ಧ್ರುವ ಸರ್ಜಾ ಅಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ? ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತಿಗಳಿಸಿರುವ ಧ್ರುವ ಸರ್ಜಾ ಖಡಕ್ ಲುಕ್, ಖಡಕ್ ಡೈಲಾಗ್ ಹಾಗೂ ಖಡಕ್ ಲುಕ್ ನಲ್ಲಿ ನಟಿಸುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸುತ್ತಾರೆ. ಸಿನಿ ಪರದೆಯಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲಿ ಹೀರೋ ಆಗಿ ತನ್ನ ಅತ್ತಿಗೆ ಮೇಘನಾ ರಾಜ್ ನೊಂದುಕೊಂಡ ದಿನಗಳಲ್ಲಿ ಧೈರ್ಯ ತುಂಬಿ ಮುಂದಕ್ಕೆ ನಡೆಸಿದ ರೀತಿ ನಿಜಕ್ಕೂ ಅದ್ಭುತ.ಇದಕ್ಕೆ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಧ್ರುವ ಸರ್ಜಾ ಬಾಲ್ಯದ ಗೆಳತಿ ಪ್ರೇರಣಾ ಎಂಬುವವರನ್ನು ವರಿಸಿದ್ದರು ಆಗಾಗ ಪೋಸ್ಟಗಳನ್ನು ಹಾಕುತ್ತಾ ಅಭಿಮಾನಿಗಳನ್ನು ಸತಿ ಪತಿಗಳಿಬ್ಬರು ರಂಜಿಸುತ್ತಿರುತ್ತಾರೆ.
ಕಳೆದ ವರ್ಷ ಪತ್ನಿ ಪ್ರೇರಣಾಳ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್ ಕೊಟ್ಟಿದ್ದರು ಧ್ರುವ ಸರ್ಜಾ. ಪತ್ನಿ ಪ್ರೇರಣ ಹುಟ್ಟುಹಬ್ಬಕ್ಕೆ ಧ್ರುವ ರೋಮ್ಯಾಂಟಿಕ್ ಡೇಟ್ ಅರೇಂಜ್ ಮಾಡಿದ್ದರು. ಪಟಾಕಿ ಹೊಡೆದು ಕೇಕ್ ಕತ್ತರಿಸಿ ಹಬ್ಬದ ರೀತಿಯಲ್ಲಿ ಸಂಭ್ರಮಿಸಿದ್ದರು. ಈ ಬರ್ತ್ಡೇ ಸೆಲೆಬ್ರೇಶನ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು ಕೂಡ. ಹೌದು ಈ ಮುದ್ದಾದ ಜೋಡಿಗಳನ್ನು ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದರು. ಇನ್ನು ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಬಹುನಿರೀಕ್ಷಿತ ಸಿನಿಮಾ ಪೊಗರು ಬಿಡುಗಡೆಯಾದದ್ದು ಗೊತ್ತೇ ಇದೆ.
ಹೌದು ಪೊಗರು ಸಿನಿಮಾ ಬಿಡುಗಡೆಯಾಗಿ ಒಂದಷ್ಟು ವಿವಾದಗಳ ನಡುವೆಯೇ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದವು. ಇನ್ನು ಧ್ರುವ ಸರ್ಜಾ ಹಾಗೂ ಪ್ರೇರಣಾ ಸರ್ಜಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿದ್ದು ಫೋಟೋ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅಂದಹಾಗೆ,ಧ್ರುವ ಈ ಸಿನಿಮಾದ ಚಿತ್ರೀಕರಣಕ್ಕೆ ಬೈಕ್ ನಲ್ಲಿ ಹೊರಟಿದ್ದರು. ಈ ವೇಳೆಯಲ್ಲಿ ಪತ್ನಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ರೈಡ್ ಹೊರಟಿರುವ ವಿಡಿಯೋಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಧ್ರುವ ಸರ್ಜಾ ಹಾಗೂ ಪ್ರೇರಣಾ ಬೈಕ್ ನಲ್ಲಿ ಜಾಲಿಯಾಗಿ ಓಡಾಡುತ್ತಿರುವ ವೈರಲ್ ಆಗಿರುವ ವಿಡಿಯೋ ತುಣುಕನ್ನು ನೋಡಲು ಈ ಕೆಳಗಿನ ವಿಡಿಯೋವನ್ನು ನೋಡಿ.