ಸಾಯಿ ಪಲ್ಲವಿ ತಂಗಿ ಮಾಡಿರುವ ನ್ರತ್ಯ ನೋಡಿ - ಚಿಂದಿ ವಿಡಿಯೋ

 

ಸಾಯಿ ಪಲ್ಲವಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ ಆಗುವ ವ್ಯಕ್ತಿತ್ವ. ಸಿಂಪಲ್ ಹುಡುಗಿ ಪಾತ್ರಕ್ಕೆ ಹೊಂದಿಕೆಯಾಗುವ ಸಾಯಿ ಪಲ್ಲವಿ ನಟನೆ ಎಲ್ಲರಿಗೂ ಇಷ್ಟ ಆಗದೇ ಇರದು.ಈಗಾಗಲೇ ದಕ್ಷಿಣ ಭಾರತದಲ್ಲಿ ಅವರ ಖ್ಯಾತಿ ತುಂಬಾನೇ ಇದೆ. ಕೇವಲ ಬೆರಳಿಣಿಕೆ ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಸಾಕಷ್ಟು ಫ್ಯಾನ್ಸ್ ಫಾಲ್ಲೋರ್ಸ್ ಇದ್ದಾರೆ. ತಮ್ಮದೇ ಆದ ಓನ್ ಸ್ಟೈಲ್ ಅಲ್ಲಿ ಎಲ್ಲರ ಮನಸ್ಸು ಗೆದ್ದ ಈ ಚೆಲುವೆ ಹುಟ್ಟಿದ್ದು ತಮಿಳು ನಾಡಿನಲ್ಲಿ. ತಮಿಳು ಚಿತ್ರರಂಗದ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟ ನಟಿ ಸಾಯಿ ಪಲ್ಲವಿ ನಟ ಹಾಗೂ ಅದ್ಭುತ ಡಾನ್ಸ್ ಮೂಲಕ ಗಮನ ಸೆಳೆದರು.

ಟಾಲಿವುಡ್ ನಲ್ಲಿ ಕೂಡ ಅವಕಾಶಗಳು ಇವರ ಮನೆ ಬಾಗಿಲಿಗೆ ಬಂದವು.ಪ್ರೇಮಂ, ಫಿದಾ, ಕಲಿ, ಮಾರಿ 2 ಮುಂತಾದ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಭಾರಿ ಸದ್ದು ಮಾಡಿದವು. ಸದ್ಯ, ಸಾಯಿಪಲ್ಲವಿ ಕೈಯಲ್ಲಿ ಲವ್​ ಸ್ಟೋರಿ, ವಿರಾಟ ಪರ್ವಮ್​, ಶ್ಯಾಮ್​ ಸಿಂಗ ರಾಯ್​ ಹೆಸರಿನ ಮೂರು ಸಿನಿಮಾಗಳಲ್ಲಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ.ಲವ್​ ಸ್ಟೋರಿ, ವಿರಾಟ ಪರ್ವಮ್ ಸಿನಿಮಾ ಶೂಟಿಂಗ್​ ಪೂರ್ಣಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಈಗಾಗಲೇ ಆರಂಭಗೊಂಡಿದೆ. ಶ್ಯಾಮ್​ ಸಿಂಗ್​ ರಾಯ್​ ಚಿತ್ರದ ಶೂಟಿಂಗ್​ ಕೊವಿಡ್​ ಕಾರಣದಿಂದ ಅರ್ಧಕ್ಕೆ ನಿಂತಿದೆ. ಸದ್ಯದಲ್ಲೆ ಸಾಯಿ ಪಲ್ಲವಿ ಸಿನಿ ಪರದೆಯ ಮೇಲೆ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಸಾಯಿ ಪಲ್ಲವಿ ಡಾಕ್ಟರ್​ ಆಗಬೇಕು ಎಂದು ಕನಸು ಕಂಡವರು. ಇವರು ಎಂಬಿಬಿಎಸ್​ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಆದರೆ ಅವಕಾಶಗಳು ಸಿನಿಮಾರಂಗದಲ್ಲಿ ಒದಗಿ ಬಂದಿದ್ದರಿಂದ ನಟಿಯಾಗಿ ಮಿಂಚುತ್ತಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿರುವ ಸಾಯಿ ಪಲ್ಲವಿ ತನ್ನ ಮುದ್ದಾದ ತಂಗಿ ಪೂಜಾ ಕಣ್ಣನ್ ಪೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಅಕ್ಕ ತಂಗಿ ಇಬ್ಬರ ಒಂದೇ ತೆರೆನಾಗಿ ಕಾಣುತ್ತಾರೆ. ಅಕ್ಕ ಸಾಯಿ ಪಲ್ಲವಿಯಂತೆ ಅವರ ತಂಗಿ ಕೂಡ ಅದ್ಭುತ ಡ್ಯಾನ್ಸರ್ ಆಗಿದ್ದಾರೆ. ಅಂದಹಾಗೆ ಪೂಜಾ ಕಣ್ಣನ್ ಹಾಡೊಂದಕ್ಕೆ ಅದ್ಭುತವಾಗಿ ನೃತ್ಯ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು. ಪೂಜಾಳ ಈ ನೃತ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.ಪೂಜಾ ಕಣ್ಣನ್ ರ ಅದ್ಭುತ ನೃತ್ಯವನ್ನು ಈ ಕೆಳಗಿನ ವಿಡಿಯೋ ನೋಡಿ.