ನಮ್ಮ ಭಾರತೀಯ ಸಂಗೀತ ಪ್ರೇಮಿಗಳು ಎಂದಿಗೂ ಕೂಡ ಮರೆಯಲು ಸಾಧ್ಯವಿಲ್ಲದ ಗಾಯಕರಿದ್ದರು
ಅಂದರೆ ಅದು ಕೇವಲ ಎಸ್ ಪಿ ಬಾಲಸುಬ್ರಹ್ಮಣ್ಯಂ ರವರು ಮಾತ್ರ.ಹೌದು ಪ್ರತಿ ಭಾಷೆಯ
ಚಿತ್ರರಂಗದ ಸಂಗೀತ ದಿಗ್ಗಜರು ಅಥವಾ ಸಹ ಗಾಯಕರ ಬಾಯಲ್ಲಿ ಬಹಳ ಪ್ರೀತಿಯಿಂದ ಬಾಲು ಸರ್
ಎಂದೇ ಕರೆಯಲ್ಪಡುತ್ತಿದ್ದ ಇವರು ತಮ್ಮ 55 ವರ್ಷಗಳ ಸುದೀರ್ಘ ಸಂಗೀತ ವೃತ್ತಿ
ಬದುಕಿನಲ್ಲಿ ಸರಿ ಸುಮಾರು 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ ಭಾರತೀಯ ಸಂಗೀತ
ಲೋಕದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದರು ಅಲ್ಲದೇ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ
ಸಾಧನೆ ಕೂಡ ಮಾಡಿದ್ದಾರೆ.
ಮೂಲತಃ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ತೆಲುಗು ಬ್ರಾಹ್ಮಣ ಕುಟುಂಬದಲ್ಲಿ 1946ರ
ಜೂನ್ 4ರಂದು ಜನಿಸಿದ ಅವರು ಮೊಟ್ಟಮೊದಲಿಗೆ ಸಿನಿಮಾದಲ್ಲಿ ಹಾಡಿದ್ದು 1966ರಲ್ಲಿ ಶ್ರೀ
ಶ್ರೀ ಮರ್ಯಾದಾ ರಾಮಣ್ಣ ಎಂಬ ತೆಲುಗು ಚಿತ್ರದಲ್ಲಿ. ಇನ್ನು ವಿಶೇಷ ಅಂದರೆ ಎಸ್ ಪಿ
ಬಾಲಸುಬ್ರಹ್ಮಣ್ಯಂ ರವರು ಭಾಷೆ, ಗಡಿಯನ್ನು ಮೀರಿದ ಕಲಾವಿದರಾಗಿದ್ದು, ದಕ್ಷಿಣ ಭಾರತದ
ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ಹಾಡಿ ಸೈ ಎನಿಸಿಕೊಂಡಿದ್ದವರು. ಹಿಂದಿ ಭಾಷೆಗೆ ಅವರು
1980 ಮತ್ತು 1990ರ ದಶಕದಲ್ಲಿ ಅನೇಕ ಹಾಡುಗಳನ್ನು ಹಾಡಿದ್ದು, ಏಕ್ ತುಜೆ ಕೆ ಲಿಯೆಗೆ
ಹಾಡಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಗೆದ್ದುಕೊಂಡಿದ್ದರು.
ಗಾಯನ ಮಾತ್ರವಲ್ಲದೆ ಸಂಗೀತ ಸಂಯೋಜಕರಾಗಿ, ನಿರ್ಮಾಪಕರಾಗಿ, ನಟರಾಗಿಯೂ ಕೂಡ ತಮ್ಮ
ಬಹುಮುಖ ಪ್ರತಿಭೆಯನ್ನು ಮೆರೆದ ಎಸ್‍ಪಿಬಿ ಅವರು ದೂರದರ್ಶನದಲ್ಲಿ ಒಂದು ದಶಕಗಳ ಕಾಲ ಎದೆ
ತುಂಬಿ ಹಾಡುವೆನು ಕಾರ್ಯಕ್ರಮ ನಡೆಸಿಕೊಟ್ಟಿದ್ದಲ್ಲದೆ, ಇತರ ಭಾಷೆಗಳಲ್ಲೂ ಅಂತದೇ
ಕಾರ್ಯಕ್ರಮಗಳನ್ನು ನೀಡಿ ಅನೇಕ ಬಾಲ ಪ್ರತಿಭೆಗಳಿಗೆ ಉತ್ತೇಜನ, ಮಾರ್ಗದರ್ಶನ, ನೈಜ
ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಸದ್ಯ ಇದೀಗ ಎಸ್ ಬಿ ಪಿ ಅವರ ಹೆಸರಿನಲ್ಲಿ
ಮತ್ತೊಮ್ಮೆ ಎದೆ ತುಂಬಿ ಹಾಡುವೇನು ಕಾರ್ಯಕ್ರಮ ಪ್ರಸಾರವಾಗುತ್ತಿದ್ದು ಈಗಾಗಲೇ ಎರಡನೇ
ವಾರಕ್ಕೆ ಕಾಲಿಟ್ಟಿದೆ. ಅಲ್ಲದೇ ಸಾಕಷ್ಟು ಪ್ರತಿಭೆಗಳಿಗೂ ಕೂಡ ಇದು ವೇದಿಕೆಯಾಗಿದದ್ದು
ಇದರ ಜತೆಗೆ ಎಸ್‍ಪಿಬಿ ಅವರನ್ನು ನೆನಪಿಸಿಕೊಳ್ಳುವ ಕೆಲಸ ಕೂಡ ನಡೆಯುತ್ತಿದೆ.
ಇನ್ನು ಎಸ್ ಪಿ ಬಿ ಅವರು ಅಭಿಮಾನಿ ಬಳಗದ ಜೊತೆಗೆ ದೊಡ್ಡ ಶಿಷ್ಯವರ್ಗವನ್ನೂ ಕೂಡ
ಹೊಂದಿದ್ದು ನೇರವಾಗಿ ಅಥವಾ ಪರೋಕ್ಷವಾಗಿ ಸಾಕಷ್ಟು ಮಂದಿ ಅವರಿಂದ ಹಲವು ವಿಚಾರಗಳನ್ನು
ಕಲಿತಿದ್ದಾರೆ ಎಂದೇ ಹೇಳಬಹುದು.ಈ ಕಾರಣಕ್ಕಾಗಿಯೇ ಎಸ್‍ಪಿಬಿ ಎಂದರೆ ಪ್ರತಿಯೊಬ್ಬರಿಗೂ
ಗೌರವ. ಸದ್ಯ ಇದೀಗ ಅವರಿ ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ
ಎರಡನೇ ಇನ್ನಿಂಗ್ಸ್ ಆರಂಭವಾಗಿದ್ದು ಈ ವೇದಿಕೆ ಮೇಲೆ ಸಾಕಷ್ಟು ಭಾವನಾತ್ಮಕ ಕ್ಷಣಗಳು
ಸಾಕ್ಷಿಯಾಗುತ್ತಿದೆ. ಸದ್ಯ ಇದೀಗ ಕಾರ್ಯಕ್ರಮದ ತೀರ್ಪುಗಾರರು ಎಸ್‍ಪಿಬಿ ಅವರನ್ನು
ನೆನೆನೆನೆದು ಕಣ್ಣೀರು ಹಾಕುತ್ತಿದ್ದು ಇದೀಗ ರಾಜೇಶ್ ಕೃಷ್ಣನ್ ಕೂಡ
ಭಾವುಕರಾಗಿದ್ದಾರೆ.
ಹೌದು ತಮಗೆಲ್ಲರಿಗೂ ತಿಳಿದಿರುವ ಹಾಗೆ ಬಾಲು ಸರ್ ಕಂಡರೆ ರಾಜೇಶ್ ಕೃಷ್ಣನ್
ಅವರಿಗೆ ಅಪಾರ ಗೌರವ ಹಾಗೂ ಹೃದಯ ತುಂಬುವಷ್ಟು ಪ್ರೀತಿ. ಸದ್ಯ ಇದೀಗ ರಾಜೇಶ್ ರವರಿಗೆ
ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಜಡ್ಜ್ ಆಗುವ ಸದಾವಕಾಶ ಸಿಕ್ಕಿದ್ದು ಇದಕ್ಕೆ
ಅವರು ಸಾಕಷ್ಟು ಸಂಭ್ರಮವನ್ನು ವ್ಯಕ್ತಪಡಿಸುದ್ದಾರೆ. ಸದ್ಯ ಇದೀಗ ಈ ವೇದಿಕೆಯ ಮೇಲೆ
ನಿಮಗಿದೆ ಮರುಜನ್ಮ, ಜನಿಸಿರಿ ದಯಮಾಡಿ, ಕಾಯುತಿದೆ ಕರುನಾಡು ಎನ್ನುವ ಸಾಲುಗಳನ್ನು
ಹೇಳುತ್ತಿದ್ದಂತೆ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದು ವೇದಿಕೆ ಮೇಲೆಯೇ ಗಳಗಳನೆ
ಅತ್ತಿದ್ದಾರೆ.
ಸದ್ಯ ಈ ಸಂಚಿಕೆ ಆಗಸ್ಟ್ 21 ರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದ್ದು ಹೊಸ
ಸೀಸನ್ನಲ್ಲಿ ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ, ರಘು ದೀಕ್ಷಿತ್ ಹಾಗೂ ಎಸ್‍ಪಿಬಿ ಮಗ
ಚರಣ್ ರವರು ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ಸದ್ಯ ರಾಜೇಶ್ ರವರು ಅತ್ತಿರುವ
ಸಣ್ಣ ತುಣುಕನ್ನು ಕಲರ್ಸ್ ವಾಹಿನಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ
ಹಂಚಿಕೊಂಡಿದ್ದು ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ.