ದರ್ಶನ್ ಮದುವೆಗೆ ಆಗಮಿಸಿದ್ದ ರಾಜ್ ದಂಪತಿಗಳು ನೀಡಿದ ವಿಶೇಷ ಉಡುಗೊರೆ ಗೊತ್ತಾ?

 

ಸ್ಯಾಂಡಲ್ ವುಡ್’ನ ಖಡಕ್ ಹೀರೋ ಅಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲದೆ ಬೇರೆ ರಾಜ್ಯಗಳಲ್ಲೂ ದರ್ಶನ್ ಅವರನ್ನು ಆರಾಧಿಸಿವಂತಹ ಅಭಿಮಾನಿಗಳು ಇದ್ದಾರೆ. ಹೀಗೆ ಅಪಾರ ಜನಾಭಿಮಾನಿಗಳನ್ನು ಪಡೆದುಕೊಂಡಿರುವ ದರ್ಶನ್ ಅವರು ಕೇವಲ ನಟನೆಯಲ್ಲಿ ಮಾತ್ರ ಅಲ್ಲ ಅವರ ವ್ಯಕ್ತಿತ್ವ ಕೂಡ ತುಂನಾನೇ ಸ್ಪೆಷಲ್ ಆಗಿದೆ. ದರ್ಶನ್ ಅವರ ಜೊತೆ ಒಂದು ಐದು ನಿಮಿಷ ಮಾತಾನಾಡಿದರೆ ಸಾಕು ಯಾರೇ ಆಗಲಿ ಅವರ ಫ್ಯಾನ್ ಆಗಿಬಿಡ್ತಾರೆ.

ದರ್ಶನ್ ತೂಗುದೀಪ್ ಅವರು ಅದು ಯಾರ ಸಹಾಯವಿಲ್ಲದೆ ತನ್ನ ಸ್ವಂತ ಪರಿಶ್ರಮದಿಂದ ಯಶಸ್ಸಿನ ಉತ್ತುಂಗಕ್ಕೆ ಏರಿದವರು. ಹಾಗಾಗಿಯೇ ಅವರು ಡೋಂಟ್ ಕೇರ್ ವ್ಯಕ್ತಿತ್ವ ಹೊಂದಿದ್ದಾರೆ. ಅವರು ಯಾರಿಗೂ ತಲೆ ಬಾಗಲ್ಲ, ಖಡಕ್ ಹೀರೋ ಆಗಿ ಮಿಂಚಿದವರು. ಆದರೆ ಇವರ ಮನಸ್ಸು ಮಾತ್ರ ಮಗುವಿನಂಥದ್ದು. ಇನ್ನು ಮೆಜೆಸ್ಟಿಕ್ ಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಕಾಲಿಟ್ಟ ದರ್ಶನ್ ಅವರನ್ನು ಅಭಿಮಾನಿಗಳು ನಾನಾ ಹೆಸರಿಂದ ಕರೆಯುತ್ತಾರೆ.

ದಾಸ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್, ಕರಿಯ ಹೀಗೆ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುವ ದರ್ಶನ್ ತೂಗುದೀಪ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರ ಮದುವೆ ಬಗ್ಗೆ, ಅವರಿಬ್ಬರ ಲವ್ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅನೇಕರಿಗೆ ಇದ್ದೇ ಇದೆ. ಹೌದು, ವಿಜಯಲಕ್ಷ್ಮಿ ಅವರನ್ನು ದರ್ಶನ್ ಅವರೇ ಮೊದಲು ಪ್ರೀತಿಸಿದ್ದರು. ತನ್ನ ಸ್ನೇಹಿತನ ಬರ್ತ್ ಡೇ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಲ್ಲಿ ವಿಜಯಲಕ್ಷ್ಮಿ ಕೂಡ ಬಂದಿದ್ದರು. ಇನ್ನು ವಿಜಯಲಕ್ಷ್ಮಿ ಅವರು ದರ್ಶನ್ ಅವರ ದೂರದ ಸಂಬಂಧಿಯೂ ಹೌದು.

ಹೀಗೆ ಆ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಅವರನ್ನು ನೋಡಿದ್ದ ದರ್ಶನ್ ಅವರಿಗೆ ಅವರ ಮೇಲೆ ಒಂದೇ ನೋಟದಲ್ಲಿ ಪ್ರ್ತಿ ಹುಟ್ಟಿತ್ತು. ಇದನ್ನು ಮುಚ್ಚಿಡದೆ ಅದೇ ದಿನ ತನ್ನ ತಾಯ ಬಳಿ ಬಂದ ದರ್ಶನ್, ಆ ಹುಡುಗಿ ನನಗೆ ಇಷ್ಟ ಆಗಿದಾಳೆ, ನಾನು ಮದುವೆ ಆದರೆ ಅವಳನ್ನೇ ಎಂದು ಹೆಳಿದ್ದರಂತೆ. ಅದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಅವರಮ್ಮ, ವಿಜಯಲಕ್ಷ್ಮಿ ಜೊತೆ ಈ ಬಗ್ಗೆ ಮಾತನಾಡಿದಾಗ ಅವರು ಕೂಡ ಓಕೆ ಮಾಡಿದ್ದರು. ಅಲ್ಲಿ ವಿಜಯಲಕ್ಷ್ಮಿ ಅವರಿಗೂ ದರ್ಶನ್ ಮೇಲೆ ಪ್ರೀತಿ ಹುಟ್ಟಿತ್ತು.

ಹೀಗೆ ಎರಡು ಕುಟುಂಬವೂ ಮಾತುಕತೆ ನಡೆಸಿ, ಮೇ 19 ರ 2003ರಲ್ಲಿ ಧರ್ಮಸ್ಥಳದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಅವರ ಲಗ್ನ ಪತ್ರಿಯನ್ನು ಕೂಡ ತುಂಬಾ ಸಿಂಪಲ್ ಆಗಿಯೇ ಮುದ್ರಿಸಲಾಗಿತ್ತು. ಆ ಲಗ್ನ ಪತ್ರಿಕೆ ಹೇಗಿದೆ ಅನ್ನುವುದನ್ನು ನೀವಿಲ್ಲಿ ನೋಡಬಹುದು. ಮಿಸ್ ಮಾಡದೆ ನೋಡಿ ಹಾಗೂ ಈ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.