ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ತಿರುಪತಿಯ ತಿಮ್ಮಪ್ಪನನ್ನ ಚೆಲುವರಲ್ಲಿ ಚೆಲುವ ಎಂಧು ಹಾದಿ ಹೊಗಳಲ್ಲಾಗುತ್ತದೆ. ಅಷ್ಟು ಸುರದ್ರೂಪಿ ಏಳುಕುಂಡಲವಡ ಶ್ರೀ ವೆಂಕಟೇಶ್ವರ ಸ್ವಾಮಿ. ಅವನ ದರ್ಶನಕ್ಕೆ ಜನ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರುತ್ತಾರೆ . ಸದಾ ಹಸನ್ಮುಖಿಯಾಗಿ, ಹೂವಿನ ಅಲಂಕಾರದಲ್ಲಿ ಕಂಗೊಳಿಸೋ ತಿಮ್ಮಪ್ಪ ಅವನ ಅಂದಕ್ಕೆ ಅವನೇ ಸಾಟಿ.
ಹಣೆಯ ಮೇಲಿನ ನಾಮ ಎಷ್ಟು ಚೆಂದವೋ ಅಷ್ಟೇ ಚೆಂದ ಅವನ ಗಲ್ಲದ ಮೇಲಿನ ಬೊಟ್ಟು. ವೆಂಕಟೇಶ್ವರನ ಗಲ್ಲದ ಮೇಲೆ ಬಿಳಿ ಚುಕ್ಕೆ ಯಾಕೆ ಬಂದಿತು? ಎಂದಾದ್ರೂ ಯೋಚಿಸಿದ್ರಾ? ವೆಂಕಟೇಶ್ವರ ಸ್ವಾಮಿ ಅವರ ಗಲ್ಲದ ಮೇಲೆ ಕರ್ಪೂರ ಏಕೆ? ನಂತರ ನೀವು ಈ ಕಥೆಯನ್ನು ಓದಬೇಕು…
ಸಾವಿರಾರು ವರ್ಷಗಳ ಹಿಂದೆ ತಿರುಮಲೆಯಲ್ಲಿ ಈಗಿನಂತೆ ಜನದಟ್ಟಣೆಗಳೇನೂ ಇಲ್ಲದ ಕಾಲ, ಎತ್ತ ನೋಡಿದರು ಸುತ್ತಲೂ ಕಾಡು , ಕತ್ತಲು ತುಂಬಿಕೊಡಿತ್ತು . ಶ್ರೀ ವೆಂಕಟೇಶ್ವರ ಪೂಜೆ ಮಾಡುವ ಅರ್ಚಕರಲ್ಲದೆ ಆಗೊಮ್ಮೆ ಈಗೊಮ್ಮೆ ಸ್ವಾಮಿಯ ದರುಷನಕ್ಕೆಂದು ಬರುವ ಭಕ್ತರುಗಳನ್ನು ಹೊರತುಪಡಿಸಿದರೆ,ಮತ್ತೆ ಯಾರೂ ಅಲ್ಲಿರುವ ಸಾಹಸಮಾಡದ ಕಾಲವದು. ಮುರು ಮತ್ತೊಂದು ಜನ ಕಾಣಿಸಿಕೊಳ್ಳುತ್ತಿದ್ದ ಕಾಲ.
ಆ ಕಾಲದಲ್ಲಿ ಅಲ್ಲಿಗೆ ಸ್ವಾಮಿ ದರ್ಶನಕ್ಕೆ ಬಂದ ರಾಮಾನುಜಾಚಾರ್ಯರು, ನಿತ್ಯಾಲಂಕಾರಪ್ರಿಯನಾದ ವೆಂಕಟೇಶ್ವರನನ್ನು ಅಲಂಕರಿಸಲು ಬೇಕಾದ ಹೂವುಗಳಿಗಾಗಿ ಅಲ್ಲೇ ನೆಲಸಿ ಹೂ ತೋಟವೊಂದನ್ನು ನಿರ್ಮಿಸಿ ಸ್ವಾಮಿಯ ಸೇವಿಸಲಿಕ್ಕಾಗಿ ತಮ್ಮ ಶಿಷ್ಯರಲ್ಲಿ ವಿಚಾರಿಸಿದಾಗ ಅವರ ಶಿಷ್ಯರಲ್ಲೊಬ್ಬರಾದ ಆನಂದಾಚಾರ್ಯರು ಶ್ರಿನಿವಾಸನ ಸೇವೆ ದೊರೆತಿರುವುದು ನನ್ನ ಪುಣ್ಯ ಎಂದು ಸಂತೋಷದಿಂದ ಸ್ವಾಮಿ ಸೇವೆಯನ್ನು ಒಪ್ಪಿಕೊಂಡರು.
ಹೂ ತೋಟವನ್ನು ಮೊದಲು ನಿರ್ಮಿಸಿ ನಂತರ ಸ್ವಾಮಿಗೆ ಬಗೆ ಬಗೆಯ ಹೂವಿನ ಅಲಂಕಾರ ಮಾಡ್ಬೇಕೆಂದು ಯೋಚಿಸಿದರು . ಆ ತೋಟಕ್ಕೆ ನೀರನ್ನು ಪೂರೈಸಲು ಅಲ್ಲಿಯೇ ಒಂದು ಬಾವಿ ನಿರ್ಮಾಣ ಮಾಡುವ ಸಾಹಸಕ್ಕೆ ಕೈ ಹಾಕಿದ್ದರು ಶ್ರೀಯುತ ಆನಂದಾಚಾರ್ಯರು . ಇವರ ಈ ಸೇವೆಗೆ ದಿನ ತುಂಬಿದ ಗರ್ಭಿಣಿ ಮಡದಿಯು ಕೈ ಜೋಡಿಸಲು ಮುಂದಾದರು.
ಹೂವಿನ ಗಿಡಗಳಿಗಾಗಿ ಬಾವಿಯೊಂದನ್ನು ನಿರ್ಮಿಸಲು ಪ್ರಾರಂಭಮಾಡಿದ ಆನಂದಾಚಾರ್ಯರು ಹಾರೆಯಿಂದ ಮಣ್ಣು ತೆಗೆದು ಮಣ್ಣಿನ್ನು ಒಂದು ಬುಟ್ಟಿಗೆ ತುಂಬಿಸುತ್ತ, ಆ ಬುಟ್ಟಿಯನ್ನು ತನ್ನ ಗರ್ಭಿಣಿ ಪತ್ನಿಯ ತಲೆಯಮೇಲಿಟ್ಟರೆ,ಆಕೆ ಆ ಮಣ್ಣನ್ನು ಹೊತ್ತೊಯ್ದು ದೂರದಲ್ಲಿ ಬಿಸಾಡಿ ಬರುತ್ತಿದ್ದರು. ತನಗಾಗಿ ತನ್ನ ಭಕ್ತರು ಪಡುತ್ತಿದ್ದ ಶ್ರಮವನ್ನು ಕಂಡ ಕರುಣಾಸಾಗರ ಶ್ರೀನಿವಾಸನು ವೇಷಮರೆಸಿ ಬಾಲಕನ ರೂಪಧಾರಿಯಾಗಿ ಆನಂದಾಚಾರ್ಯರ ಬಳಿ ಬಂದರು.
ಅಯ್ಯಾ..ನಾನೂ ನಿಮ್ಮ ಕೆಲಸದಲ್ಲಿ ಬಾಗಿಯಾಗಲೇ ಪಾಪ ನಿಮ್ಮಿಬ್ಬರ ಶ್ರಮಕಂಡು ನನಗೂ ಸಹಾಯ ಮಾಡಬೇಕೆನ್ನುವ ಮನಸ್ಸಾಗಿದೆ ಎಂದರು. ಆನಂದಾಚಾರ್ಯರು ಆ ಹುಡುಗನ ಮಾತನ್ನು ಕೇಳಿ..ಹುಡುಗಾ…ಇದು ಶ್ರೀವಾರಿಗೆ ನಾನೂ ನನ್ನ ಪತ್ನಿಯೂ ಮಾಡುತ್ತಿರುವ ಸೇವೆ ,ಇದರಲ್ಲಿ ನೀನು ಬಾಗಿಯಾಗುವುದೇನು ಬಂತು ಹೊರಡು ಹೊರಡಿಲ್ಲಿಂದ ಅಂದುಬಿಟ್ಟರು
ಮತ್ತೆಷ್ಟು ಕೇಳಿದರೂ ಒಪ್ಪದ ಅವರನ್ನು ಬಿಟ್ಟು ಬಾಲಕನಾದ ಶ್ರೀನಿವಾಸದೇವರು ಆತನ ಪತ್ನಿಯ ಬಳಿಹೋಗಿ ಆಕೆಯ ಕೈಲಿದ್ದ ಮಣ್ಣಿನ ಬುಟ್ಟಿಯನ್ನು ಓಯ್ದು ಮಣ್ಣನ್ನು ಹಾಕಿ ಬರುವ ಕೆಲಸ ಪ್ರಾರಂಬಿಸಿದರು.
ತುಂಬಿ ಕೊಟ್ಟ ಮಣ್ಣನ್ನು ಇಷ್ಟು ಬೇಗ ಬಿಸಾಡಿ ಬರುತ್ತಿದ್ದ ಪತ್ನಿಯನ್ನು ವಿಚಾರಿಸಿದಾಗ ಆಕೆ ತನ್ನ ಸಹಾಯಕ್ಕೆ ಹುಡುಗನೊಬ್ಬ ಬಂದ ವಿಷಯವನ್ನು ಹೇಳಬೇಕಾಯಿತು. ಇದನ್ನು ಕೇಳಿದ ಆನಂದಾಚಾರ್ಯರ ಕೋಪ ನೆತ್ತಿಗೇರಿತು. ಕೈಲಿದ್ದ ಹಾರೆಯೊಂದಿಗೆ ಆತ ಆ ಹುಡುಗನ ಬೆನ್ನಟ್ಟಿದರು. ತನ್ನನ್ನು ಹೊಡೆಯಲು ಹಾರೆ ಹಿಡಿದು ಅಟ್ಟಿಸಿಕೊಂಡು ಬಂದ ಆಚಾರ್ಯರನ್ನು ಕಂಡು ಆ ಬಾಲಕನಿಗೆ ನಗುವೋ ನಗು.ಕೈಗೆ ಸಿಗದಂತೆ ತಪ್ಪಿಸಿಕೊಂಡು ಓಡುತ್ತಿದ್ದ ಬಾಲಕನನ್ನು ನೋಡಿ ಕೈಯಲ್ಲಿದ್ದ ಹಾರೆಕೋಲನ್ನೇ ಆ ಬಾಲಕನಿಗೆ ತಾಗುವಂತೆ ಬೀಸಿದರು.
ಆ ಹಾರೆ ಬಾಲಕನ ಗಲ್ಲವನ್ನು ಸವರಿಕೊಂಡು ಹೋಗೇ ಬಿಟ್ಟಿತು,ಬಾಲಕನಾದರೂ ಆಗಲೂ ಕೈಗೆ ಸಿಗದೆ ಓಡಿ ಹೋಗಿ ಶ್ರೀ ವೆಂಕಟೇಶ್ವರನ ಗರ್ಭಗುಡಿಗೆ ನುಗ್ಗಿ ಮಾಯವಾಗಿಬಿಟ್ಟ, ಆಚಾರ್ಯರಿಗೆ ಕೋಪ ,ಗಾಬರಿ ಒಟ್ಟಾಗಿತ್ತು. ಅಟ್ಟಿಸಿಕೊಂಡು ಬಂದರೂ ಕೈಗೆ ಸಿಗದೆ ತಪ್ಪಿಸಿಕೊಂಡು ಗರ್ಭಗುಡಿಗೆ ಓಡಿಹೋದ ಬಾಲಕನ ಬಗ್ಗೆ ಅರ್ಚಕರಿಗೆ ದೂರು ಹೇಳಿದರು ಆನಂದಾಚಾರ್ಯರು. ಸರಿ ಅರ್ಚಕರು ಗರ್ಭಗುಡಿಯಲ್ಲಿ ಹುಡುಕಿದರೂ ಎಲ್ಲೂ ಬಾಲಕನ ಪತ್ತೆಯಿಲ್ಲ.ಆದರೆ ಅಲ್ಲೊಂದು ಘೋರ ಅನರ್ಥವಾಗಿಹೋಗಿತ್ತು.