ಪೂಜಾಗಾಂಧಿ ಮದುವೆ ಸನ್ನಿ ಡಿಯೋಲ್‌ ಜೊತೆ! ಗುಡ್ ನ್ಯೂಸ್ ಕೊಟ್ಟ ಮಳೆ ಹುಡುಗಿ ಪೂಜಾಗಾಂಧಿ

 

ಕನ್ನಡ ಚಿತ್ರರಂಗದಲ್ಲಿ ಪರಭಾಷೆಯಿಂದ ಬಂದು ಇಲ್ಲಿ ನಟಿಯಾಗಿ ಮಿಂಚಿದ ಹಾಗೂ ಇಲ್ಲಿಯೇ ನಟಿಯಾಗಿ ಮುಂದುವರೆದು ನೆಲೆಸಿ ಕನ್ನಡಿಗರ ಮನ ಗೆದ್ದವರು ಹಲವಾರು ಜನರಿದ್ದಾರೆ. ಕನ್ನಡ ಚಿತ್ರರಂಗ ಎಂದಾಗ ನಮ್ಮವರು ಮಾತ್ರವಲ್ಲದೇ, ಪರಭಾಷಿಗರೂ ಸಹ ಇಲ್ಲಿ ಸೂರು ಸಿಗುತ್ತದೆ. ಎಲ್ಲಿಯೂ ಆಶ್ರಯ ಸಿಕ್ಕದವರು ಇಲ್ಲಿ ಬಂದು ನೆಲೆ ಕಂಡುಕೊಂಡವರೂ ಇದ್ದಾರೆ. ಈ ರೀತಿ ಬೇರೆ ಭಾಷೆಯಿಂದ ಕನ್ನಡಕ್ಕೆ ಬಂದು ನೆಲೆಸಿದ ನಟುಯ ಬಗ್ಗೆ ನಾವಿಲ್ಲಿ ಹೇಳಲು ಮುಂದಾಗಿದ್ದೇವೆ. ಮುಂಗಾರು ಮಳೆ ಎಂಬ ಸೂಪರ್‌ ಹಿಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಳೆಹುಡುಗಿ ಎಂದೇ ಖ್ಯಾತಪಡೆದವರು ಪೂಜಾಗಾಂಧಿ. ಪೂಜಾಗಾಂಧಿ ಅವರಿಗೆ ಕನ್ನಡ ಚಿತ್ರರಂಗಕ್ಕೆ ಮುಂಗಾರು ಮಳೆಯಂತಹ ಹಿಟ್ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಸ್ವಾಗತವನ್ನು ನೀಡಲಾಯಿತು. ಅಂದು ಕನ್ನಡ ಚಿತ್ರರಂಗದಲ್ಲಿ ಪ್ರತಿಯೊಬ್ಬ ನಿರ್ದೇಶಕನು ಪೂಜಾಗಾಂಧಿ ಅವರನ್ನು ತಮ್ಮ ಚಿತ್ರಕ್ಕೆ ಹೀರೋಯಿನ್‌ ಆಗಿ ಆಯ್ಕೆ ಮಾಡುತ್ತಿದ್ದರು.

ಕನ್ನಡ ಚಿತ್ರರಂಗದಲ್ಲಿ ಅವರಿಗೆ ಅಷ್ಟೊಂದು ಬೇಡಿಕೆ ಇತ್ತು. 2005ರ ಆಸುಪಾಸಿನಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಕೂಡ ಚಾಲ್ತಿಯಲ್ಲಿದ್ದವರು ನಟಿ ಪೂಜಾ ಗಾಂಧಿ. ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡು ಸ್ಟಾರ್ ನಟಿಯಾಗಿ ಕೂಡ ಮಿಂಚಿದರು. ಆದರೆ ನಂತರದ ದಿನಗಳಲ್ಲಿ ಚಿತ್ರರಂಗದಿಂದ ಸ್ವಲ್ಪ ದೂರವಾಗಿ ಬ್ರೇಕ್ ತೆಗೆದುಕೊಂಡರು. ಈ ಮಧ್ಯೆ ಅವರ ನಿಶ್ಚಿತಾರ್ಥದ ಸುದ್ದಿ ಸ್ಯಾಂಡಲ್‌ ವುಡ್‌ ನಲ್ಲಿ ಓಡಲಾರಂಭಿಸಿತು. ಆದರೆ ಕೆಲವೇ ದಿನಗಳಲ್ಲಿ ಅದು ಕೂಡ ಮುರಿದು ಬಿತ್ತು ಎನ್ನುವ ಸುದ್ದಿ ಕೂಡ ಓಡಾಡಲಾರಂಭಿಸಿತು. ಪೂಜಾಗಾಂಧಿ ಅವರು ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ಒಂದಷ್ಟು ದಿನಗಳ ತೊಡಗಿಸಿಕೊಂಡರು. ರಾಯಚೂರು ಜಿಲ್ಲೆಯ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ದುಂಡುಪಾಳ್ಯ, ದುಂಡುಪಾಳ್ಯ ೨ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ವಾಪಸ್ಸಾದರು. ಆದರೆ ಕೆಲವೇ ಚಿತ್ರಗಳಲ್ಲಿ ನಟಿಸಿ ಅವರು ಮತ್ತೆ ಮರೆಯಾದರು. ಆದರೆ ವೀಕ್ಷಕರಲ್ಲಿ ಅವರಿಗೆ ಮೊದಲಿದ್ದಷ್ಟು ಕ್ರೇಜ್ ಹಾಗೂ ಅಭಿಮಾನ ಕಡಿಮೆಯಾಯಿತು ಎಂದೇ ಹೇಳಬಹುದು. ಆದರೂ ಸಹ ಇಂದಿಗೂ ಚಿತ್ರರಂಗದಲ್ಲಿ ನಟಿಯಾಗಿ ಚಾಲ್ತಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ಸಿಂಹಾರಿಣಿ ಎಂಬ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿ ಸದ್ದು ಮಾಡಿತ್ತು. ಈಗ ಪೂಜಾಗಾಂಧಿ ಮತ್ತೊಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದಾರೆ. ಅದೆನೆಂದರೆ, ಪೂಜಾಗಾಂಧಿ ಅವರು ಈಗ ಮತ್ತೆ ಸುದ್ದಿಯಾಗುತ್ತಿರುವುದು ಅವರ ಚಿತ್ರ ಗಳಿಗೋಸ್ಕರ ಅಲ್ಲ, ಬದಲಾಗಿ ಅವರ ಮದುವೆ ವಿಚಾರವಾಗಿ.ಬಾಲಿವುಡ್ ನಟನನ್ನು ಮದುವೆಯಾಗಿದ್ದಾರೆ ಎಂಬುದು ಈಗ ಎಲ್ಲೆಡೆ ಹರಿದಾಡುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಂತೂ ಇದೇ ಸುದ್ದಿ. ಹೌದು ಬಾಲಿವುಡ್ ನ ಖ್ಯಾತ ನಟ ಸನ್ನಿ ಡಿಯೋಲ್ ಅವರನ್ನು ಪೂಜಾಗಾಂಧಿ ಅವರು ಮದುವೆಯಾಗಿದ್ದಾರೆ ಎಂದು ಗೂಗಲ್‌ ತೋರಿಸುತ್ತಿದೆ. ಆದರೆ ವಾಸ್ತವವಾಗಿ ಇದು ಸತ್ಯವಲ್ಲ. ಇತ್ತೀಚೆಗೆ ಗೂಗಲ್‌ ಕೂಡ ಸುಳ್ಳು ಸುದ್ದಿಯನ್ನು ಹಂಚುತ್ತಿದೆ. ಆದರೆ ಸನ್ನಿ ಡಿಯೋಲ್ ಅವರ ಪತ್ನಿ ಹೆಸರು ಪೂಜಾ ಡಿಯೋಲ್. ಪೂಜಾ ಡಿಯೋಲ್ ಎಂದು ಸರ್ಚ್ ಮಾಡಿದಾಗ ಗೂಗಲ್‌ ನಲ್ಲಿ ಪೂಜಾಗಾಂಧಿ ಅವರ ಫೋಟೋವನ್ನು ತೋರಿಸುತ್ತದೆ.