ಒಬ್ಬ ತಾಯಿ ತನ್ನೊಡಲಲ್ಲಿ ಮಗುವನ್ನು ಒಂಭತ್ತು ತಿಂಗಳು ಹೊರುತ್ತಾಳೆ. ಆದರೆ ಆ ಮಗುವಿಗೆ ಜನ್ಮ ನೀಡಿದ ತನ್ನ ಕರುಳ ಕುಡಿ ಜೊತೆ, ಹಾಗೆಯೇ ಮಗುವಿಗೆ ತಾಯ ಜೊತೆ ಬಿಗಿಯಾದ ಭಾಂದವ್ಯ ಬೆಳೆಯಲು ಕಾರಣ ಆಗುವುದೇ ತಾಯಿ ಉಣಿಸುವ ಎದೆ ಹಾಲು. ತನ್ನ ಮಗುವಿಗೆ ಹಾಲುಣಿಸುವ ತಾಯಿಗಷ್ಟೆ ಗೊತ್ತು ಆ ಅನುಭವ ಎಂಥದ್ದು ಎಂದು. ತಾಯಿ ತನ್ನ ಎಲ್ಲಾ ಪ್ರೀತಿ, ಮಮತೆಯನ್ನು ಹಾಲು ಉಣಿಸುವ ಮೂಲಕ ಕಂದನಿಗೆ ಉಣ ಬಡಿಸುತ್ತಾಳೆ. ನವಜಾತ ಮಗುವಿಗೆ ತಾಯಿಯ ಎದೆಹಾಲು ಅಮೃತದಂತೆ.
ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ತಾಯಿಯ ಎದೆ ಹಾಲು ಸಿಕ್ಕರೆ ಆ ಮಗು ಆರೋಗ್ಯಪೂರ್ಣವಾಗಿರುತ್ತದೆ. ಆದರೆ ಈಗಿನ ಕಾಲಮಾನದಲ್ಲಿ ಅದೆಷ್ಟೊ ನವಜಾತ ಶಿಶುಗಳು ಎದೆ ಹಾಲು ಇಲ್ಲದೆ ಸಿಗುತ್ತಿಲ್ಲ, ಇದಕ್ಕೆ ತಾಯಿಯ ಆರೋಗ್ಯದ ಸಮಸ್ಯೆಯೂ ಕಾರಣವಾಗುತ್ತದೆ. ಇನ್ನು ಕೆಲವರು ಮಗುವಿಗೆ ಹಾಲುಣಿಸಿದರೆ ಎಲ್ಲಿ ತಮ್ಮ ಸೌಂದರ್ಯ ಹಾಳಾಗುತ್ತದೆಯೋ ಅನ್ನುವ ಕಾರಣ ಮಗುವಿಗೆ ಪೌಡರ್ ಹಾಲನ್ನು ಫೀಡಿಂಗ್ ಬಾಟಲಿ ಮೂಲಕ ಕೊಡುತ್ತಾರೆ. ಇಂತಹ ಮಕ್ಕಳಿಗೆ ಅಪೌಷ್ಟಿಕತೆ ಸಮಸ್ಯೆ ಕಂಡುಬರುತ್ತದೆ.
ಇವರು ಎದೆ ಹಾಲು ಕುಡಿದ ಮಕ್ಕಳಂತೆ ಗಟ್ಟಿಮುಟ್ಟಾಗಿರುವುದಿಲ್ಲ. ತಮ್ಮ ಸೌಂದರ್ಯದ ಕಾಳಜಿಗಾಗಿ ಮಕ್ಕಳನ್ನು ಸಮಸ್ಯೆಗೆ ನೂಕುವಂತಹ ತಾಯಂದಿರು ಹೆಚ್ಚಾಗಿರುವಂತಹ ಕಾಲದಲ್ಲಿ ಇಲ್ಲೊಬ್ಬ ಮಹಾತಾಯಿ ಸುಮಾರು 42 ಲೀಟರ್ ಅಷ್ಟು ಹಾಲನ್ನು ದಾನ ಮಾಡಿದ್ದಾಳೆ. ಈ ಮಹಿಳೆ ನಮ್ಮ ನಿಮ್ಮಂತೆ ಸಾಮಾನ್ಯರಲ್ಲ. ಬದಲಾಗಿ ಖ್ಯಾತ ನಟಿ. ಸಾಮಾನ್ಯವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿರುವವರು ತಮ್ಮ ಸೌಂದರ್ಯಕ್ಕೆ ಹೆಚ್ಚಾಗಿಯೇ ಒತ್ತು ಕೊಡುತ್ತಾರೆ. ಆದರೆ ಇವರು ಹಾಗೆ ಮಾಡಿಲ್ಲ ತನ್ನ ಎದೆಹಾಲು ನೀಡುವ ಮೂಲಕ 60 ಮಕ್ಕಳ ಪಾಲಿಗೆ ಮಹಾತಾಯಿ ಆಗಿದ್ದಾಳೆ.
ಆ ನಟಿ ಬೇರಾರೂ ಅಲ್ಲ, ಬಾಲಿವುಡ್’ನ ನಿರ್ಮಾಪಕಿ ಹಾಗೂ ನಟಿ ನಿಧಿ ಪಾರ್ಮಾರ್ ಹೀರಾನಂದಾನಿ. ತಾಪ್ಸಿ ಪನ್ನು ಹಾಗೂ ಭೂಮಿ ಪಾಡ್ನೆಕರ್ ನಟನೆಯ ಸಾಂಡ್ ಕೀ ಆಂಖ್ ಸಿನಿಮಾ ನಿರ್ಮಾಣ ಮಾಡಿದ್ದ ನಿಧಿ ಪಾರ್ಮರ್, ಕಳೆದ ಫೆಬ್ರವರಿ ತಿಂಗಳಲ್ಲಿ ವೀರ್ ಅನ್ನುವ ಗಂಡು ಮಗುವಿಗೆ ಜನ್ಮ ನೀಡಿದ್ದರು. ತನ್ನ ಮಗನಿಗೆ ಹಾಲುಣಿಸಿದ ನಂತರವೂ ಅತಿಯಾದ ಹಾಲು ಬರುತ್ತಿದ್ದ ಕಾರಣ, ಎದೆ ಹಾಲು ಸಂಹ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದರು.
ಮುಂಬೈನ ವೈದ್ಯರನ್ನು ಸಂಪರ್ಕಿಸಿ ಈ ಬಗ್ಗೆ ಮಾತನಾಡಿದ ನಿಧಿ, ಎದೆ ಹಾಲನ್ನು ಸುಮಾರು 3 ತಿಂಗಳ ಕಾಲ ಶೇಖರಿಸಿ ಇಡಬಹುದು ಅನ್ನುವ ಮಾಹಿತಿ ಕಲೆ ಹಾಕಿದ್ದರು. ಅದರಂತೆ ಅವರು ಸುಮಾರು 42 ಲೀಟರ್ ಎದೆಹಾಲು ಸಂಗ್ರಹಿಸಿದ್ದು, ಅದನ್ನು 60 ಮಕ್ಕಳಿಗೆ ಪೂರೈಸಲಾಗಿದೆ. ನಿಧಿ ಪಾರ್ಮರ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಅನೇಕ ತಾಯಂದಿರಿಗೆ ಮಾದರಿಯಾಗಿದ್ದಾರೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.