ತಮ್ಮ ದೈಹಿಕ ಸೌಂದರ್ಯ ಕಾಪಾಡಿಕೊಳ್ಳಲು, ದೇಹವನ್ನು ಸ್ಲಿಮ್ ಆಗಿಡಲು ಸಿನಿಮಾ ಕ್ಷೇತ್ರದ ಹೀರೋ, ಹೀರೋಯಿನ್’ಗಳು, ವಿಲನ್ ಪಾತ್ರಧಾರಿಗಳು ಹೆಚ್ಚಾಗಿ ಜಿಮ್’ಗೆ ಹೋಗುತ್ತಿದ್ದರು. ಬಾಲಿವುಡ್ ಕ್ಷೇತ್ರದಲ್ಲಿ ಜಿಮ್ ಅನ್ನುವುದು ಜೀವನದ ಆವಿಭಾಜ್ಯ ಅಂಗವೇ ಆಗಿ ಹೋಗಿದೆ. ಪ್ರತಿ ದಿನ ವರ್ಕೌಟ್ ಮಾಡಿ ಫಿಟ್ ಆಂಡ್ ಫೈನ್ ಆಗಿರ್ತಾರೆ. ಇದೀಗ ಕನ್ನಡ ಸಿನಿಮಾ ಕ್ಷೇತ್ರದಲ್ಲಿಯೂ ನಟಿ ಮಣಿಯರು ಜಿಮ್ ಗಳತ್ತ ಮುಖಮಾಡಿದ್ದಾರೆ. ಅದರಲ್ಲಿ ಕಿರುತೆರೆ ನಟಿಯರೂ ಕೂಡ ಹಿಂದೆ ಬಿದ್ದಿಲ್ಲ.
ಹೆಚ್ಚಿನ ಧಾರವಾಹಿ ನಟಿಯರು ಜಿಮ್ ಗಳಿಗೆ ಹೋಗಿ ಸಖತ್ ವರ್ಕೌಟ್ ಮಾಡಿ, ಅದರ ಫೋಟೊ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸುತ್ತಿದ್ದಾರೆ. ಇದೀಗ ನಟಿ ರಜಿನಿ ಅವರು ತಾನು ವರ್ಕೌಟ್ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದು, ಇದು ಭಾರೀ ವೈರಲ್ ಆಗಿದೆ. ರಜಿನಿಯವರು ಕೆಲ ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯ ಅಮೃತ ವರ್ಷಿಣಿ ಧಾರವಾಹಿಯಲ್ಲಿ ನಟಿಸಿದ್ದರು.
ಅದರಲ್ಲಿ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ ರಜಿನಿ, ತಮ್ಮ ಅಭಿನಯ ಮೂಲಕ ವೀಕ್ಷಕರನ್ನು ನಗಿಸಿದ್ದರು ಅದೇ ರೀತಿ ಅಳಿಸಿದ್ದರು. ಹಿಂದಿ ಸೀರಿಯಲ್’ನ ಕಥೆಯನ್ನಾಧರಿತ ಆ ಅಮೃತ ವರ್ಷಿಣಿ ಮೂರು ವರ್ಷಕ್ಕೂ ಹೆಚ್ಚು ಕಾಲ ಪ್ರಸಾರ ಆಗಿತ್ತು. ತನ್ನ ಮುಗ್ಧ ನಟನೆಯಿಂದ ವೀಕ್ಷಕರ ಮನಗೆದ್ದ ಅಮೃತ ಪಾತ್ರಧಾರಿಯನ್ನು ಈಗಲು ಯಾರು ಕೂಡ ಮರೆಯಲು ಸಾಧ್ಯ ಇಲ್ಲ. ಇದಾದ ನಂತರ ರಜಿನಿ ಅವರ ಇನ್ನೊಂದು ಪ್ರತಿಭೆ ಬಗ್ಗೆ ಗೊತ್ತಾಗಿದ್ದು ಕಲರ್ಸ್ ಕನ್ನಡದ ಒಂದು ರಿಯಾಲಿಟಿ ಶೋ ಮೂಲಕ.
ಅಮೃತ ವರ್ಷಿಣಿಯಲ್ಲಿ ಗೌರಮ್ಮ ರೀತಿ ಕಾಣಿಸಿಕೊಂಡಿದ್ದ ರಜಿನಿ ಅವರು ಒಬ್ಬ ಅಧ್ಬುತ ಡ್ಯಾನ್ಸರ್ ಅನ್ನುವುದು ಗೊತ್ತಾಗಿದ್ದೇ ಕಲರ್ಸ್ ಕನ್ನಡದ ಡ್ಯಾನ್ಸಿಂಗ್ ಸ್ಟಾರ್ಸ್ ರಿಯಾಲಿಟಿ ಶೋ ಮೂಲಕ. ಈ ಶೋ ನಲ್ಲಿ ಒಂದು ಹಂತದವರೆಗೆ ಹೀಗಿ ತನ್ನ ಅಧ್ಬುತ ಡ್ಯಾನ್ಸ್ ನಿಂದ ವೀಕ್ಷಕರನ್ನು ರಂಜಿಸಿದ್ದ ರಜಿನಿ, ಫೈನಲ್’ಗೆ ಹೋಗುವಂತಹ ಸ್ಪರ್ಧಿಯಾಗಿದ್ದರು. ಆದರೆ ರಿಹರ್ಸಲ್ ಸಂದರ್ಭದಲ್ಲಿ ಬಿದ್ದು ಕಾಲು ಮುರಿದ ಕಾರಣ ಮತ್ತೆ ಅವರು ಮೊದಲಿನ ರೀತಿ ಡ್ಯಾನ್ಸ್ ಮಾಡಲು ಸಾಧ್ಯ ಆಗಿರಲಿಲ್ಲ.