ಶ್ವೇತಾ ಚೆಂಗಪ್ಪ ಮಗ ಜಿಯಾನ್ ಕೃಷ್ಣನ ಅವತಾರದಲ್ಲಿ ಎಷ್ಟು ಮುದ್ದಾಗಿದ್ದಾರೆ !

ಇಂದು ಶ್ರೀಕೃಷ್ಣ ಜನ್ಮಾಷ್ಟಮಿ, ಈ ಹಬ್ಬ ಎಲ್ಲರಿಗೂ ಬಹಳ ಸ್ಪೆಷಲ್. ಅದರಲ್ಲು ಮುದ್ದು ಮಕ್ಕಳಿರುವ ಮನೆಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬದ ಸಡಗರವೇ ಬೇರೆ. ಮಕ್ಕಳಿಗೆ ಕೃಷ್ಣನ ಅಥವಾ ರಾಧೆಯ ಅಲಂಕಾರ ಮಾಡಿ, ಅವರುಗಳ ಕೈಯಲ್ಲಿ ಪುಟ್ಟ ಹೆಜ್ಜೆ ಹಾಕಿಸಿ ಅದನ್ನು ನೋಡಿ ಸಂಭ್ರಮ ಪಡುವರು ಹೆತ್ತವರಿಗೆ ಬಹಳ ಸಂತೋಷ ಕೊಡುತ್ತದೆ. ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಿರುತೆರೆ ನಟಿ ಮತ್ತು ನಿರೂಪಕಿ ಆಗಿರುವ ಶ್ವೇತಾ ಚೆಂಗಪ್ಪ ಅವರು ತಮ್ಮ ಮುದ್ದು ಮಗನ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

“ನಮ್ಮ ಮನೆಯ ಪುಟಾಣಿ ಮುದ್ದುಕೃಷ್ಣನಿಂದ ನಿಮ್ಮೆಲ್ಲರಿಗೂ
ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಶಯಗಳು ❤️
ನನ್ನ ಮಗನನ್ನು ಕೃಷ್ಣನಾಗಿ ನೋಡುವ ನನ್ನ
ಆಸೆ ನೆರವೇರಿದೆಹೇಗಿದ್ದಾನೆ ನಮ್ಮ ಮನೆಯ ಪುಟಾಣಿ ಮುದ್ದು ಕೃಷ್ಣ @Jiyaan ಈ ಪುಟಾಣಿ ಕೃಷ್ಣ ನಮ್ಮ ಬಾಳಿಗೆ ಅಪಾರವಾದ ಪ್ರೀತಿ ನಗುವನ್ನು ಖುಷಿಯನ್ನು ತಂದು ಕೊಟ್ಟಿದ್ದಾನೆ
ಹಾಗೆಯೇ ಆ ಭಗವಂತ ಶ್ರೀಕೃಷ್ಣ ನಿಮ್ಮೆಲ್ಲರ ಬಾಳಲ್ಲಿ ಸುಖ,ಶಾಂತಿ,ನೆಮ್ಮದಿ ಹಾಗೂ ಅಪಾರವಾದ ಪ್ರೀತಿಯನ್ನು ಕೊಡಲಿ ಅಂತ ಹಾರೈಸುತ್ತೇವೆ ..” ಎಂದು ಕ್ಯಾಪ್ಶನ್ ಬರೆದು ಫೋಟೋಸ್ ಪೋಸ್ಟ್ ಮಾಡಿದ್ದಾರೆ ಶ್ವೇತಾ ಚೆಂಗಪ್ಪ.

ಶ್ವೇತಾ ಚೆಂಗಪ್ಪ ಹಲವು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವಾರು ಧಾರವಾಹಿಗಳಲ್ಲಿ ನಟಿಸಿದ್ದಾರೆ ಹಾಗೂ ಹಲವಾರು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ರಾಣಿ ಪಾತ್ರದ ಮೂಲಕ ಬಹಳ ಫೇಮಸ್ ಆಗಿದ್ದರು ಶ್ವೇತಾ. ಮಗ ಜಿಯಾನ್ ಹುಟ್ಟಿದ ನಂತರ ನಟನೆಯಿಂದ ಸ್ವಲ್ಪ ದೂರ ಉಳಿದಿದ್ದರು.