ಒಂದು ದೊಡ್ಡ ಸಿಹಿಸುದ್ದಿ ಹಂಚಿಕೊಂಡ ಬಿಗ್ ಬಾಸ್ ಪ್ರಿಯಾಂಕಾ ತಿಮ್ಮೇಶ್…ಎಲ್ಲರಿಂದ ಪ್ರಶಂಸೆ

 

ಕನ್ನಡ ಕಿರುತೆರೆ ಜನಮೆಚ್ಚಿನ ಕಾರ್ಯಕ್ರಮ ಬಿಗ್ ಬಾಸ್ ಸೀಸಿನ್ ಎಂಟು, ಆದೇಕೋ ಏನೋ ಕೇವಲ ಅಡೆತಡೆಗಳಿಂದಲೇ ಕೂಡಿತ್ತು. ಹೌದು ಪ್ರತಿ ವರುಷವು ಪ್ರಾರಂಭವಾಗುತ್ತಿದ್ದ ಬಿಗ್ ಬಾಸ್ ಸೀಸನ್ ಗಳು, ಕಳೆದ ವರುಷ ಕರೋನಾ ಇದ್ದ ಕಾರಣ, ಬ್ರೇಕ್ ಬೀಳಲಾಗಿತ್ತು. ಕಳೆದ ಆಗಸ್ಟ್‌ ನಲ್ಲಿಯೇ ಪ್ರಸಾರವಾಗಬೇಕಿದ್ದ, ಸೀಸನ್ ಎಂಟು, ಈ ವರುಷ ಫೆಬ್ರವರಿ ತಿಂಗಳಲ್ಲಿ ಪ್ರಸಾರಗೊಂಡಿದ್ದು, ತಡವಾದರು ಕೂಡ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರೂ ಕೂಡ ಸಂಪೂರ್ಣಗೊಳೊಸಲು ಸಾಧ್ಯವಾಗಲಿಲ್ಲ.

ಫಿನಾಲೆಗೆ ನಾಲ್ಕು ವಾರ ಬಾಕಿ ಇರುವಾಗಲೇ ಕಾರ್ಯಕ್ರಮವನ್ನು ರದ್ದು ಮಾಡಲಾಯಿತು. ಹೌದು ಹೊರಗಡೆ ಕರೋನಾ ಎರಡನೇ ಅಲೆ ಬಹಳ ವ್ಯಾಪಕವಾಗಿ ಹರಡಿದ್ದು, ಬೆಡ್ ಸಿಗದೆ, ಸಾಲು ಸಾಲು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಅಂತ್ಯ ಸಂಸ್ಕಾರ ಮಾಡಲು ಕೂಡ ಜಾಗ ಸಿಗದ ಪರಿಸ್ಥಿತಿಯಲ್ಲಿ ಬೆಂಗಳೂರಿನ ಮಂದಿ ಇದ್ದ ಕಾರಣ, ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಈ ಕಾರಣದಿಂದಾಗಿ ರಾಜ್ಯದಲ್ಲಿ ಚಿತ್ರರಂಗದ ಹಾಗೂ ಕಿರುತೆರೆ ಧಾರಾವಾಹಿ ರಿಯಾಲಿಟಿ ಶೋಗಳ ಚಿತ್ರೀಕರಣಗಳಿಗೆ ಅನುಮತಿ ದೊರೆಯದ ಕಾರಣ, ಬಿಗ್ ಬಾಸ್ ಸೀಸಿನ್ ಎಂಟನ್ನು ನಿಲ್ಲಿಸಲೇ ಬೇಕದ ಪರಿಸ್ಥಿತಿ ಆಯೋಜಕರಿಗೆ ಎದುರಾಗಿತ್ತು.

ಹೌದು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೂರಾರು ಮಂದಿ ಕೆಲಸ ಮಾಡುತ್ತಿದ್ದು, ಅವರ ಆರೋಗ್ಯ ದೃಷ್ಟಿಯಿಂದ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಯಿತು. ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ಕನಸು ಕಾಣುತ್ತಿದ್ದ ಸ್ಪರ್ಧಿಗಳೆಲ್ಲರು ಕೂಡ ಮನೆಯಿಂದ ಬಾರದ ಮನಸ್ಸಿನಲ್ಲಿ ಹೊರ ಬಂದಿದ್ದು, ಸಾಕಷ್ಟು ಮಂದಿ 70 ದಿನ ಪ್ರಯಾಣ ನಡೆಸಿದ್ದ ಕಾರಣ ಸಾಕಷ್ಟು ಹೆಸರು ಸಂಪಾದಿಸಿಕೊಂಡಿದ್ದರು. ಆದರೆ ಒಮ್ಮೆ ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆ ಎಲ್ಲರೂ ಸಹ ಪ್ರೇಕ್ಷಕರಿಗೆ ಮರೆತು ಹೋದಂತೆಯೇ ಆಗಿಬಿಟ್ಟಿದೆ. ದೊಡ್ಮನೆಯಲ್ಲಿ ಜರ್ನಿ ಮಾಡಿದಷ್ಟು ದಿನ ಸಾಕಷ್ಟು ಜನಪ್ರಿಯತೆ ಕಂಡುಕೊಂಡಿದ್ದ ಸ್ಪರ್ಧಿಗಳು ಹೊರಗೆ ಬಂದ ನಂತರ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳದೆ ಈ ಹಿಂದೆ ಸಾಕಷ್ಟು ಸೀಸನ್ ಗಳಲ್ಲಿ ಆಗಿರುವಂತೆಯೇ ಈ ಸೀಸನ್ ನಲ್ಲಿಯೂ ಕೂಡ ಸ್ಪರ್ಧಿಗಳನ್ನು ಆಲೋಚಿಸಿ ನೆನಪಿಸಿಕೊಳ್ಳಬೇಕಾದ ಪರಿಸ್ಥಿತಿ‌ ಜನರಲ್ಲಿದೆ. ಆದರೆ ಕೆಲವೊಬ್ಬ ಸ್ಪರ್ಧಿಗಳು ಮಾತ್ರ ಬಿಗ್ ಬಾಸ್ ನಿಂದ ಹೊರಗೆ ಬಂದ ನಂತರವೂ ಕೂಡ ಮಾಡುತ್ತಿರುವ ಸಾಮಾಜಿಕ ಕೆಲಸಗಳಿಂದ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದ್ದಾರೆ. ಅದರಲ್ಲಿಯೂ ಬಹಳ ಮುಖ್ಯವಾದವರು ನಟಿ ಶುಭಾ ಪೂಂಜಾ. ಹೌದು ತಮ್ಮ ಮೇಲೆ ಇದ್ದ ನೆಗೆಟಿವ್ ಅಭಿಪ್ರಾಯವನ್ನು ಬಿಗ್ ಬಾಸ್ ಮನೆ ಮುಂಖಾಂತರ ಸುಳ್ಳು ಮಾಡಿದ್ದು, ಇದೀಗ ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರವೂ ಕೂಡ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹೌದು ಕರೋನಾ ವಾರಿಯರ್ ಆಗಿ ಹಸಿದವರಿಗೆ ಫುಡ್ ಕಿಟ್ ನೀಡುವ ಮೂಲಕ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿದ್ದರು. ಅಂತೆಯೇ ಬಿಗ್ ಬಾಸ್ ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪಾದಾರ್ಪಣೆ ಮಾಡಿದ್ದ ಪ್ರಿಯಾಂಕ ತಿಮ್ಮೇಶ್ ರವರು ಬೇರೆ ರೀತಿಯ ಕೆಲಸವನ್ನೇ ಮಾಡಿದ್ದು, ಜನರಿಗೆ ತಮ್ಮ ಕೈಲಾದ ನೆರವನ್ನು ಮಾಡುತ್ತಿದ್ದಾರೆ.

ಇದೀಗ ಅದೆಲ್ಲವನ್ನು ಹೊರತು ಪಡಿಸಿ ಮತ್ತೊಂದು ಕೆಲಸ ಮಾಡಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನಟಿ ಪ್ರಿಯಾಂಕ ತಿಮ್ಮೇಶ್ ಅವರು ಪ್ರಾಣಿಗಳನ್ನು ದತ್ತು ಪಡೆದಿದ್ದು, ಮೈಸೂರು ಮೃಗಾಲಯದ ಬ್ಲಾಕ್ ಬಕ್ ಒಂದನ್ನು ಪ್ರಿಯಾಂಕ ತಿಮ್ಮೇಶ್ ವರ್ಷದ ಅವಧಿಗೆ ದತ್ತು ಪಡೆದುಕೊಂಡಿದ್ದು ಪ್ರಾಣಿ ದತ್ತು ಪಡೆಯಲು ದರ್ಶನ್ ಅವರೇ ಸ್ಪೂರ್ತಿ ಎಂದು ತಿಳಿಸಿದ್ದಾರೆ.‌

ಕೆಲ ದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು  ಪ್ರಾಣಿಗಳನ್ನು ದತ್ತು ತೆಗೆದುಕೊಂಡು ನೆರವಾಗುವಂತೆ ಮನವಿ ಮಾಡಿದ್ದರು. ಒಟ್ಟಿನಲ್ಲಿ ದರ್ಶನ್ ಅವರ ಮನವಿಗೆ ಉಪೇಂದ್ರ ಸೇರಿದಂತೆ ಅನೇಕ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಕೈ ಜೋಡಿಸಿದ್ದು ಇದೀಗ ಪ್ರಿಯಾಂಕ ತಿಮ್ಮೇಶ್ ಕೂಡ ಈ ಕೆಲಸದಲ್ಲಿ ದತ್ತು ತೆಗೆದುಕೊಳ್ಳುವ ಮೂಲಕ ದರ್ಶನ್ ಅವರ ಜೊತೆ ನಿಂತಿದ್ದಾರೆ.