ನಟ ಹಾಗೂ ಸಕ್ರಿಯ ರಾಜಕಾರಣಿಯೂ ಆಗಿರುವ ನಿಖಿಲ್ ಕುಮಾರಸ್ವಾಮಿ ಅವರ ಅಭಿಮಾನಿಗಳಿಗೆ ಇಂದು ಒಂದು ಶುಭ ಸುದ್ದಿಯೊಂದು ದೊರೆತಿದೆ. ಏನು ಆ ಶುಭ ಸುದ್ದಿ ಎನ್ನುವುದಾದರೆ, ನಿಖಿಲ್ ಕುಮಾರಸ್ವಾಮಿ ಅವರು ತಂದೆಯಾಗುತ್ತಿದ್ದಾರೆ. ಅವರ ಪತ್ನಿ ರೇವತಿ ಅವರು 5 ತಿಂಗಳ ಗರ್ಭಿಣಿಯಾಗಿದ್ದು, ಇಂದು ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಶೇಷ ಹಾಗೂ ಸಿಹಿಸುದ್ದಿ ಹೊರ ಬಂದಿದೆ. ತಾನು ಅಜ್ಜನಾಗುತ್ತಿರುವಂತಹ ವಿಶೇಷ ಸುದ್ದಿಯನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಮಾಧ್ಯಮವೊಂದಕ್ಕೆ ಖಚಿತಪಡಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ 17ರಂದು ಕೊರೊನಾ ಲಾಕ್ ಡೌನ್ ನಡುವೆಯೇ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರು ತಮ್ಮ ವೈವಾಹಿಕ ಜೀವನಕ್ಕೆ ಅಡಿಯನ್ನು ಇಟ್ಟಿದ್ದರು.
ತಮ್ಮ ಹೆಂಡತಿಯ ಜನ್ಮದಿನದ ವಿಶೇಷದ ಹಿನ್ನೆಲೆಯಲ್ಲಿ ನಿಖಿಲ್ ಕುಮಾರ ಸ್ವಾಮಿ ಅವರು
ಪತ್ನಿಯ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಿದ್ದು, ಅವರು ಪತಿ-ಪತ್ನಿ ಇಬ್ಬರೂ
ಒಟ್ಟಾಗಿ ಇರುವಂತಹ ಒಂದು ಸುಂದರವಾದ ಹಳೆಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಮದುವೆಯ ನಂತರ ನಿಖಿಲ್ ಕುಮಾರಸ್ವಾಮಿ ಅವರು ಸಿನಿಮಾ ಮತ್ತು ರಾಜಕಾರಣ ಮಾತ್ರವೇ ಅಲ್ಲದೇ,
ಕೃಷಿಯಲ್ಲಿ ಕೂಡ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಮತ್ತೊಂದು ಕಡೆ
ರಾಜಕಾರಣದಲ್ಲಿ ಸಕ್ರಿಯವಾಗಿದ್ದು, ಜೆಡಿಎಸ್ ನ ಯುವ ನಾಯಕನಾಗಿ ಕಾರ್ಯವನ್ನು
ನಿರ್ವಹಿಸುತ್ತಿದ್ದಾರೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಹೊಸಮನೆಯ ನಿರ್ಮಾಣದ ಗುದ್ದಲಿ ಪೂಜೆಯನ್ನು
ನೆರವೇರಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಮುಂದಿನ ಸಿನಿಮಾ ಕೆಲಸದಲ್ಲಿ
ಸಹಾ ತೊಡಗಿಕೊಂಡಿದ್ದು, ಲಾಕ್ ಡೌನ್ ಗೂ ಮೊದಲು ಸಿನಿಮಾ ಚಿತ್ರೀಕರಣಕ್ಕಾಗಿ ಲೇಹ್ ನ
ಸುಂದರವಾದ ತಾಣಕ್ಕೆ ಹೋಗಿದ್ದಂತಹ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್
ಮಾಡಿಕೊಂಡು ಎಲ್ಲರ ಗಮನವನ್ನು ಸೆಳೆದಿದ್ದರು. ಅಲ್ಲದೇ ಆ ಫೋಟೋ ವಿಚಾರ ಕೂಡಾ ದೊಡ್ಡ
ಸುದ್ದಿಯಾಗಿತ್ತು.