, ಅದರಲ್ಲಿ ನಿರ್ದೇಶಕ ಕೇಳಿದ್ದ ಒಂದೇ ಒಂದು ಮಾತಿನಿಂದ ಅರಿಯಾನಾ
ರಾತ್ರೋರಾತ್ರಿ ಸ್ಟಾರ್ ಆಗಿದ್ದರು.![](https://blogger.googleusercontent.com/img/b/R29vZ2xl/AVvXsEi0amzhAwb1BMdWx9SkrRWy07-t0LxwtrGRG3l2tF7kOuoFXpQVFmT4UXzrP93P6TSrlabFZhYoszHW8t6r-hl-_Lq8M4nASgwb4RECuWF4qRTMadiF5mGkSwe6IRJdOBVrpAfeALogmTU/w640-h426/FotoJet-1-15-1024x683.jpg)
ಅರಿಯಾನಾ ಗ್ಲೋರಿ ಅಪ್ಪಟ ತೆಲುಗು ಹುಡುಗಿ. ಬಿಗ್ ಬಾಸ್ಗಿಂತ ಮೊದಲು
ಯೂಟ್ಯೂಬ್ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ರಾಮ್ ಗೋಪಾಲ್ ವರ್ಮಾ ಒಮ್ಮೆ
ಅರಿಯಾನಾ ಅವರನ್ನು ಬಿಕಿನಿಯಲ್ಲಿ ನೋಡಬೇಕು ಎಂದಿದ್ದರು. ಆ ಒಂದು ಡೈಲಾಗ್ನಿಂದಲೇ
ಅರಿಯಾನಾ ರಾತ್ರೋರಾತ್ರಿ ಫೇಮಸ್ ಆಗಿದ್ದರು. ಅರಿಯಾನಾ ಜೊತೆ ರಾಮ್ ಗೋಪಾಲ್ ವರ್ಮಾ
ಲೆಟೆಸ್ಟ್ ಫೋಟೋಶೂಟ್ನ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಈ ಫೋಟೋಶೂಟ್ನಲ್ಲಿ ಜಿಮ್ನಲ್ಲಿ ಅರಿಯಾನಾ ಹಾಗೂ ರಾಮ್ ಗೋಪಾಲ್ ವರ್ಮಾ ಒಟ್ಟಿಗೆ ವರ್ಕೌಟ್ ಮಾಡುತ್ತಿದ್ದಾರೆ. ಹೌದು, ರಾಮ್ ಗೋಪಾಲ್ ವರ್ಮಾ ಅವರು ಜಿಮ್ನಲ್ಲಿರುವಾಗ ಅರಿಯಾನಾ, ನಿರ್ದೇಶಕನ
ಸಂದರ್ಶನಕ್ಕಾಗಿ ಹೋಗಿದ್ದರಂತೆ. ಸಂದರ್ಶನ ಮುಗಿದ ನಂತರ ಇಬ್ಬರೂ ಒಟ್ಟಿಗೆ ವರ್ಕೌಟ್
ಮಾಡಿದ್ದಾರೆ ಎಂದು ಹೇಳುವುದರೊಂದಿಗೆ ರಾಮ್ ಗೋಪಾ ಲ್ ವರ್ಮಾ ಕಮಿಂಗ್ ಸೂನ್ ಎಂದೂ
ಬರೆದುಕೊಂಡಿದ್ದಾರೆ.
ಇದನ್ನು ನೋಡಿದ ನೆಟ್ಟಿಗರು ಶೀಘ್ರದಲ್ಲೇ ಅರಿಯಾನಾ ಗ್ಲೋರಿ ರಾಮ್ ಗೋಪಾಲ್ ವರ್ಮಾ
ಅವರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ.