ಮನೆಯಲ್ಲಿ ನೈಟಿ ಧರಿಸುವ ಮಹಿಳೆಯರು ತಪ್ಪದೇ ಓದಿ..!!

 

ಉಡುಗೆ: ಮಾನವ ಶರೀರವನ್ನು ಮುಚ್ಚುವ ಸಾಧನ; ಉಡುಪು, ಶರೀರವನ್ನು ಮುಚ್ಚುವುದರೊಂದಿಗೆ ರಕ್ಷಿಸುತ್ತದೆ ಮತ್ತು ಅಲಂಕರಿಸುತ್ತದೆ. ಮಾನವರಿಗೂ ಪ್ರಾಣಿಗಳಿಗೂ ಇರುವ ಒಂದು ಮುಖ್ಯ ವ್ಯತ್ಯಾಸವೆಂದರೆ ಅವರು ಧರಿಸುವ ಉಡುಪು.ಮಾನವರು ಉಡುಪನ್ನೇಕೆ ಧರಿಸುವರೆಂಬುದರ ವಿಚಾರವಾಗಿ ತತ್ತ್ವಜ್ಞರೂ ಸಾಹಿತಿಗಳೂ, ಮಾನವಶಾಸ್ತ್ರಜ್ಞರೂ ಮನಶ್ಶಾಸ್ತ್ರಜ್ಞರೂ ಹೀಗೆ ಎಲ್ಲ ಬಗೆಯ ಚಿಂತಕರೂ ವಿಭಿನ್ನ ಚಿಂತನೆಗಳನ್ನು ನಡೆಸಿದ್ದಾರೆ. ಸಭ್ಯರೆನಿಸಿಕೊಳ್ಳಬೇಕೆಂಬ ಹಠಾತ್ ಪ್ರೇರಣೆಯಿಂದ ಮಾನವರು ಮೊದಮೊದಲು ಉಡುಪು ಧರಿಸತೊಡಗಿದರೆಂಬ ವಾದವನ್ನು ಆಧುನಿಕ ಮಾನವಶಾಸ್ತ್ರಜ್ಞರು ತಳ್ಳಿಹಾಕಿದ್ದಾರೆ.

ಏಕೆಂದರೆ ಮಾನರಕ್ಷಣೆಯ ಅರ್ಥವೇ ಕಾಲದಿಂದ ಕಾಲಕ್ಕೆ ಬಹಳ ಮಟ್ಟಿಗೆ ವ್ಯತ್ಯಾಸಗೊಂಡಿದೆ. ಇದನ್ನು ಕುರಿತ ಭಾವನೆಯೆಲ್ಲ ಬಹುತೇಕ ಕೇವಲ ಅವಿಚಾರಕ ಸಂಪ್ರದಾಯಗಳ ಸಮುದಾಯ ಫಲ. ಅರಬ್ಬೀ ಹೆಂಗಸು ಬುರಕಿ ಧರಿಸದಿದ್ದಾಗ ಆಕೆಯನ್ನು ಅಪರಿಚಿತರು ಕಂಡರೆ ಆಕೆ ಒಡನೆಯೇ ಉಟ್ಟ ಲಂಗದಿಂದ ಮುಖ ಮುಚ್ಚಿಕೊಳ್ಳುತ್ತಾಳೆ. ಕಾಲುಗಳನ್ನು ತೋರಗೊಡುವುದು ಅಸಭ್ಯವೆಂಬುದು ಚೀನಿಯರ ನಂಬಿಕೆಯಾಗಿತ್ತು. ಐರೋಪ್ಯ ಸ್ತ್ರೀಯರು ತಮ್ಮ ಎದೆಯ ಭಾಗದ ಪ್ರದರ್ಶನವಾಗುವಂತೆ ಉಡುಪು ಧರಿಸಿದ್ದರೂ ಕಾಲಿನ ಹರಡುಕಾಣಿಸಿಕೊಂಡಾಗ ನಾಚಿಕೆಯಿಂದ ಮುದುಡಿಕೊಳ್ಳುವುದನ್ನು 20ನೆಯ ಶತಮಾನದ ಆದಿಕಾಲದವರೆಗೂ ಕಾಣಬಹುದಾಗಿತ್ತು.

ಚಳಿ, ಗಾಳಿ, ಹಿಮ ಮುಂತಾದ ಪ್ರಾಕೃತಿಕ ವ್ಯಾಪಾರಗಳಿಂದ ದೇಹ ರಕ್ಷಿಸಿಕೊಳ್ಳುವ ಉದ್ದೇಶದಿಂದ ಉಡುಪಿನ ಸೃಷ್ಟಿಯಾಯಿತೆನ್ನುವ ವಾದವೂ ಉಂಟು. ಆದರೆ ಪ್ರಪಂಚದ ಪುರಾತನ ನಾಗರಿಕತೆಗಳೆಲ್ಲ ವಿಕಾಸ ಹೊಂದಿದ್ದು ಉಷ್ಣ ದೇಶಗಳಲ್ಲಿ. ಕಚ್ಚುವ ಹುಳುಹುಪ್ಪಟೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮನುಷ್ಯ ಉಡುಪನ್ನು ಸೃಷ್ಟಿಸಿದನೆಂಬುದು ಬಹುಶಃ ಹೆಚ್ಚು ಸಮಂಜಸ. ಬೇಟೆಯ ಅಸ್ತ್ರಗಳನ್ನೂ ಬಲಿಬಿದ್ದ ಪ್ರಾಣಿಗಳನ್ನೂ ಕೈಯಿಂದ ಹೊರುವುದಕ್ಕಿಂತ ಮೈಗೆ ಕಟ್ಟಿಕೊಳ್ಳುವುದೂ ನಡುವಿಗೆ ಬಿಗಿದ ಒರೆಯಲ್ಲೊ ಚೀಲದಲ್ಲೊ ಅವನ್ನು ಹಾಕಿಕೊಳ್ಳುವುದೂ ಹೆಚ್ಚು ಸರಾಗವೆಂದು ಆತನಿಗೆ ಎನಿಸಿರಬೇಕು.

ಮನುಷ್ಯ ತನ್ನ ಪ್ರತಿಷ್ಠೆ ಬೆಳೆಸಿಕೊಳ್ಳುವ ಉದ್ದೇಶದಿಂದಲೂ ಉಡುಪಿಗೆ ಮಾರು ಹೋಗಿದ್ದಿರಬಹುದು. ಉಡುಪು ಆಭರಣಗಳೂ ಪ್ರಾಣಿಗಳ ಪಾಲಿಗೆ ಸಾಧ್ಯವಿಲ್ಲದ ಒಂದು ಪರಿಕರ. ತಲೆಯ ಟೊಪ್ಪಿಗೆಯಲ್ಲಿ ಗರಿಯೊಂದನ್ನು ಸಿಕ್ಕಿಸಿಕೊಂಡರೆ ಅವನ ನಿಲುವೂ ಆತ್ಮವಿಶ್ವಾಸವೂ ಬೆಳೆದಂತೆ. ಹೆಚ್ಚು ಗರಿಗಳನ್ನು ಸಿಕ್ಕಿಸಿಕೊಂಡಷ್ಟೂ ಅವು ಇತರರ ಅಸೂಯೆಗೆ ಕಾರಣ. ಇವನ್ನು ಧರಿಸಲು ಹೋರಾಟ ಅನಿವಾರ್ಯವೇ ಆದೀತು. ಈ ಹೋರಾಟದಲ್ಲಿ ಗೆದ್ದವರಿಗೆ ಮಾತ್ರ ಹೆಚ್ಚು ಪುಕ್ಕ ಧರಿಸುವ ಅಧಿಕಾರ. ಇಂದಿಗೂ ಸೈನ್ಯದಲ್ಲೂ ಸಾರ್ವಜನಿಕ ಜೀವನದಲ್ಲೂ ಪ್ರಭಾವ ಬೀರುವ ಪದಕಗಳೂ ಬಗೆ ಬಗೆಯ ಉಡುಪುಗಳೂ ಆಯಾ ಅಂತಸ್ತುಗಳ ಸಂಕೇತ.

ಹೆಣ್ಣಿನ ಉಡುಪು ಅನುಸರಿಸುವ ಧರ್ಮವೇ ಬೇರೆ. ಸ್ತ್ರೀದೇಹದ ಬೇರೆ ಬೇರೆ ಭಾಗಗಳೂ ವಸ್ತ್ರ ರಹಿತವಾಗುವುದು ಗಂಡಸಿನ ಗಮನ ಸೆಳೆಯುವ ಸಾಧನಗಳೆಂದು ಫ್ಲೂಗೆಲ್ ಮುಂತಾದ ಮನೋವಿಜ್ಞಾನಿಗಳು ನೀಡಿರುವ ವಿವರಣೆ. ಉಡುಪು ತಯಾರಿಸುವವರು ಆಗಿಂದಾಗ್ಗೆ ಬಳಕೆಗೆ ತರುವ ಹೊಸ ಹೊಸ ಫ್ಯಾಷನ್ನುಗಳು ಈ ಗಮನ ಕೇಂದ್ರದ ಬದಲಾವಣೆಗಾಗಿ ಅನುಸರಿಸುವ ಹವಣರಿತ ವಿಧಾನಗಳೆಂಬುದಾಗಿ ಅವರ ವಿಶ್ಲೇಷಣೆ. ಆದರೆ ಹೆಂಗಸರ ಉಡುಪಿನ ಹಿಂದೆ ಫ್ಯಾಷನ್ನಿನ ದೃಷ್ಟಿಯೇ ಎಂದೆಂದೂ ಇರಲಿಲ್ಲ. ಸಾಮಾನ್ಯ ಸ್ತ್ರೀಪುರುಷರ ಹಿಂದೆ ಇರುವ ಮುಖ್ಯ ಉದ್ದೇಶವೆಂದರೆ ಸಂಸಾರದ ಬೆಳೆವಣಿಗೆ. ಗೃಹಕೃತ್ಯದ ನಿತ್ಯಕೆಲಸಗಳಲ್ಲಿ ತೊಡಗುವ ದೈಹಿಕ ಮಾನಸಿಕ ಸಾಮರ್ಥ್ಯ, ಸಾಮರಸ್ಯ. ಇಂಥ ಸನ್ನಿವೇಶಗಳಲ್ಲಿ ಉಡುಪು ಎಂದೂ ಪ್ರಧಾನವಾಗಿಲ್ಲ.

ಗ್ರೀಕ್ ನಾಗರಿಕತೆಯ ಔನ್ನತ್ಯದ ಕಾಲದಲ್ಲೂ ಸಂಭಾವಿತ ಸಂಸಾರಗಳಲ್ಲಿ ಫ್ಯಾಷನ್ಗಳು ಸುಳಿದಿರಲಿಲ್ಲ. ಮುಂದೆ ಸಾಮ್ರಾಜ್ಯಗಳು ಬೆಳೆದು ರಾಜವೈಭವದ ದಿನಗಳು ಬಂದಾಗ ರಾಜರ, ಶ್ರೀಮಂತರ ಗಮನ ಸೆಳೆಯುವ ಉದ್ದೇಶದಿಂದ ಫ್ಯಾಷನ್ನುಗಳು ಬೆಳೆದುವೆಂಬುದು ಇತಿಹಾಸಕಾರ ಕಂಡಿರುವ ಸತ್ಯ. ಅಂತೂ ಒಟ್ಟಿನಲ್ಲಿ ಅಂತಸ್ತಿನ ಹಮ್ಮು, ಮನ ಸೆಳೆಯುವ ಬಿನ್ನಾಣ, ಉಪಯುಕ್ತತೆ- ಇವೇ ಫ್ಯಾಷನ್ನುಗಳ ಮೂಲ. ಗಂಡಿನ ಉಡುಪಿಗೆ ಮೊದಲನೆಯದೂ ಕೊನೆಯದೂ ಹೆಣ್ಣಿನ ಉಡುಪಿಗೆ ಕೊನೆಯ ಎರಡೂ ಬಹುತೇಕ ಉದ್ದೇಶ. ಫ್ಯಾಷನ್ನುಗಳಿಗೆ ಅಸ್ತಿಭಾರವಾಗಿರುವ ಇನ್ನೊಂದು ಪ್ರವೃತ್ತಿಯೆಂದರೆ ರಾಷ್ಟ್ರ ವೈಶಿಷ್ಟ್ಯ. ಹಿಂದಿನ ಕಾಲದಲ್ಲಿ ಉಡುಗೆ ತೊಡುಗೆಗಳು ಬೇಗ ಬದಲಾಗುತ್ತಿರಲಿಲ್ಲ. ಆದರೆ ಜನಸಂಪರ್ಕ ಬೆಳೆದಂತೆ, ಸಂಚಾರಸಾಧನಗಳಲ್ಲಿ ಕ್ರಾಂತಿಯಾದಂತೆ, ರಾಷ್ಟ್ರಪ್ರಜ್ಞೆ ಮೂಡಿದಂತೆ ಒಂದೊಂದು ರಾಷ್ಟ್ರದ ವೈಶಿಷ್ಟ್ಯವಾಗಿ ಅಲ್ಲಲ್ಲಿನ ಜನರ ಉಡುಗೆ ತೊಡುಗೆಗಳು ಏಕರೀತಿಯವಾಗತೊಡಗಿದುವು. 18ನೆಯ ಶತಮಾನದ ಅಂತ್ಯದವರೆಗೂ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಂಗಸಿನ ಉಡುಗೆ ತೊಡುಗೆಗಳು ಆಕೆಯ ವರ್ಗವನ್ನೆತ್ತಿ ಸಾರುತ್ತಿದ್ದವು. ಆದರೆ ಮನ ಸೆಳೆಯುವುದು ಮುಖ್ಯ ಗುರಿಯಾದ ಮೇಲೆ ಈ ಪ್ರವೃತ್ತಿ ಕಡಿಮೆಯಾಗುತ್ತಿದೆ.

ನಮ್ಮ ಭಾರತ ಒಂದು ಸ್ವತಂತ್ರ ದೇಶ ಮತ್ತು ಭಾರತ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಕೂಡ ಸ್ವಾತಂತ್ರ್ಯವಿದೆ ಈ ದೇಶದಲ್ಲಿ ಯಾರು ಹೇಗೆ ಬೇಕಾದರೂ ಇರಬಹುದು ಮತ್ತು ಏನು ಬೇಕಾದರೂ ಮಾತನಾಡಬಹುದು ಎಂತಹ ಬಟ್ಟೆಗಳನ್ನು ಬೇಕಾದರೂ ಧರಿಸಬಹುದು. ಗಂಡಸರು ಬಿಡಿ ಹೆಣ್ಣು ಮಕ್ಕಳಂತೂ ವಿವಿಧ ಬಗೆಯ ರೀತಿಯ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ ಚೂಡಿದಾರಗಳು ಲಂಗ ದಾವಣಿಗಳು ಸೀರೆ ಜೀನ್ಸ್ ಟಿ-ಶರ್ಟ್ ಮತ್ತು ಕೆಲವರು ನೈಟಿಗಳನ್ನು ಹಾಕಿಕೊಳ್ಳುತ್ತಾರೆ. ಆದರೆ ಕೆಲವು ಕಾಲೇಜುಗಳಲ್ಲಿ ಮಾತ್ರ ಹೆಣ್ಣುಮಕ್ಕಳು ಜೀನ್ಸ್ ಮತ್ತು ಮಿಡಿಗಳನ್ನು ಧರಿಸಿಕೊಂಡು ಬರಬಾರದು ಎಂದು ಹೇಳುತ್ತಾರೆ ಆದರೆ ಪ್ರಿಯ ಮಿತ್ರರೇ ನಾವು ಹೇಳುತ್ತಿರುವ ಈ ಒಂದು ಗ್ರಾಮದಲ್ಲಿ ಹೆಣ್ಣುಮಕ್ಕಳು ನೈಟಿಗಳನ್ನು ಹಾಕಿಕೊಂಡು ಬಂದರೆ 2000 ರೂಪಾಯಿ ದಂಡ ವಿಧಿಸುತ್ತಾರೆ ಇದು ನಡಿತಾ ಇರೋದು ಕೂಡ ನಮ್ಮ ಭಾರತದಲ್ಲಿ ಇಷ್ಟಕ್ಕೂ ಈ ಗ್ರಾಮದಲ್ಲಿ ಮಹಿಳೆಯರು ಮತ್ತು ಹುಡುಗಿಯರು ನೈಟಿಗಳನ್ನು ಹಾಕಿಕೊಂಡು ಬಂದರೆ ದಂಡ ಹಾಕಲು ಕಾರಣವಾದರೂ ಏನು ಮತ್ತು ಹಳ್ಳಿ ಯಾವುದು ಎಂದು ಸುವರ್ಣ ನಾವು ತಿಳಿದುಕೊಳ್ಳೋಣ ಹೌದು ಪ್ರಿಯ ಮಿತ್ರರೇ ನಮ್ಮ ಪಕ್ಕದ ರಾಜ್ಯವಾದ ಆಂದ್ರಪ್ರದೇಶ.

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತೊಕದ ಪಲ್ಲಿ ಗ್ರಾಮದ ಈ ರೂಲ್ಸ್ ನಡೆಯುತ್ತಿದೆ ಹೌದು ಪ್ರಿಯಮಿತ್ರ ಅಲ್ಲಿಯ ಗ್ರಾಮದ ಮಹಿಳೆಯರು ನೈಟಿಯನ್ನು ಹಾಕಿಕೊಂಡು ರಸ್ತೆಗೆ ಬಂದರೆ 2000 ರೂಪಾಯಿ ದಂಡವನ್ನು ಹಾಕುತ್ತಿದ್ದಾರೆ ಮತ್ತು ಈ ರೀತಿಯಾಗಿ ನೈಟಿಗಳನ್ನು ಹಾಕಿಕೊಂಡು ಓಡಾಡುವ ಜನರ ಬಗ್ಗೆ ಮಾಹಿತಿಯನ್ನು ಕೊಟ್ಟವರಿಗೆ ಒಂದು ಸಾವಿರ ರೂಪಾಯಿ ಬಹುಮಾನವನ್ನು ಕೂಡ ಕೊಡಲಾಗುತ್ತದೆ ದಂಡ ಕಟ್ಟಿ ಮೂರನೇ ಬಾರಿ ಇದೇ ರೀತಿಯಾಗಿ ಮತ್ತೆ ನೈಟಿಗಳನ್ನು ಹಾಕಿಕೊಂಡು ರೋಡಿನ ಮಧ್ಯ ಓಡಾಡಿದರೆ ಅವರಿಗೆ ಆ ಗ್ರಾಮದಿಂದ ನಿಷೇಧವಿರುತ್ತದೆ ಮತ್ತು ಕೇವಲ.

ಮಹಿಳೆಯರು ರಾತ್ರಿ ಸಮಯದಲ್ಲಿ ಮನೆಯಲ್ಲಿದ್ದಾಗ ಮಾತ್ರ ನೈಟಿಗಳನ್ನು ಧರಿಸಬೇಕು. ಆದರೆ ಬೆಳಗಿನ ಜಾವ ಹೆಣ್ಣುಮಕ್ಕಳು ನೈಟಿಗಳನ್ನು ಹಾಕಿಕೊಂಡು ಆ ಊರಿನಲ್ಲಿ ಓಡಾಡಬಾರದು ಎಂದು ರೂಲ್ಸ್ ಮಾಡಲಾಗಿದೆ ಈ ರೀತಿ ದಂಡ ಪಡೆಯುವ ಗ್ರಾಮದ ಮುಖ್ಯಸ್ಥರು ಈ ದಂಡವನ್ನು ಗ್ರಾಮದ ಅಭಿವೃದ್ಧಿಗಾಗಿ ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ ಮತ್ತು ಇದಕ್ಕೆ ಮುಖ್ಯ ಕಾರಣ ಏನು ಎಂದರೆ ಕೆಲವು ಮಹಿಳೆಯರು ಎಲ್ಲದಕ್ಕೂ ನೈಟಿಗಳನ್ನು ಬಳಸುತ್ತಿದ್ದರಂತೆ ಅಂದರೆ ಈ ಮಹಿಳೆಯರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಕೂಡ ಈ ನೈಟಿಗಳನ್ನು ಹಾಕಿಕೊಂಡು ಹೋಗುತ್ತಿದ್ದರು. ಮತ್ತು ಅಂಗಡಿಗಳಿಗೂ ಕೂಡ ಈ ನೈಟಿಗಳನ್ನು ಧರಿಸಿಕೊಂಡು ಹೋಗುತ್ತಿದ್ದರಂತೆ ಇಷ್ಟೇ ಯಾಕೆ ಕೆಲವು ಮಹಿಳೆಯರಂತೂ ದೇವಸ್ಥಾನಕ್ಕೆ ಹೋಗಲು ಈ ನೈಟಿ ಧರಿಸಿಕೊಂಡು ಹೋಗುತ್ತಿದ್ದರಂತೆ ಈ ಒಂದು ಕಾರಣದಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಅಲ್ಲಿಯ ಮುಖಂಡರು ತಿಳಿಸಿದ್ದಾರೆ ಪ್ರಿಯ ಮಿತ್ರರೇ ನಿಮ್ಮ ಪ್ರಕಾರ ಈ ನೈಟಿಗಳನ್ನು ಹಾಕಿಕೊಂಡು ಓಡಾಡುತ್ತಿರುವ ಅಲ್ಲಿನ ಮಹಿಳೆಯರಿಗೆ 2000 ರೂಪಾಯಿ ದಂಡದ ನಿಯಮ ಸರಿ ಇದೆಯಾ ಅಥವಾ ತಪ್ಪಿದಿಯಾ ನೀವೇ ನಿರ್ಧರಿಸಿ ಗೆಳೆಯರೆ.