ಪಬ್ಲಿಕ್ ಟಿವಿ ರಂಗಣ್ಣ ಹಾಗು ದಿವ್ಯಜ್ಯೋತಿ ಅವರ ತಿಂಗಳ ಸಂಬಳ ಎಷ್ಟು ಗೊತ್ತಾ…ಇಲ್ಲಿದೆ ನೋಡಿ

 

ಪ್ರಸ್ತುತ ಇರುವ ನ್ಯೂಸ್ ವಾಹಿನಿ ಗಳಲ್ಲಿ ಪ್ರೇಕ್ಷಕರಿಗೆ ಸರಿಯಾದ ಮಾಹಿತಿಗಳನ್ನು ನೀಡುತ್ತಿರುವ ವಾಹಿನಿಯಲ್ಲಿ ಮುಖ್ಯವಾದುದು ಪಬ್ಲಿಕ್ ಟಿವಿ ಎಂದೇ ಜನಸಾಮನ್ಯರು ಹೇಳುತ್ತಿದ್ದಾರೆ. ಹೆಚ್.ಆರ್.ರಂಗನಾಥ್ ಅವರು ಪಬ್ಲಿಕ್ ಟಿವಿಯನ್ನು ಆರಂಭ ಮಾಡಿದ್ದೆ ಒಂದು ರೋಚಕ ಕಥೆಯಾಗಿದ್ದು, ರಂಗನಾಥ್ ಅವರು ಮೂಲತಃ ಮೈಸೂರಿನವರು. ಮಾಧ್ಯಮದಲ್ಲಿ ಕೆಲಸ ಮಾಡುವ ಆಸಕ್ತಿಯಿಂದ ಬೆಂಗಳೂರಿಗೆ ಬಂದ ಅವರು, ಹಲವಾರು ದೈನಂದಿನ ಪತ್ರಿಕೆಗಳಿಗೆ ವರದಿಗಾರನಾಗಿ, ಚೀಫ್ ಎಡಿಟರ್ ಆಗಿ ಕೆಲಸ ಮಾಡುತ್ತಾರೆ.

ಅವರ ಪೂರ್ತಿ ಹೆಸರು ಹೆಬ್ಬಾಳೆ ರಾಮಕೃಷ್ಣಯ್ಯ ರಂಗನಾಥ್ ಎಂಬುದಾಗಿದ್ದು, ‍ಪ್ರೇಕ್ಷಕರೆಲ್ಲರು ಪ್ರೀತಿಯಿಂದ ರಂಗಣ್ಣ ಎಂದೇ ಕರೆಯುತ್ತಾರೆ. ಮೇ 12, 1966 ಜನಿಸಿದ ಅವರಿಗೆ ಇದೀಗ 54 ವರ್ಷ ವಯಸ್ಸು. ಮೊದಲಿಗೆ ಜರ್ನಲಿಸ್ಟ್ ಆಗಿ ವೃತ್ತಿ ಶುರು ಮಾಡಿದ ಇವರು ಹಲವಾರು ಪತ್ರಿಕೆಗಳಿಗೆ ಕೆಲಸ ಮಾಡಿದ್ದಾರೆ. ಪಬ್ಲಿಕ್ ಟಿವಿ ಸಂಸ್ಥೆಯ ಏಕೈಕ ಸಂಸ್ಥಾಪಕರಾದ ರಂಗನಾಥ್ ರವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಹೆಚ್ ಆರ್ ರಂಗನಾಥ್ ಅವರ ಕುಟುಂಬದ ವಿಚಾರಕ್ಕೆ ಬರುವುದಾದರೆ ಇವರ ತಂದೆ ರಾಮಕೃಷ್ಣಯ್ಯ ಹಾಗೂ ತಾಯಿ ಲೀಲಾ ಎಂಬುದಾಗಿದ್ದು, ಅವರಿಗೆ ಕಾತ್ಯಾಯಿನಿ, ಮಣಿಕರ್ಣಿಕ, ಸರ್ವಮಂಗಳ ಮತ್ತು ವೈದೇಹಿ ಹೆಸರಿನ ನಾಲ್ವರು ಸಹೋದರಿಯರು ಹಾಗೂಬವೆಂಕಟೇಶ್ ಮತ್ತು ಕೇಶವ ಇಬ್ಬರು ಸಹೋದರರಿದ್ದಾರೆ. ಇವರ ಪತ್ನಿಯ ಹೆಸರು ಶಾರದ ಹಾಗೂ ದಂಪತಿಗಳಿಗೆ ವೈಸ್ವಿನಿ ಮಗಳಿದ್ದಾರೆ. ಕನ್ನಡ ಪ್ರಭ ಪತ್ರಿಕೆಯಲ್ಲಿ ನ ಜರ್ನಲಿಸ್ಟ್ ಆಗಿ ಕೆಲಸ ಶುರು ಮಾಡಿದರು ರಂಗನಾಥ್ ಅವರು, ನೇರನುಡಿ, ಮಾತನಾಡುವ ಶೈಲಿ ಮತ್ತು ಸತ್ಯವನ್ನು ಇದ್ದಹಾಗೆ ಹೇಳುವ ಇವರ ಮಾತಿನ ಧಾಟಿಗೆ ಬಹುದೊಡ್ಡ ಅಭಿಮಾನಿ ಬಳಗ ಇದೆ.

ಸರಳತೆಗೆ ಹೆಸರಾಗಿರುವ ರಂಗಣ್ಣ, 2016 ರಲ್ಲಿ ಜೀಕನ್ನಡ ವಾಹಿನಿ ದಶಕದ ಜರ್ನಲಿಸ್ಟ್ ಎನ್ನುವ ಅವಾರ್ಡ್ ಅನ್ನು ನೀಡಿ ಗೌರವಿಸಿತು. ಇನ್ನು ಹಲವಾರು ಬಾರಿ ಅವಾರ್ಡ್ ಗಳನ್ನು ರಿಜೆ-ಕ್ಟ್ ಮಾಡಿದ್ದು ಉಂಟು. ಜರ್ನಲಿಸ್ಟ್ ಆಗುವ ಮೊದಲು ವೃಂದ ತರಂಗ ಎನ್ನುವ ಆರ್ಕೆಸ್ಟ್ರಾದಲ್ಲಿ ಗಾಯಕರಾಗಿದ್ದ ಅವರು ವಾಯ್ಸ್ ಆಫ್ ಕರ್ನಾಟಕ, ಫೇಸ್ ಆಫ್ ಬೆಂಗಳೂರು ಮತ್ತು ಟ್ರೂ ಜರ್ನಲಿಸ್ಟ್ ಎಂದು ಕೂಡ ಕರೆಯುತ್ತಾರೆ.

ಬಡತನದಲ್ಲಿಯೇ ಹುಟ್ಟಿ ಬೆಳೆದ ರಂಗಣ್ಣ ಆರು ಏನಾದರೂ ಸಾಧಿಸಬೇಕೆಂಬ ಛಲ ಹೊಂದಿದ್ದರಿಂದ ಪಬ್ಲಿಕ್ ಟಿವಿಯನ್ನು ಕನ್ನಡದ ನಂಬರ್ ಚಾನೆಲ್ ಆಗಿ ಬೆಳೆಸಬೇಕೆಂಬ ಆಸೆ ಕೂಡ ಹೊಂದಿದ್ದರು. ಆಶ್ಚರ್ಯಕರ ಸಂಗತಿಯೆಂದರೆ ಅವರು ಪಟ್ಟಿರುವ ಶ್ರಮಕ್ಕೆ ಕೇವಲ 5 ವರ್ಷಗಳಲ್ಲಿ ಪ್ರತಿಫಲ ಸಿಗುತ್ತೆ . ಇದೀಗ ಪಬ್ಲಿಕ್ ಟಿವಿಗೆ ಕನ್ನಡದ ನಂಬರ್ 1 ನ್ಯೂಸ್ ಚಾನೆಲ್ ಎಂಬ ಹೆಗ್ಗಳಿಕೆಯಿದೆ.

ಇಷ್ಟೇ ಅಲ್ಲದೆ ರಂಗಣ್ಣ ಅವರಿಗೆ ಕನ್ನಡದ ನಂಬರ್ 1 ಶ್ರೀಮಂತ ನಿರೂಪಕ ಎಂಬ ಬಿರುದು ಕೂಡ ಸಿಕ್ಕಿದ್ದು, ಪಬ್ಲಿಕ್ ಟಿವಿ ಸಂಸ್ಥೆಯಲ್ಲಿ ರಂಗನಾಥ್ ಅವರದ್ದು 50 % ರಷ್ಟು ಶೇರ್ ಇದೆ . ರಂಗನಾಥ್ ಅವರ ಒಟ್ಟು ಆಸ್ತಿ ಸುಮಾರು ಐವತ್ತರಿಂದ ನೂರು ಕೋಟಿ ಇದೆ ಎಂಬ ಅಂದಾಜು ಮಾಡಲಾಗಿದ್ದು, ಅವರು ಬೆಂಗಳೂರಿಗೆ ಬಂದಾಗ ಇವರ ಜೇಬಿನಲ್ಲಿ ಇದ್ದಿದ್ದು ನೂರು ರೂಪಾಯಿಗಳು ಮಾತ್ರ. ಆದರೆ ಇದೀಗ ಅವರ ಅಕೌಂಟ್ ನಲ್ಲಿ ಹತ್ತಾರು ಕೋಟಿ ಹಣವಿದೆ. ಇದೇ ಅಲ್ಲವೇ ಸಾಧನೆಯೆಂದರೆ.

ಅಭಿಮಾನಿಗಳು ಹಾಗೂ ನೆಟ್ಟಿಗರು ಡಿಂಪಿ ಎಂದೇ ಕರೆಯುವ ದಿವ್ಯಜ್ಯೋತಿ ಅವರು ರಂಗಣ್ಣ ಜೊತೆ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದು, ಅವರು ಕೂಡ ಕನ್ನಡಿಗರ ಜನಮನ ಗೆದ್ದಿದ್ದಾರೆ .ದಿವ್ಯ ಜ್ಯೋತಿಯವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಾಗಿದ್ದು, ಇದೀಗ ಅವರಿಗೆ ಸುಮಾರು 30 ವರ್ಷ ವಯಸ್ಸು .ಈಗಾಗಲೇ ಅವರಿಗೆ ವಿವಾಹ ಕೂಡ ಆಗಿದ್ದು, ವೃತ್ತಿಜೀವನ ಪ್ರಾರಂಭ ಮಾಡಿದ್ದು ಉದಯ ಮ್ಯೂಸಿಕ್ ನಲ್ಲಿ . ನಿರೂಪಕಿಯಾಗಿ ಉದಯ ಮ್ಯೂಸಿಕ್ ನಲ್ಲಿ ಕೆಲಸ ಮಾಡಿ ನಂತರ ಕೆಲವು ನ್ಯೂಸ್ ಚಾನೆಲ್ ಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದ ಇವರು ನಂತರ 2016 ರಲ್ಲಿ ಪಬ್ಲಿಕ್ ಟಿವಿಯನ್ನು ಸೇರಿಕೊಳ್ಳುತ್ತಾರೆ .

ಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡಿದ ನಂತರ ಇವರಿಗೆ ಸಿಕ್ಕ ಜನಪ್ರಿಯತೆ ಬೇರೆ ಯಾವ ಸಂಸ್ಥೆಯಲ್ಲೂ ಸಿಕ್ಕಿರುವುದಿಲ್ಲ . ರಂಗಣ್ಣ ಮತ್ತು ಇವರ ಜೋಡಿ ಈಗ ಕರ್ನಾಟಕದೆಲ್ಲೆಡೆ ಜನಪ್ರಿಯತೆ ಹೊಂದಿದ್ದು, ದಿವ್ಯಜ್ಯೋತಿ ಅವರಿಗೆ ಇತ್ತೀಚೆಗೆ ಪಬ್ಲಿಕ್ ಟಿವಿಯ ಅತ್ಯುತ್ತಮ ನಿರೂಪಕಿ ಎಂಬ ಪ್ರಶಸ್ತಿ ಕೂಡ ಲಭಿಸಿದೆ. ಒಂದು ಸಂಚಿಕೆಗೆ 5 ಸಾವಿರ ಸಂಭಾವನೆ ಪಡೆಯುವ ಇವರ ತಿಂಗಳ ಆದಾಯ ಸರಿಸುಮಾರು ಐವತ್ತುಸಾವಿರದಿಂದ ಒಂದು ಲಕ್ಷ . ಅವರ ಒಟ್ಟು ಆಸ್ತಿ ಎರಡರಿಂದ 3 ಕೋಟಿ ಎಂದು ಅಂದಾಜು ಮಾಡಲಾಗಿದ್ದು, ರಂಗಣ್ಣ ಮತ್ತು ದಿವ್ಯಜ್ಯೋತಿ ಇಬ್ಬರು ಕೂಡ ಇದೀಗ ಮಾಧ್ಯಮ ಲೋಕದ ಟಾಪ್ ನಿರೂಪಕರು.