ತಮ್ಮನಿಗೆ ರಾಕೀ ಕಟ್ಟಿದ ಐರಾ ,,, ಹೇಗಿತ್ತು ನೋಡಿ

  

ಕನ್ನಡ ಚಿತ್ರರಂಗದ ರಾಕಿಂಗ್ ಕಪಲ್ ಗಳೆಂದರೆ ಸಿಂಡ್ರೆಲಾ ರಾಧಿಕಾ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್‌ ಅವರು. ಕನ್ನಡ ಚಿತ್ರರಂಗದಲ್ಲಿ ಈ ಸ್ಟಾರ್ ಜೋಡಿಗಳಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಆದರೆ ಅಚ್ಚರಿಯ ವಿಚಾರವೇನೆಂದರೆ ಇವರಿಗೆ  ಎಷ್ಟು ಅಭಿಮಾನಿಗಳಿದ್ದಾರೋ ಅದಕ್ಕೂ ಡಬಲ್ ಅವರ ಮಕ್ಕಳಾದ  ಐರಾ ಹಾಗೂ ಯಥರ್ವ್‌‌ಗೆ ಫ್ಯಾನ್ಸ್‌ ಇದ್ದಾರೆ  ಎಂಬುದು ಸುಳಲ್ಲ. ಹೌದು  ಇದಕ್ಕೆ ಸಾಕ್ಷಿ ಎಂಬಂತೆ ಅವರ ಹೆಸರಿನಲ್ಲಿರುವ  ಸಾಮಾಜಿಕ ಜಾಲತಾಣದ ಫ್ಯಾನ್ ಪೇಜ್ ಗಳು. ಸ್ಟಾರ್ ಕಿಡ್ಸ್ ಪಟ್ಟಿಯಲ್ಲಿ ಅಗ್ರಸ್ಥಾಮದಲ್ಲಿ ರುವ  ಈ ರಾಕಿಂಗ್ ಮಕ್ಕಳು ಎಷ್ಟು ನಾಟಿ ಎಂಬದು ಯಶ್ ಹಾಗೂ ರಾಧಿಕಾ ಅಪ್ಲೋಡ್ ಮಾಡುವ ಫೋಟೋ ನೋಡಿದರೆ ಗೊತ್ತಾಗುತ್ತದೆ.

ಹೌದು  ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಅವರು ಹೊಸ ವರುಷಕ್ಕೆ ಶುಭಾಷಯ ತಿಳಿಸಿದ್ದ ಪೋಸ್ಟ್ ಈಗಲೂ ಕೂಡ ಸಖತ್ ವೈರಲ್ ಆಗಿಯೇ ಇದೆ. “ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಪ್ರೀತಿ, ಸಂತೋಷ ಹಾಗೂ ಕೊಂಚ ತುಂಟಾಟ ತುಂಬಿರಲಿ. ಆರ್ಡರ್‌ನಲ್ಲಿದೆ ಇವರಿಬ್ಬರ ತುಂಟಾಟ. ಈ ವರ್ಷ ಅದ್ಭುತವಾಗಿರಲಿದೆ,’ ಎಂದು ರಾಧಿಕಾ ಬರೆದಿದ್ದರು. ಮೊದಲ ಫೋಟೋದಲ್ಲಿ ಐರಾ ಮತ್ತು ಯಥರ್ವ್‌ ಪೋಸ್‌ ನೀಡಿದ್ದು,  ಎರಡನೇ ಫೋಟೋದಲ್ಲಿ ಐರಾ ತಮ್ಮನ್ನನ್ನು ಕಚ್ಚಲು ಹೋಗಿದ್ದಾಳೆ ಹಾಗೂ ಮೂರನೇ ಫೋಟೋದಲ್ಲಿ ಅಕ್ಕ ನಗುತ್ತಿದ್ದರೆ, ತಮ್ಮ ಅಳುತ್ತಿದ್ದಾನೆ. ಮೊದಲ ಬಾರಿ ರಾಧಿಕಾ ಈ ರೀತಿಯ ಪೋಟೋ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳು ಸಖತ್‌ ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ರಾಧಿಕಾ ಮನೆಯಲ್ಲಿ ಪ್ರತಿ  ಹಬ್ಬವನ್ನೂ ಬಹಳ ಸಂಭ್ರಮ ಆಚರಿಸುತ್ತಾರೆ. ಸಂಭ್ರಮದ ಕ್ಷಣಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಲೆ ಇರುತ್ತಾರೆ.ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಕಪಲ್ ಎಂದೇ ಪ್ರಖ್ಯಾತಿ ಗಳಿಸಿರುವ ಜೋಡಿ ಎಂದರೆ ನಾಯಕ ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರು. ಚಿತ್ರರಂಗದಲ್ಲಿ ಅನೇಕ ಏಳು ಬೀಳುಗಳನ್ನು ಕಂಡು, ಇದೀಗ ಯಶಸ್ಸಿನ ತುತ್ತ ತುದಿಗೆ ತಲುಪಿದ ನಟ ಯಶ್ ಆದರೆ, ಚಿತ್ರರಂಗದಲ್ಲಿ ಯಾವುದೇ ರೀತಿಯ ಕಪ್ಪು ಚುಕ್ಕೆಯನ್ನು ಹಾಕಿಸಿಕೊಳ್ಳದೆ ಯಾವುದೇ ರೀತಿಯಾ ವಿವಾದಕ್ಕೆ ಸಿಲುಕದೆ ಚಂದನವನದ ಸಿಂಡ್ರೆಲಾ ಆದವರು ರಾಧಿಕಾ ಪಂಡಿತ್.

ಇದೀಗ ರಾಕಿಂಗ್ ಕಪಲ್ ಆಗಿ ಸ್ಟಾರ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಇವರ ಮಕ್ಕಳು ಕೂಡ ಸ್ಟಾರ್ ಕಿಡ್ಸ್ ಗಳಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಫ್ಯಾನ್ ಪೇಜ್ ಗಳನ್ನು ಕೂಡ ಹೊಂದಿದ್ದಾರೆ.ಹೌದು ಐರಾ ಹಾಗೂ ಯಥರ್ವ್ ಅವರ ತುಂಟಾದ ಫೋಟೋಗಳು ಹಾಗು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನಸೆಳೆಯುತ್ತಿದೆ.

ಅದರಲ್ಲಿಯೂ ಈಗ ತಾನೇ ಮಾತು ಕಲೆಯುತ್ತಿರುವ ಜೂನಿಯರ್ ಯಶ್ ಯಥರ್ವ್ ನ ತೊದಲು ನುಡಿಯಂತು ನೆಟ್ಟಿಗರಿಗೆ ಬಹಳ ಕ್ಯೂಟ್ ಎನಿಸುತ್ತಿದೆ. ಅತ್ತ ಅಕ್ಕ ಐರಾ ಕೂಡ ತಮ್ಮನ ಜೊತೆ ತುಂಟಾಟ ಮಾಡುತ್ತಿದ್ದಾಳೆ. ಸತತ ಮೂರು ವರುಷಗಳಿಂದ ಸಿನಿಮಾ ಸಿನಿಮಾ ಎಂದು ನಿರತರಾಗಿದ್ದ ಯಶ್ ಇದೀಗ ಸಿನಿಮಾದಿಂದ ಬ್ರೇಲ್ ತೆಗೆದುಕೊಂಡಿದ್ದು, ಕುಟುಂಬ ಹಾಗೂ ಮಕ್ಕಳ ಜೊತೆ  ಸಮಯ ಕಳೆಯುತ್ತುದ್ದಾರೆ. ಇದೀಗ ಐರಾಗೆ ರಾಕೀ ಕಟ್ಟಿರುವ ಯಥರ್ವನ ವಿಡಿಯೋ ವೈರಲ್ ಆಗಿದೆ. ಆ ಕ್ಷಣ ಹೇಗಿತ್ತು ನೋಡಿ.