ನಟಿ ಲಾಸ್ಯ ಶಿಲ್ಪಾ ಶೆಟ್ಟಿ ಮೀರಿಸಿ ಯೋಗ ಮಾಡಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ! ನೋಡಿ

 

ಸಾಮಾನ್ಯವಾಗಿ ನಟಿಯರ ಯಾವುದೇ ಫೋಟೊ ಆಗಲಿ ಅದರಲ್ಲಿ ಆಕರ್ಷಣೆ ಇದ್ದೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ಫೋಟೋ ಶೂಟ್ ಮಾಡಿದ್ರೆ ಆಗ ಹೇಳಲೇ ಬೇಕಾಗಿಲ್ಲ. ಇನ್ನು ನಿಮಗೆಲ್ಲಾ ಲಾಸ್ಯ ನಾಗರಾಜ್ ಗೊತ್ತಿರಲೇ ಬೇಕು. ಬಿಗ್ ಬಾಸ್ ಸೀಸನ್ 5 ರಲ್ಲಿ ವಿಶೇಷ ಸ್ಪರ್ಧಿಯಾಗಿ ಜನರಿಗೆ ಸಖತ್ ಮನೋರಂಜನೆ ನೀಡಿದಂತಹ ನಟಿ. ಲಾಸ್ಯ ನಾಗರಾಜ್ ದಕ್ಷಿಣ ಚಿತ್ರರಂಗದಲ್ಲಿ ಬಹುಭಾಷಾ ನಟಿ ಎಂದು ಕರೆಸಿಕೊಂಡಿದ್ದಾರೆ. ಇವರು ಓದಿದ್ದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ, ಅದೇ ರೀತಿ ಆರಾಧನಾ ಭರತನಾಟ್ಯ ಸಂಸ್ಥೆಯಲ್ಲಿ ನೃತ್ಯ ನಿರ್ದೇಶಕಿಯಾಗಿದ್ದರು.

ಇವರು ಮೊತ್ತ ಮೊದಲು ಅಭಿನಯಿಸಿದ್ದು ಕನ್ನಡದ ’ಅಸತೋಮ ಸದ್ಗಮಯ’ ಚಿತ್ರದಲ್ಲಿ. ಅದೇ ರೀತಿ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರ ಆಗುತ್ತಿದ್ದ ’ಮಿಡ್ ನೈಟ್ ಚಿಲ್ಡ್ರನ್’ ವೆಬ್ ಸೀರಿಸ್ ನಲ್ಲಿ ನಟಿಸಿದ್ದರು. ಇನ್ನು ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ, ಐಟಂ ಸಾಂಗ್ ಗಳಿಗೆ ಹೆಜ್ಜೆ ಹಾಕುವುದರ ಮೂಲಕ ಕಾಣಿಸಿಕೊಂಡಿದ್ದಾರೆ. ಇದರ ಮಧ್ಯೆ ಲಾಯ ನಾಗರಾಜ್ ಅವರು ತಮ್ಮ ವಿಶೇಷ ರೀತಿಯ ಫೋಟೋ ಶೂಟ್ ಗಳ ಮೂಲಕನೂ ಫೇಮಸ್ ಆದವ್ರು. ಈ ಹಿಂದೆ ತನ್ನ ಮಾದಕ ಫೋಟೋ ಶೂಟ್ ಮಾಡಿಸಿದ್ದರು. ಅದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮುದ್ದು ಮುದಾಗಿ ಇರುವ ಜೊತೆಗೆ ಗುಳಿ ಕೆನ್ನೆಯ ಫೋಟ ಶೂಟ್ ಗಳಿಗೆ ಪಡ್ಡೆ ಹುಡುಗರು ನಿದ್ದೆ ಗೆಟ್ಟಿದ್ದರು.

ತಮ್ಮ ಆರೋಗ್ಯದ ಜೊತೆ ಫಿಟ್ ನೆಸ್ ಕಾಯ್ದುಕೊಳ್ಳಲು ಅವರು ಯೋಗಭ್ಯಾಸ ಮಾಡುತ್ತಾರೆ. ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೆಂಬಣ್ಣದ ಲೆಗ್ಗಿನ್ಸ್ ಹಾಗೂ ಬಿಳಿ ಬಣ್ಣದ ಬನಿಯನ್ ಹಾಕಿಕೊಂಡು ವಿಶಿಷ್ಟ ಭಂಗಿಯಲ್ಲಿ ಯೋಗಾಭ್ಯಾಸ ಮಾಡಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಈ ಫೋಟೋಗಳು ಭಾರೀ ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.