ಪುನೀತ್ ಗೆ ಮಗಳು ಅಮೇರಿಕಾದಲ್ಲಿ ಮಾಡಿದ್ದೇನು ಗೊತ್ತಾ? ಅಶ್ವಿನಿ ಕಣ್ಣೀರಿಟ್ಟಿದ್ದು ಯಾಕೆ ಗೊತ್ತಾ

 


ಅಭಿಮಾನಿಗಳ ಪಾಲಿನ ಪ್ರೀತಿಯ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕುಟುಂಬದ ಪಾಲಿನ ಪ್ರೀತಿಯ ಅಪ್ಪು ಅಗಲಿ ಒಂದು ತಿಂಗಳಿಗಿಂತ ಹೆಚ್ಚಿನ ಸಮಯ ಕಳೆದಿದೆ. ಅಪ್ಪು ಎಂತಹ ಫ್ಯಾಮಿಲಿ ಮ್ಯಾನ್ ಎನ್ನುವುದು ನಮಗೆ ಗೊತ್ತಿದೆ ಎಷ್ಟೇ ಬ್ಯುಸಿ ಇದರು, ಏನೇ ಕೆಲಸ ಇದ್ದರು ಅಪ್ಪು ಅವರು ಫ್ಯಾಮಿಳಿಗಾಗಿ ಸಮಯ ಕೊಡುವುದನ್ನು ಕಡಿಮೆ ಮಾಡುತ್ತಿರಲಿಲ್ಲ..

ಎಲ್ಲರಿಗು ಅಪ್ಪು ಅವರು ಹೇಳುತ್ತಿದ್ದಿದ್ದು ಒಂದೇ ಮಾತು. “ಮೊದಲು ನಿಮ್ಮ ಫ್ಯಾಮಿಲಿನ ಪ್ರೀತಿಸಿ, ನಂತರ ನನ್ನನ್ನ ಪ್ರೀತಿಸಿ” ಅಂತ. ಅಪ್ಪು ಅವರು ಅಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾದರು. ಇವರದ್ದು ಲವ್ ಮ್ಯಾರೇಜ್, ಇಬ್ಬರು ಮಕ್ಕಳಿದ್ದಾರೆ ಎನ್ನುವ ವಿಚಾರ ನಮಗೆ ಗೊತ್ತಿದೆ. ಅಪ್ಪು ಅವರು ಇಲ್ಲವಾಗಿ ಒಂದು ತಿಂಗಳು ಕಳೆದ ನಂತರ ಅಪ್ಪು ಮತ್ತು ಅಶ್ವಿನಿ ಅವರ ಮದುವೆ ವಾರ್ಷಿಕೋತ್ಸವ ದಿನ ಬಂದಿತು.

ಅಪ್ಪು ಅಶ್ವಿನಿ ಅವರ ದಾoಪತ್ಯ ಜೀವನಕ್ಕೆ ಡಿಸೆಂಬರ್ 1ರಂದು 22 ವರ್ಷಗಳು ತುಂಬಿದೆ. 22 ವರ್ಷಗಳಿಂದ ಅಪ್ಪು ಅವರ ಜೊತೆ ಇದ್ದರು ಅಶ್ವಿನಿ. ಪ್ರತಿವರ್ಷ ಮದುವೆ ವಾರ್ಷಿಕೋತ್ಸವವನ್ನು ಬಹಳ ಸಂತೋಷದಿಂದ ಆಚರಿಸುತ್ತಿದ್ದರು. ಪ್ರತಿವರ್ಷ ಫಾರಿನ್ ಗೆ ಹೋಗಿ ಅಲ್ಲಿ ವೆಡ್ಡಿಂಗ್ ಆನಿವರ್ಸರಿ ಆಚರಿಸುತ್ತಿದ್ದರು.

ಇಲ್ಲದೆ ಹೋದರೆ ಮನೆಯಲ್ಲಿ ಸರಳವಾಗಿ ತಿಂಡಿಗಳನ್ನು ತಯಾರಿಸಿ ಆಚರಿಸುತ್ತಿದ್ದರು. ಆದರೆ ಈ ವರ್ಷ ಅಪ್ಪು ಅವರೇ ಜೊತೆಯಲ್ಲಿಲ್ಲ ಅನ್ನೋದು ಬಹಳ ನೋವಿನ ವಿಷಯ. ಆ ನೋವಿನ ದಿನವನ್ನು ಬಹಳ ದುಃಖದಿಂದಲೇ ಅಶ್ವಿನಿ ಅವರು ಕಳೆದಿರುತ್ತಾರೆ. ಡಿಸೆಂಬರ್ 1 ರಂದು ಆ ದಿನ ಅಪ್ಪ ಅಮ್ಮನ ಮದುವೆ ವಾರ್ಷಿಕೋತ್ಸವದ ದಿನ ವಿದೇಶದಲ್ಲಿರುವ ಮಗಳು ಧೃತಿ ಅವರು ಮಾಡಿರುವ ಕೆಲಸ ನಿಜಕ್ಕು ಮೆಚ್ಚುವಂಥದ್ದು.

ಅಮೆರಿಕಾದಲ್ಲಿರುವ ದೇವಸ್ಥಾನಕ್ಕೆ ಹೋಗಿ ಅಪ್ಪ ಅಮ್ಮನ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ ವಂದಿತ. ಇದರ ಜೊತೆಗೆ ಅಪ್ಪು ಅವರ ಮಗಳ ಅಮೇರಿಕಾದ ಸ್ನೇಹಿತರು, ಅಪ್ಪು ಅವರ ಫೋಟೋಗೆ ಪೂಜೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಅಶ್ವಿನಿ ಅವರು ಬಹಳ ನೋವಿನಲ್ಲಿರುತ್ತಾರೆ ಎಂದು ಗೊತ್ತಿದ್ದ ಮಗಳು, ಅಮ್ಮನಿಗೆ ಫೋನ್ ಮಾಡಿ ಸಾಂತ್ವನ ಹೇಳಿದ್ದಾಳೆ.

ಇನ್ನು ನಮ್ಮ ಅಪ್ಪು ಅವರಿಗೆ ಗೌರವ ನೀಡಲು, ಅಮೇರಿಕಾದ ಟೈಮ್ಸ್ ಸ್ಕ್ವೇರ್ ನಲ್ಲಿ ಅಪ್ಪು ಅವರ ಫೋಟೋವನ್ನು ದೊಡ್ಡ ಗೋಡೆಯ ಮೇಲೆ ಡಿಸ್ಪ್ಲೇ ಮಾಡಿದ್ದಾರೆ. ಯಾವ ಕನ್ನಡಿಗನಿಗೂ ಇಂತಹ ಗೌರವನ್ನು ಅಮೇರಿಕಾದಲ್ಲಿ ನೀಡಿರಲಿಲ್ಲ. ನಮ್ಮ ಪುನೀತ್ ರಾಜಕುಮಾರ್ ಅವರ ಸಾಧನೆ ಎಂಥದ್ದು ಎಂದು ಇದರಿಂದ ನಮಗೆ ತಿಳಿಯುತ್ತದೆ. ಇದೆಲ್ಲ ನೋವುಗಳಿಂದ ಹೊರಬರಬೇಕು, ಅಪ್ಪನ ಕನಸನ್ನು ನನಸು ಮಾಡಬೇಕು ಎಂದು ಮಗಳು ವಂದಿತ ತಾಯಿಗೆ ಧೈರ್ಯ ಹೇಳಿದ್ದಾಳೆ.

ಅಪ್ಪು ಅವರು ತಮ್ಮ ಹೆಂಡತಿ ಮತ್ತು ಮಕ್ಕಳಿಗೆ ಜೀವನದ ಮೌಲ್ಯಗಳನ್ನು ಅತ್ಯುತ್ತಮವಾಗಿ ಕಲಿಸಿಕೊಟ್ಟಿದ್ದಾರೆ. ಇದರಲ್ಲೇ ಮಕ್ಕಳ ವ್ಯಕ್ತಿತ್ವ ಏನು ಎನ್ನುವುದು ಗೊತ್ತಾಗುತ್ತದೆ. ಸದ್ಯ ಅಪ್ಪು ಅವರ ಮಗಳು ಅಮೇರಿಕಾದಲ್ಲಿ ತಮ್ಮ ವಿಧ್ಯಾಭ್ಯಾಸವನ್ನು ಮಾಡುತ್ತಿದ್ದು, ಇನ್ನು ಎರಡು ವರ್ಷಗಳ ನಂತರ ಭಾರತಕ್ಕೆ ಮರಳಲಿದ್ದಾರೆ ಎನ್ನಲಾಗಿದೆ.