ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಶುಭಾ ಪೂಂಜಾ. ಜಾಕ್ ಪಾಟ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿ, ಮೊಗ್ಗಿನ ಮನಸ್ಸು ಸಿನಿಮಾ ಇಂದ ಬಹಳ ಜನಪ್ರಿಯತೆ ಮತ್ತು ಬೇಡಿಕೆ ಸೃಷ್ಟಿಸಿಕೊಂಡರು ಶುಭಾ ಪೂಂಜಾ. ಕೆಲ ವರ್ಷಗಳ ಕಾಲ ಕೆರಿಯರ್ ನಲ್ಲಿ ಉತ್ತಮ ಆಯ್ಕೆಗಳನ್ನು ಮಾಡಿದ ಶುಭಾ ಪೂಂಜಾ ನಂತರ ಎಡವಿದರು. ಅದರಿಂದ ಅವಕಾಶ ಮತ್ತು ಜನಪ್ರಿಯತೆ ಎರಡನ್ನು ಕಳೆದುಕೊಂಡರು ಶುಭಾ ಪೂಂಜಾ.
ಇವರ ಆಯ್ಕೆಯಿಂದ ಜನರಿಗೆ ಇವರ ಬಗ್ಗೆ ಇರುವ ಅಭಿಪ್ರಾಯವೇ ಬದಲಾಗಿ ಹೋಗಿತ್ತು. ಆದರೆ ಬಿಗ್ ಬಾಸ್ ಕನ್ನಡ ಸೀಸನ್8ಕ್ಕೆ ಸ್ಪರ್ಧಿಯಾಗಿ ಬಂದ ನಂತರ ಶುಭಾ ಪೂಂಜಾ ಅವರ ನಿಜವಾದ ವ್ಯಕ್ತಿತ್ವ ಏನು ಎಂಬುದು ಜನರಿಗೆ ಅರ್ಥವಾಯಿತು. ಶುಭಾ ಬಹಳ ಮುಗ್ಧ ಸ್ವಭಾವದ ಕ್ಯೂಟ್ ಹುಡುಗಿ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಂಡರು. ಬಿಬಿಕೆ8 ನ ಫೇವರೆಟ್ ಕಂಟೆಸ್ಟಂಟ್ ಶುಭಾ ಪೂಂಜಾ ಎಂದರೆ ತಪ್ಪಾಗುವುದಿಲ್ಲ. ನಮಗೆಲ್ಲ ಗೊತ್ತರುವ ಹಾಗೆ, ಶುಭಾ ಅವರು ಎಂಗೇಜ್ ಆಗಿದ್ದಾರೆ. ಇವರ ಭಾವಿ ಪತಿಯ ಹೆಸರು ಸುಮಂತ್. ಸುಮಂತ್ ಅವರನ್ನು ಪ್ರೀತಿಯಿಂದ ಚಿನ್ನಿ ಬಾಂಬ್ ಎನ್ನುತ್ತಾರೆ ಶುಭಾ.
ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ದಿನಕ್ಕೆ ಒಂದು ಸಾರಿ ಆದರೂ ಚಿನ್ನಿ ಬಾಂಬ್ ಎಂದು ಹೇಳಿ ಹೇಳಿ, ಮನೆಯ ಸದಸ್ಯರಿಗೆ ಮತ್ತು ವೀಕ್ಷಕರಿಗೆ ಚಿನ್ನಿ ಬಾಂಬ್ ಎನ್ನುವ ಹೆಸರು ಬಾಯಿಪಾಠ ಆಗುವ ಹಾಗೆ ಮಾಡಿಬಿಟ್ಟಿದ್ದರು ಶುಭಾ. ಶುಭಾ ಅವರು ಕಳೆದ ವರ್ಷ 2020ರ ಕೊನೆಗೆ ಸುಮಂತ್ ಅವರ ಜೊತೆ ಮದುವೆ ಆಗಬೇಕಿತ್ತು. ಕರೊನಾ ಕಾರಣದಿಂದಾಗಿ ಮದುವೆಯನ್ನು ಮುಂದಕ್ಕೆ ಹಾಕಿದ್ದರು ಶುಭಾ. ಅದೇ ಸಮಯಕ್ಕೆ ಶುಭಾ ಅವರಿಗೆ ಬಿಗ್ ಬಾಸ್ ಹೋಗುವ ಅವಕಾಶ ಸಿಕ್ಕಿತು. ಹಾಗಾಗಿ ಮದುವೆಯನ್ನು ಮತ್ತೊಮ್ಮೆ ಮುಂದಕ್ಕೆ ಹಾಕಿದರು. ಇದೀಗ ಶುಭಾ ಪೂಂಜಾ ಬಿಗ್ ಮನೆಯಿಂದ ಹೊರಬಂದಿದ್ದಾರೆ.
ಹೊರಬಂದ ತಕ್ಷಣ ಸುಮಂತ್ ಅವರ ಜೊತೆ ಗೋವಾ ಟ್ರಿಪ್ ಹೋಗಿ ಅಲ್ಲೇ ತಮ್ಮ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡರು ಶುಭಾ. ಇದೀಗ ಶುಭಾ ಪೂಂಜಾ ತಮ್ಮ ಹುಟ್ಟೂರಾದ ಉಡುಪಿಗೆ ಭಾವಿ ಪತಿ ಸುಮಂತ್ ಬಿಲ್ಲವ ಅವರ ಜೊತೆ ಹೋಗಿದ್ದಾರೆ, ಹುಟ್ಟೂರಿನ ತಮ್ಮ ಮನೆಯಲ್ಲಿ ಮಳೆ, ಪ್ರಕೃತಿ ಸೊಬಗನ್ನು ಭಾವಿ ಪತಿ ಜೊತೆ ಎಂಜಾಯ್ ಮಾಡುತ್ತಾ ಇದ್ದಾರೆ ಶುಭಾ ಪೂಂಜಾ, ಹಾಗೂ ತಮ್ಮ ಮನೆಯ ಫೋಟೋಗಳು ಮತ್ತು ಸುಮಂತ್ ಅವರ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ಶುಭಾ. ಶುಭಾ ಅವರ ಮನೆ ಪ್ರಕೃತಿಗೆ ಎಷ್ಟು ಹತ್ತಿರವಾಗಿದೆ ನೋಡಿ.