ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ತಮ್ಮ ಸೌಂದರ್ಯದ ಗುಟ್ಟನ್ನು ರಟ್ಟು
ಮಾಡಿದ್ದಾರೆ. ಕೋಮಲವಾದ ತಮ್ಮ ತ್ವಚೆಯ ಸೀಕ್ರೇಟ್ ಹೇಳಿದ್ದನ್ನು ಕೇಳಿ ಅಭಿಮಾನಿಗಳು
ಮಾತ್ರ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಿನಿಮಾ ರಂಗದಲ್ಲಿ ಮಿಲ್ಕಿ ಬ್ಯೂಟಿ ಅವರ ಬ್ಯೂಟಿ ಅವರ ಸೀಕ್ರೇಟನ್ನು ತಿಳಿದುಕೊಳ್ಳಲು
ಅಭಿಮಾನಿಗಳು ಖಾತರರಾಗಿದ್ದಾರೆ. ಇತ್ತೀಚೆಗೆ ಅವರು ನೀಡಿದ ಸಂದರ್ಶನವೊಂದರಲ್ಲಿ ಅವರು
ತಮ್ಮ ತ್ವಚೆಯ ರಹಸ್ಯವನ್ನು ರಟ್ಟು ಮಾಡಿದ್ದಾರೆ.
ಆದರೆ ಅಭಿಮಾನಿಗಳು ಮಾತ್ರ ತಮ್ಮ ಪ್ರೀತಿ ನಟಿಮಣಿಯ ಬ್ಯೂಟಿ ರಹಸ್ಯವನ್ನು ಕೇಳಿ ಸಕತ್
ಶಾಕ್ ಆಗಿದ್ದಾರೆ. ಮೊಡವೆ ಸಮಸ್ಯೆ ಇತ್ತು. ಅದನ್ನು ಹೋಗಲಾಡಿಸಲು ಸಾಕಷ್ಟು ರೀತಿಯಲ್ಲಿ
ಪ್ರಯತ್ನ ಮಾಡಿದೆ. ಕೊನೆಗೆ ನಾನು ನನ್ನ ಮುಖದ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ಅತಿ
ವಿಚಿತ್ರವಾದ ಪರಿಹಾರವನ್ನು ಕಂಡುಕೊಂಡೆ. ಅದೇ ನನ್ನ ಬಾಯಿಯ ಎಂಜಲು. ಮುಖ್ಯವಾಗಿ ಬೆಳಗಿನ
ಜಾವ ಬರುವ ಎಂಜಲನ್ನು ಮುಖಕ್ಕೆ ಹಚ್ಚಿಕೊಂಡಿದ್ದೇನೆ. ಏಕೆಂದರೆ ಎಂಜಲಿಗೆ ಮೊಡವೆಗಳನ್ನು
ಒಣಗಿಸುವ ಸಾಮರ್ಥ್ಯವಿದೆ. ಈ ಬಗ್ಗೆ ಕೇಳಿದರೆ ನಿಮಗೆ ಬಹಳ ವಿಚಿತ್ರ ಎನಿಸಬಹುದು. ಆದರೆ ಇದು ಅತ್ಯಂತ
ಪರಿಣಾಮಕಾರಿಯಾದ ಮದ್ದು ಎಂದಿದ್ದಾರೆ. ಕೂದಲಿನ ಆರೈಕೆಯನ್ನು ಮನೆಯಿಂದಲೇ ಸಿಗುವ
ವಸ್ತುಗಳಿಂದಲೇ ಮಾಡುತ್ತೇನೆ. ತಮನ್ನಾ ಅವರ ಬ್ಯೂಟಿ ಸಿಕ್ರೆಟನ್ನು ಕೇಳಿದ ಅದೆಷ್ಟೋ
ಅಭಿಮಾನಿಗಳು ಅದನ್ನು ನಂಬುವುದಕ್ಕೂ ಸಿದ್ಧರಿಲ್ಲ. ಆದರೆ ಒಂದಷ್ಟು ಜನರು ಇದು
ನಿಜವಿದ್ದರೂ ಇರಬಹುದು ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.