ಶೋಭ್ ರಾಜ್ ಇಂತಹ ನಟನಿಗೆ ಅವಕಾಶಗಳು ಸಿಗ್ತಾ ಎಲ್ಲಾ ಏಕೆ ?

 

ಸಿನೆಮಾ ಎಂದರೆ ನೆನಪಾಗುವುದು ನಾಯಕ-ನಾಯಕಿ ಜೊತೆಗೆ ಕಥೆಗೆ ತಿರುವು ನೀಡುವ ವಿಲನ್ ಪಾತ್ರಗಳು. ಕನ್ನಡ ಸಿನೆಮಾ ರಂಗದ ಪ್ರಮುಖ ಖಳನಟರಲ್ಲಿ ಶೋಭ್ ರಾಜ್ ಅವರೂ ಒಬ್ಬರು. ರಾಜ್ ಅವರು ಕೇವಲ ನೆಗೆಟೀವ್ ರೋಲ್ ಮಾತ್ರವಲ್ಲದೇ ಹಾಸ್ಯ ಸೀನ್ ಗಳಲ್ಲೂ ಪಾತ್ರ ನಿರ್ವಹಿಸಿ ಯಶಸ್ಸನ್ನು ಕಂಡಿದ್ದಾರೆ.ಇವರ ಮೈಕಟ್ಟು ಪಾತ್ರಗಳಿಗೆ ಜೀವ ತುಂಬುತ್ತಿತ್ತು. ಇವರು ಸುಮಾರು ೨೫೦ ಚಿತ್ರಗಳಲ್ಲಿ ನಟಿಸಿದ್ದಾರೆ. ಶೋಭ್ ರಾಜ್ ತೆಂಗಿನ ನಾಡು ತುಮಕೂರಿನವರು. ಇವರದ್ದು ಮಧ್ಯಮ ವರ್ಗದ ಕುಟುಂಬ. ತಂದೆ ವ್ಯಾಪಾರ ಮಾಡಿ ಮನೆ ನಡೆಸುತ್ತಿದ್ದರು. ಇದೇ ವ್ಯವಹಾರದ ಕಾರಣದಿಂದ ನಟ ನ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಗಿತು. ಶೋಭ್ ರಾಜ್ ತುಮಕೂರಿನಲ್ಲಿ ಇದ್ದಾಗ ಐದನೇ ತರಗತಿವರೆಗೂ ಓದಿದ್ದರು ಉನ್ನತ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದರು.

ಓದಿನಲ್ಲಿ ಆಸಕ್ತಿ ಇರದ ಕಾರಣ ಕಾಲೇಜಿನಲ್ಲಿ ಫ್ರೆಂಡ್ಸ್ ಜೊತೆ ಸಿನೆಮಾಗಳನ್ನು ನೋಡುವ ಅಭ್ಯಾಸ ಮಾಡಿಕೊಂಡಿದ್ದರು. ಎಲ್ಲಾ ಭಾರಿ ಚಿತ್ರ ಬಿಡುಗಡೆಯಾದ ಮೊದಲ ದಿನವೇ ಮುಂಚುಣಿಯಲ್ಲಿ ನೋಡುವುದು ಇವರ ಅಭ್ಯಾಸ ವಾಗಿತ್ತು. ಜೊತೆಗೆ ನಟ ರಘುವೀರ್ ಮತ್ತು ಶೋಭ್ ರಾಜ್ ಒಳ್ಳೆಯ ಸ್ನೇಹಿತರಾಗಿದ್ದರು. ಚೈತ್ರ ಪ್ರೇಮಾಂಜಲಿ ಶೋಭ್ ರಾಜ್ ಅವರ ಮೊದಲ ಚಿತ್ರವಾಗಿತ್ತು. ಸಿನೆಮಾ ಕ್ಷೇತ್ರಕ್ಕೆ ಶೋಭ್ ರಾಜ್ ರವರ ಎಂಟ್ರಿ ಆಕಸ್ಮಿಕ ಚೈತ್ರದ ಪ್ರೇಮಾಂಜಲಿ ಚಿತ್ರದ ಖಳ ನಟ ಒಂದು ದಿನ ಸಿನೆಮಾ ಸೆಟ್ ಗೆ ಬರುವುದಿಲ್ಲ, ಅಲ್ಲೇ ರಘುವೀರ್ ಜೊತೆಗೆ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ಶೋಭ್ ರಾಜ್ ಅವರಿಗೆ ಈ ಖಳ ನಟನ ಪಾತ್ರ ದೊರೆಯುತ್ತದೆ. ಹೀಗೆ ಅಕಸ್ಮಾತ್ ಆಗಿ ಸಿಕ್ಕ ಅವಕಾಶದಿಂದ ಚಿತ್ರರಂಗದಲ್ಲಿ ಖಳ ನಟನಾಗಿ ಕಾಣಿಸಿಕೊಳ್ಳುತ್ತಾರೆ ಶೋಭ್ ರಾಜ್. ಇದಾದ ಬಳಿಕ ಅನೇಕ ಹೆಸರಾಂತ ನಟರ ಜೊತೆ ನಟಿಸುವ ಅವಕಾಶ ದೊರೆಯುತ್ತದೆ. ನಟ ದೇವರಾಜ್,ವಿಷ್ಣುವರ್ಧನ್, ಸಾಯಿಕುಮಾರ್ ಜೊತೆಗೆ ಡಾ ರಾಜ್ ರವರ ಶಬ್ಧವೇದಿ ಸಿನೆಮಾದಲ್ಲೂ ನಟಿಸುವ ಭಾಗ್ಯ ಶೋಭ್ ರಾಜ್ ರವರಿಗೆ ಸಿಗುತ್ತದೆ. ಇವರು ಕನ್ನಡ ಚಿತ್ರರಂಗ ಮಾತ್ರವಲ್ಲದೇ ತೆಲುಗು, ತಮಿಳು ಚಿತ್ರರಂಗದಲ್ಲೂ ಕಾಣಿಸಿಕೊಂಡಿದ್ದಾರೆ. ಸಧ್ಯಕ್ಕೆ ಚಿತ್ರರಂಗದಲ್ಲಿ ಚಿತ್ರರಂಗದಲ್ಲಿ ಅವಕಾಶಗಳೇ ಸಿಗುತ್ತಿಲ್ಲ ಎಂಬುದು ಕಹಿಯಾದ ಸಂಗತಿ.ಶೋಭ್ ರಾಜ್ ಅವರಿಗೆ ಸಾಧ್ಯವಾದಷ್ಟು ಬೇಗ ನಟನೆಯ ಅವಕಾಶ ದೊರೆಯಲಿ.