ಟಿಕ್ ಟಾಕ್ ನಂತಹ ಅಪ್ಲಿಕೇಶನ್ ಗಳು ಭಾರತ ದೇಶ ದಲ್ಲಿ ಬರುವ ಮುನ್ನ ಡಬ್ ಸ್ಮ್ಯಾಶ್ ಎಂಬ ಅಪ್ಲಿಕೇಶನ್ ಭಾರತದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಹೌದು ಸಿನಿಮಾ ನಟರ ಸಂಭಾಷಣೆಗಳಿಗೆ ಲಿಪ್ ಸಿಂಕ್ ಮಾಡುವಂತಹ ಈ ಅಪ್ಲಿಕೇಶನಲ್ಲಿ ಸಾಕಷ್ಟು ಮಂದಿ ತಮ್ಮ ನೆಚ್ಚಿನ ನಟರ ಸಂಭಾಷಣೆಯನ್ನು ಲಿಪ್ ಸಿಂಕ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದ್ದರು.ಇನ್ನು ಡಬ್‍ಸ್ಮಾಶ್ ನಲ್ಲಿ ವಿಡಿಯೋಗಳನ್ನು ಮಾಡುತ್ತಾ ಪ್ರೀತಿಯಲ್ಲಿ ಬಿದ್ದ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈ ಜೋಡಿಯ ವಿವಾಹಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಆಗಮಿಸಿ ಶುಭ ಕೋರಿದ್ದರು.
ಹೌದು ಡಬ್ ಸ್ಮ್ಯಾಶ್ ವೀಡಿಯೋ ಮುಖಾಂತರ ಕನ್ನಡದಲ್ಲಿ ಸೆಲೆಬ್ರೆಟಿಗಳ ಮೊದಲ ಜೋಡಿಗಳು ಎಂದರೆ ಸುಷ್ಮಿತಾ ಶೇಷಗಿರಿ ಹಾಗೂ ಅಲ್ಲು ರಘು ಅವರು. ಹೌದು ಈ ಜೋಡಿ ಯಾವ ಮಟ್ಟಕ್ಕೆ ಹೆಸರು ಮಾಡಿತ್ತು ಎಂದರೆ ಸಿನಿಮಾ ಸಿಲೆಬ್ರಿಟಿಗಳ ರೀತಿಯಲ್ಲಿ ನೆಟ್ಟಿಗರು ಇವರನ್ನು ಟ್ರೀಟ್ ಮಾಡುತ್ತಿದ್ದರು. ಅಲ್ಲದೆ ಅವರು ಮಾಡುತ್ತಿದ್ದ ಪ್ರತಿಯೊಂದು ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆ ಸಮಯದಲ್ಲಿ ಮಾಧ್ಯಮ ಲೋಕ ಹಾಗೂ ಪತ್ರಿಕೆಗಳಲ್ಲೆಲ್ಲಾ ಇವರಿಬ್ಬರ ಬಗ್ಗೆ ಕೊಂಡಾಡುತ್ತಿದ್ದರು.
ಡಬ್ ಸ್ಮ್ಯಾಶ್ ಮುಖಾಂತರವೇ ಪರಿಚಯವಾದ ಈ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅದರಲ್ಲಿಯೂ ಈ ದಂಪತಿಗಳಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರವರಿಗೆ ಬಹಳ ಹತ್ತಿರವಾಗಿದ್ದಾರೆ ಎಂಬುದು ವಿಶೇಷ. ಎರಡು ವರುಷಗಳ ಹಿಂದೆ ಸುಷ್ಮಿತಾ ಶೇಷಗಿರಿ ಹಾಗೂ ಅಲ್ಲು ರಘು ಸತಿ-ಪತಿಗಳಾಗಿ ಹೊಸ ಜೀವನಕ್ಕೆ ಮುನ್ನುಡಿ ಬರೆದಿದ್ದು, ಇನ್ನು ರಘು, ಧ್ರುವ ಸರ್ಜಾ ಅವರ ಅಭಿಮಾನಿಯಾಗಿದ್ದು ತಮ್ಮ ನೆಚ್ಚಿನ ನಟನನ್ನು ಮದುವೆಗೆ ಆಹ್ವಾನಿಸಿದ್ದರು. ಅಂತೆಯೇ ಮದುವೆಗೆ ಧ್ರುವ ಸರ್ಜಾ ಅವರು ಹಾಜರಾಗಿದ್ದು ಎಲ್ಲರ ಗಮನ ಸೆಳೆದಿದ್ದರು.
ಡಬ್‍ಸ್ಮಾಶ್ ನಲ್ಲಿ ರಘು ಮತ್ತು ಸುಷ್ಮಿತಾ ಅವರು ಮಾಡುತ್ತಿದ್ದ ವಿಡಿಯೋಗಳು
ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದು, ತನ್ನ ಮದುವೆಗೆ ಧ್ರುವ ಸರ್ಜಾ
ಆಗಮಿಸಿದ್ದ ವಿಡಿಯೋವನ್ನು ಕೂಡ ರಘು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ಅಭಿಮಾನಿಯ ಮದುವೆಗೆ ಬಂದಿದ್ದ ಧ್ರುವ ಸರ್ಜಾ ಒಂದು ಕ್ಷಣ ವಿವಾಹದ ಮನೆಯಲ್ಲಿ ಎಲ್ಲರ ಗಮನ
ಸೆಳೆದಿದ್ದಾರೆ ಅಂತಾನೇ ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ನಟ ದ್ರುವ ಸರ್ಜಾ
ಅವರ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತದೆ ಎಂದೇ
ಹೇಳಬಹುದು.